ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಸಮಾಜವು ಮಹಿಳೆಯರಿಗೆ ಆತ್ಮವಿಶ್ವಾಸ ತುಂಬಿದರೆ ಉನ್ನತ ಸ್ಥಾನಕ್ಕೆ ಹೋಗಲು ಸಾಧ್ಯವಾಗುತ್ತದೆ. ನಾಯಕತ್ವ ಗುಣ ಹೆಣ್ಣು ಮಕ್ಕಳಿಗೆ ಹುಟ್ಟಿನಿಂದಲೇ ಬರುತ್ತದೆ ಎಂದು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಹೇಳಿದರು.ನಗರದ ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜಿನಲ್ಲಿ ಶನಿವಾರ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಪುರುಷರಿಗೆ ನಾಯಕತ್ವ ಗುಣ ಬರಬೇಕಾದರೆ ಸತತ ಪ್ರಯತ್ನದ ಬಳಿಕ ಈ ಗುಣ ಒಲಿಯುತ್ತದೆ. ಆದರೆ ಮಹಿಳೆಗೆ ಮನೆಯ ನಿರ್ವಹಣೆಯೇ ಅವಳಿಗೆ ಆ ಗುಣವನ್ನು ಕಲಿಸಿಕೊಡುತ್ತದೆ. ಆದ್ದರಿಂದ ಮಹಿಳೆಯರಿಗೆ ಪ್ರೋತ್ಸಾಹ, ಆತ್ಮವಿಶ್ವಾಸ ತುಂಬಿದರೆ ಸಮಾಜದ ಉನ್ನತ ಸ್ಥಾನಕ್ಕೆ ಏರಲು ಅನುಕೂಲವಾಗುತ್ತದೆ ಎಂದರು.ಮಹಿಳೆಯರಿಗೆ ಕೊಟ್ಟ ಅವಕಾಶ ಸದ್ಬಳಕೆ ಮಾಡಿಕೊಂಡಿರುವ ಬಹಳಷ್ಟು ನಿದರ್ಶನಗಳು ದೊರೆಯುತ್ತವೆ. ಲೋಕಸಭಾ, ದೇಶದ ಎಲ್ಲಾ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 50ರಷ್ಟು ಮೀಸಲಾತಿ ಜಾರಿಯಾಗಬೇಕು. ಅಮೆರಿಕಾದಲ್ಲಿಯೇ ಈವರೆಗೂ ಮಹಿಳೆಯರು ಅಧ್ಯಕ್ಷರಾಗಿಲ್ಲ. ಆದರೆ ಭಾರತದಲ್ಲಿ ಮಹಿಳೆ ಪ್ರಧಾನಿಯಾಗಿದ್ದಾರೆ. ಇಂದಿರಾ ಗಾಂಧಿ ಅವರು ಜನರಿಂದ ಆಯ್ಕೆಯಾಗಿ ಪ್ರಧಾನಿಯಾಗಿದ್ದಾಗಿ ಹೇಳಿದರು.ಭೂಮಿಯೇ ಸ್ವರ್ಗ. ಆದರೆ, ಅದನ್ನು ನರಕ ಮಾಡಲಾಗುತ್ತಿದೆ. ಪ್ರೀತಿ-ಸ್ನೇಹದಿಂದ ಸ್ವರ್ಗ ಸೃಷ್ಟಿಸಬೇಕಿದೆ. ಪ್ರತಿಯೊಬ್ಬರು ಸಮಾಜ ಕಟ್ಟುವುದರೊಂದಿಗೆ ಸಮಾಜ ಜೋಡಿಸುವ ಕೆಲಸವನ್ನೂ ಮಾಡಬೇಕಿದೆ ಎಂದರು.