ಕನ್ನಡಪ್ರಭ ವಾರ್ತೆ ಟೇಕಲ್ಮಾಲೂರು-ಬಂಗಾರಪೇಟೆಯ ಗಡಿಭಾಗ ಮಾಸ್ತಿ ಹೋಬಳಿಯ ದಿನ್ನಳ್ಳಿ ಗ್ರಾಪಂ ವ್ಯಾಪ್ತಿಯ ಕೊತ್ತೂರಿನಲ್ಲಿ ಇಬ್ಬರು ಮಕ್ಕಳು ಜಮೀನಿನಲ್ಲಿ ನಿರ್ಮಿಸಿದ್ದ ಜಿನಿಗುಕುಂಟೆಗೆ ಬಿದ್ದು ಸಾವನ್ನಪ್ಪಿರುವ ಘಟನೆ ಸೋಮವಾರ ಸಂಜೆ ನಡೆದಿದೆ. ದೇವಕಿರಣ್ (೧೨) ಹಾಗೂ ವಿನುತ್(೧೦) ಗುರುತಿಸಲಾಗಿದೆ. ಕೊತ್ತೂರಿನಲ್ಲಿ ರೈತ ವೆಂಕಟೇಶ್ ಜಮೀನಿನಲ್ಲಿ ನೀರು ಜಿನಿಗುತ್ತಿದ್ದ ಹಿನ್ನೆಲೆಯಲ್ಲಿ ಹಳ್ಳ ತೋಡಿ, ಜಿನಿಗೂ ಕುಂಟೆ ನಿರ್ಮಿಸಿದ್ದು ಜಾನುವಾರುಗಳಿಗೆ ನೀರು ಕುಡಿಯಲು ಹಾಗೂ ಇತರೆ ಕೃಷಿ ಚಟುವಟಿಕೆಗಳಿಗೆ ನೀರನ್ನು ಬಳಸಲಾಗುತ್ತಿತ್ತು, ಇಬ್ಬರು ಮಕ್ಕಳು ಒಂದೇ ಕುಟುಂಬದ ಸಹೋದರರಾಗಿದ್ದು ಶಾಲೆ ರಜೆಯಾದ್ದರಿಂದ ಜಿನುಗು ಕುಂಟೆಗೆ ಈಜಲು ಹೋಗಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾರೆ. ಜಿನುಗು ಕುಂಟೆಯ ಮಾಲೀಕ ವೆಂಕಟೇಶ್‌ ಮಗ ಅಶ್ವಥಪ್ಪನ ಮಗ ವಿನುತ್ ೩ನೇ ತರಗತಿ ಮೃತ ಮಗುವಾಗಿದ್ದು ಬಂಗಾರಪೇಟೆ ವಸತಿ ನಿಲಯದಲ್ಲಿ ಓದುತ್ತಿದ್ದ. ಮಗಳು ಭಾಗ್ಯ ಈಕೆ ಕಾಮಸಮುದ್ರ ಬಳಿ ಬಗ್ಗಟ್ಟಿ ಗ್ರಾಮದವರಾಗಿದ್ದು ಈಕೆಯ ಮಗ ದೇವಕಿರಣ್ ೬ನೇ ತರಗತಿ ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ಓದುತ್ತಿದ್ದ ಎಂದು ತಿಳಿದುಬಂದಿದೆ.