ಕುಕನೂರು ತಾಲೂಕಿನ ಮಸಬಹಂಚಿನಾಳ ಬಳಿಯ ಕೊಪ್ಪಳ ರಸ್ತೆಯಲ್ಲಿ ಕೊಳತ ಸ್ಥಿತಿಯಲ್ಲಿ ಎರಡು ಶವಗಳು ಸೋಮವಾರ ಪತ್ತೆಯಾಗಿದ್ದು ಅಪಘಾತದಿಂದ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕುಕನೂರು:
ತಾಲೂಕಿನ ಮಸಬಹಂಚಿನಾಳ ಬಳಿಯ ಕೊಪ್ಪಳ ರಸ್ತೆಯಲ್ಲಿ ಕೊಳತ ಸ್ಥಿತಿಯಲ್ಲಿ ಎರಡು ಶವಗಳು ಸೋಮವಾರ ಪತ್ತೆಯಾಗಿದ್ದು ಅಪಘಾತದಿಂದ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಪಟ್ಟಣದ ರುದ್ರೇಶ ಗಂಗಾವತಿ (23) ಹಾಗೂ ರವಿ ತಟ್ಟಿ (32) ಮೃತರು. ಏ. 8ರಂದು ರಾತ್ರಿ ಇವರು ಬೈಕ್‌ನಲ್ಲಿ ಹೋಗುವಾಗ ಹಿಂಬದಿಯಿಂದ ಯಾವುದೋ ವಾಹನ ಗುದ್ದಿರಬೇಕು ಅಥವಾ ಇವರೇ ನಿಯಂತ್ರಣ ತಪ್ಪಿ ನೀರಿನ ಯೋಜನೆಯ ಪೈಪ್‌ಲೈನ್ ಅಳವಡಿಕೆಯ ತಗ್ಗಿನಲ್ಲಿ ಬಿದ್ದಿದ್ದಾರೆಂದು ಕುಕನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತದಲ್ಲಿ ಬೈಕ್ ಜಖಂ ಆಗಿದ್ದು ಅಪಘಾತ ನಡೆದಿರುವುದಕ್ಕೆ ಪುಷ್ಟಿ ನೀಡಿದೆ.
ನನ್ನ ಮಗ ಹಾಗೂ ಆತನ ಸ್ನೇಹಿತ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆಂದು ರುದ್ರೇಶ ತಾಯಿ ನೀಲಮ್ಮ ಗಂಗಾವತಿ ಕುಕನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.ಶಾಸಕ ರಾಯರಡ್ಡಿ ಸಾಂತ್ವನ:
ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಸ್ಥಳಕ್ಕೆ ಭೇಟಿ ನೀಡಿ, ಕುಟುಂಸ್ಥರಿಗೆ ಸಾಂತ್ವನ ಹೇಳಿದರು. ಶವಸಂಸ್ಕಾರದ ಬಳಿಕ ಸೂಕ್ತ ಪರಿಹಾರ ಕೊಡಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.