ಇಸ್ರೋ ನಿವೃತ್ತ ವಿಜ್ಞಾನಿ ಟಿ.ಕೆ. ಅನುರಾಧಾ ಸನ್ಮಾನ ಸ್ವೀಕರಿಸಿ ಮಾತನಾಡಿ, ಭಾರತವು ಆರ್ಥಿಕತೆಯಲ್ಲಿ ಮುಂದೆ ಬರಲು ಮಹಿಳೆಯರು ನಾಯಕತ್ವ ತೆಗೆದುಕೊಳ್ಳಬೇಕು. ಆದರೆ, ಪೂರ್ಣಪ್ರಮಾಣದಲ್ಲಿ ಮಹಿಳಾ ಸಹಭಾಗಿತ್ವಕ್ಕಾಗಿ ನೀತಿ- ನಿಯಮಗಳಲ್ಲಿರುವ ವ್ಯತ್ಯಾಸವನ್ನು ಸರಿಪಡಿಸಬೇಕಿದೆ ಎಂದರು.ಈಗಿರುವ ಸಂವಿಧಾನದಲ್ಲಿ ಕೆಲ ನೀತಿ-ನಿಯಮಗಳು ಮಹಿಳೆಯರಿಗೆ ಪೂರಕವಾಗಿಲ್ಲ. ಇದು ಸರಿಯಾಗಬೇಕು. ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರಿಗೆ ಉತ್ತಮ ವಾತಾವರಣ ಸೃಷ್ಟಿಸಬೇಕು. ಹೆರಿಗೆ, ಗರ್ಭಿಣಿಯಂತಹ ಸನ್ನಿವೇಶದಲ್ಲಿ ಮಹಿಳೆಯರಿಗೆ ರಜೆ ಸೇರಿದಂತೆ ಇನ್ನಿತರ ಸೌಲಭ್ಯ ಕಲ್ಪಿಸಿಕೊಡಬೇಕು. ಕೆಲಸದಲ್ಲಿ ಪ್ರೋತ್ಸಾಹದೊಂದಿಗೆ ತರಬೇತಿ ನೀಡಬೇಕು ಎಂದು ಸಲಹೆ ನೀಡಿದರು. ಖಾದರ್ ಹೈಸ್ಟ್ರೆಚ್ ಚೀಫ್‌ಕಮಿಷನರ್ನನ್ನೊಬ್ಬನಿಗೆ ಸ್ಕೌಟ್ಸ್ ಮತ್ತು ಗೈಡ್ಸ್ ನ ಮುಖ್ಯ ಆಯುಕ್ತನಾಗಿ ಕೆಲಸ ಮಾಡಲಾಗದು. ನಾನು ಈ ಹುದ್ದೆಯಲ್ಲಿರಲು ಇಷ್ಟಪಡುವುದಿಲ್ಲ. ಹಾಗಂತ ಮಧ್ಯದಲ್ಲಿ ಓಡಿ ಹೋಗುವುದಿಲ್ಲ. ಬದಲಿಗೆ ನಾವು ಎರಡನೇ ಹಂತದ ನಾಯಕರನ್ನು ತಯಾರಿಸಬೇಕು ಎಂಬುದು ನಮ್ಮ ಉದ್ದೇಶ.ಯು.ಟಿ. ಖಾದರ್ ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ರಾಷ್ಟ್ರಪತಿಗಳಿಂದ ಉನ್ನತ ಪ್ರಶಸ್ತಿ ಪಡೆದಿದ್ದಾರೆ. ರಾಷ್ಟ್ರೀಯ ಜಂಬೂರಿಗಳಲ್ಲಿ ಪಾಲ್ಗೊಂಡಿದ್ದಾರೆ. ಉಡುಪಿ, ದ.