ನೀರಿಗೆ ಬಿದ್ದು ಇಬ್ಬರು ಸಾವು

| Published : Aug 17 2024, 12:54 AM IST

ಸಾರಾಂಶ

ಬೇಲೂರು ತಾಲೂಕಿನ ಬಳ್ಳೂರು ಗ್ರಾಮದಲ್ಲಿ ಮೀನು ಹಿಡಿಯಲು ಹೋಗಿ ಕಾಲುಜಾರಿ ನೀರಿಗೆ ಬಿದ್ದು ಇಬ್ಬರು ಬಾಲಕರು ಸಾವನ್ನಪ್ಪಿದ್ದಾರೆ. ಮಹೇಶ್ ಎಂಬುವರ ಮಗ ಶ್ರೀಕಾಂತ್ (15 ವರ್ಷ) ಹಾಗೂ ಚಿಕ್ಕವಯಸ್ಸಿನಲ್ಲಿ ತಂದೆ ತಾಯಿಯನ್ನು ಕಳೆದುಕೊಂಡಂತಹ ವಿಜಯ್ (18 ವರ್ಷ) ಗ್ರಾಮದ ದೊಡ್ಡ ಕೆರೆಯಲ್ಲಿ ಮೀನು ಹಿಡಿಯಲು ಹೋದ ಸಂದರ್ಭದಲ್ಲಿ ಜೋರಾಗಿ ಮಳೆ ಬರುತ್ತಿದ್ದ ಕಾರಣ ಪಕ್ಕದಲ್ಲಿದ್ದಂತಹ ಮರದ ಬಳಿ ನಿಂತ ಸಂದರ್ಭದಲ್ಲಿ ವಿಜಯ್ ಚಪ್ಪಲಿ ಜಾರಿ ನೀರಿಗೆ ಬಿದಿದೆ. ಅದನ್ನು ತರಲು ಹೋದಾಗ ಶ್ರೀಕಾಂತ್ ನೀರಿಗೆ ಬಿದ್ದಿದ್ದಾನೆ. ದಡದಲ್ಲಿದ್ದ ವಿಜಯ್ ಆತನನ್ನು ರಕ್ಷಿಸಲು ಹೋಗಿ ತಾನು ಸಹ ಮುಳುಗಿ ಸಾವನ್ನಪ್ಪಿದ್ದಾನೆ.

ಕನ್ನಡಪ್ರಭ ವಾರ್ತೆ ಬೇಲೂರು

ಮೀನು ಹಿಡಿಯಲು ಹೋಗಿ ಕಾಲುಜಾರಿ ನೀರಿಗೆ ಬಿದ್ದು ಇಬ್ಬರು ಬಾಲಕರು ಸಾವನ್ನಪ್ಪಿರುವ ಘಟನೆ ತಾಲೂಕಿನ ಬಳ್ಳೂರು ಗ್ರಾಮದಲ್ಲಿ ನಡೆದಿದೆ.

ಮಹೇಶ್ ಎಂಬುವರ ಮಗ ಶ್ರೀಕಾಂತ್ (15 ವರ್ಷ) ಹಾಗೂ ಚಿಕ್ಕವಯಸ್ಸಿನಲ್ಲಿ ತಂದೆ ತಾಯಿಯನ್ನು ಕಳೆದುಕೊಂಡಂತಹ ವಿಜಯ್ (18 ವರ್ಷ) ಗ್ರಾಮದ ದೊಡ್ಡ ಕೆರೆಯಲ್ಲಿ ಮೀನು ಹಿಡಿಯಲು ಹೋದ ಸಂದರ್ಭದಲ್ಲಿ ಜೋರಾಗಿ ಮಳೆ ಬರುತ್ತಿದ್ದ ಕಾರಣ ಪಕ್ಕದಲ್ಲಿದ್ದಂತಹ ಮರದ ಬಳಿ ನಿಂತ ಸಂದರ್ಭದಲ್ಲಿ ವಿಜಯ್ ಚಪ್ಪಲಿ ಜಾರಿ ನೀರಿಗೆ ಬಿದಿದೆ. ಅದನ್ನು ತರಲು ಹೋದಾಗ ಶ್ರೀಕಾಂತ್ ನೀರಿಗೆ ಬಿದ್ದಿದ್ದಾನೆ. ದಡದಲ್ಲಿದ್ದ ವಿಜಯ್ ಆತನನ್ನು ರಕ್ಷಿಸಲು ಹೋಗಿ ತಾನು ಸಹ ಮುಳುಗಿ ಸಾವನ್ನಪ್ಪಿದ್ದಾನೆ.

ಇಬ್ಬರಿಗೂ ಸಹ ಈಜು ಬರದ ಕಾರಣ ಮುಳುಗಿದ್ದ ಅವರನ್ನು ಕಾಪಾಡಲು ಸಾಧ್ಯವಾಗಿಲ್ಲ. ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸುಮಾರು ಅರ್ಧ ಗಂಟೆಗಳ ಕಾಲ ಹುಡುಕಿ ಮೃತದೇಹಗಳನ್ನು ಹೊರತೆಗೆದರು. ನಂತರ ಜಿಲ್ಲಾ ಆಸ್ಪತ್ರೆಗೆ ಎರಡು ಶವಗಳನ್ನು ಸಾಗಿಸಲಾಯಿತು. ಬೇಲೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.