ಕನ್ನಡ, ದಾವಣಗೆರೆ ಮಾದರಿಯಾಗಿದೆ. ಅಂತಹ ಪ್ರದೇಶದಿಂದ ಬಂದ ಖಾದರ್ ಅವರನ್ನು ಹೈಸ್ಟ್ರೆಚ್ ಚೀಪ್ ಕಮಿಷನರ್‌ಆಗಿ ನೇಮಕ ಮಾಡಲಾಗಿದೆ. ಇಂದು ಶ್ರೀಗಳ ಆಶೀರ್ವಾದಪಡೆದು ಈ ಮಹಾನ್ ಅಂತಾರಾಷ್ಟ್ರೀಯ ಸಂಸ್ಥೆಯನ್ನು ಇಡೀ ದೇಶದಲ್ಲಿ ಮುನ್ನಡೆಸಬೇಕು ಎಂದು ಅವರು ಕೋರಿದರು.ಸ್ಕೌಟ್ಸ್ ಮತ್ತು ಗೈಡ್ಸ್ ನ ರಾಜ್ಯ ಮುಖ್ಯ ಆಯುಕ್ತ ಹಾಗೂ ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ ಮಾತನಾಡಿ, ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ಶೇ. 50 ರಷ್ಟು ಗಂಡು ಮಕ್ಕಳು, 50ರಷ್ಟು ಹೆಣ್ಣು ಮಕ್ಕಳಿಗೆ ಮೀಸಲಾತಿ ನೀಡಲಾಗಿದೆ. ಈ ಹಿದೆ ಶೇ. 30ರಷ್ಟು ಹೆಣ್ಣು ಮಕ್ಕಳಿದ್ದರೆ, ಶೇ. 70ರಷ್ಟು ಗಂಡು ಮಕ್ಕಳು ಇರುತ್ತಿದ್ದರು. ಆದರೆ ಈಗ ಶೇ. 55ರಷ್ಟು ಹೆಣ್ಣು ಮಕ್ಕಳಿದ್ದರೆ, ಶೇ. 45ರಷ್ಟು ಗಂಡು ಮಕ್ಕಳಿದ್ದಾರೆ ಎಂದರು.ಸ್ಕೌಟ್ಸ್ ಮತ್ತು ಗೈಡ್ಸ್ ಬೆಳೆಯಬೇಕು. ಮಕ್ಕಳು ಒಳ್ಳೆಯ ಪ್ರಜೆಯಾಗಬೇಕು, ಅಧ್ಯಾತ್ಮಿಕ, ಶಿಸ್ತು ಮತ್ತು ಸಮಯ ಪ್ರಜ್ಞೆ ತಿಳಿದುಕೊಳ್ಳಬೇಕು ಎಂದು ಸುತ್ತೂರು ಶ್ರೀಗಳು ಆಶೀರ್ವದಿಸಿದ್ದಾರೆ. ಸುತ್ತೂರಿನಲ್ಲಿ 1 ಲಕ್ಷಕ್ಕೂ ಹೆಚ್ಚು ಮಕ್ಕಳು ಶ್ರೀಗಳ ಆಶ್ರಯದಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಶ್ರೀಗಳ ಸಮ್ಮುಖದಲ್ಲಿ ರಾಜ್ಯದಲ್ಲಿ ಮೊದಲ ಬಾರಿಗೆ ಕಾರ್ಯಕ್ರಮ ನಡೆಯುತ್ತಿರುವುದು ಸಂತೋಷವಾಗಿದೆ ಎಂದರು.ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಆಯುಕ್ತ ಎಂ.ಎ. ಖಾಲಿದ್, ರಾಜ್ಯ ಕೋಶಾಧಿಕಾರಿ ಟಿ. ಪ್ರಭಾಕರ್, ಕಾರ್ಯದರ್ಶಿ ಕೆ. ಗಂಗಪ್ಪಗೌಡ, ರಾಜ್ಯ ಸಹಾಯಕ ಆಯುಕ್ತ ಬಿ.ಕೆ. ಬಸವರಾಜ, ಉಪಾಧ್ಯಕ್ಷೆ ಪುಷ್ಪವಲ್ಲಿ ಮೊದಲಾದವರು ಇದ್ದರು.