ಬಾಡಿಗೆ ಮನೆಯಲ್ಲಿ ಸಣ್ಣ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದ ಮೂಡುಬೆಳ್ಳೆಯ ನೆಲ್ಲಿಕಟ್ಟೆಯ ನಿವಾಸಿ ಸುಗಂಧಿ ಅವರಿಗೆ ‘ಸಮಾನ ಮನಸ್ಕರ ತಂಡ ಉಡುಪಿ’ ವತಿಯಿಂದ ನಿರ್ಮಿಸಲಾದ ಮನೆ ಹಸ್ತಾಂತರಿಸಲಾಯಿತು.
ಉಡುಪಿ: ಆಧಾರಸ್ತಂಭವನ್ನೇ ಕಳೆದುಕೊಂಡು ಬಾಡಿಗೆ ಮನೆಯಲ್ಲಿ ಸಣ್ಣ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದ ಮೂಡುಬೆಳ್ಳೆಯ ನೆಲ್ಲಿಕಟ್ಟೆಯ ನಿವಾಸಿ ಸುಗಂಧಿ ಅವರಿಗೆ ‘ಸಮಾನ ಮನಸ್ಕರ ತಂಡ ಉಡುಪಿ’ ವತಿಯಿಂದ ನಿರ್ಮಿಸಲಾದ ಮನೆ ಹಸ್ತಾಂತರಿಸಲಾಯಿತು.
ಮನೆಯ ಕೀಲಿ ಕೈ ಹಸ್ತಾಂತರಿಸಿ ಮಾತನಾಡಿದ ಸಮಾಜ ಸೇವಕ ಕಟಪಾಡಿ ಶಶಿಧರ ಪುರೋಹಿತ್ ಅವರು, ಸಮಾಜದಲ್ಲಿರುವ ಕಡುಬಡತನದ ಕುಟುಂಬವನ್ನು ಗುರುತಿಸಿ ಅವರಿಗೆ ಮನೆ ನಿರ್ಮಿಸಿಕೊಡುವ ಕಾರ್ಯವನ್ನು ಸಮಾನ ಮನಸ್ಕರ ತಂಡ ಕಳೆದ ಮೂರುವರೆ ವರ್ಷಗಳಿಂದ ಮಾಡುತ್ತಿದೆ. ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈವರೆಗೆ 35 ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರ ಮಾಡಿದ್ದೇವೆ ಎಂದು ಮಾಹಿತಿ ನೀಡಿದರು.ಕಡುಬಡತನದಲ್ಲಿ ಬದುಕು ಸಾಗಿಸುತ್ತಿರುವ ಕುಟುಂಬವನ್ನು ಆಯ್ಕೆ ಮಾಡಿಕೊಂಡು ಅವರಿಗೆ ನಮ್ಮ ತಂಡದ ದಾನಿಗಳ ಸಹಕಾರದೊಂದಿಗೆ ಮನೆ ಕಟ್ಟಿಸಿಕೊಡುತ್ತಿದ್ದೇವೆ ಎಂದು ವಿವರಿಸಿದರು.ಎಸ್.ಕೆ. ಗೋಲ್ಡ್ ಸ್ಮಿತ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಉಪೇಂದ್ರ ಆಚಾರ್ಯ ಪೆರ್ಡೂರು ಮಾತನಾಡಿ, ಸರ್ಕಾರ ಮಾಡುವ ಕಾರ್ಯವನ್ನು ಸಮಾನ ಮನಸ್ಕರ ತಂಡ ಮಾಡುತ್ತಿದೆ. ಇದು ದೇಶದಲ್ಲಿಯೇ ಮಾದರಿಯಾದ ಕಾರ್ಯ. ಮೂರವರೆ ವರ್ಷದಲ್ಲಿ 35 ಮನೆಗಳನ್ನು ಕಟ್ಟಿಕೊಡುವುದು ಸಾಮಾನ್ಯವಾದ ವಿಷಯವಲ್ಲ ಎಂದರು.
ಪುತ್ತೂರು ಶಿಲ್ಪಿ ಮಾಧವ ಆಚಾರ್ಯ ಮಾರ್ಗದರ್ಶನ, ನಾಗೇಶ್ ಆಚಾರ್ಯ ನೆಲ್ಲಿಕಟ್ಟೆ, ಶೇಖರ ಆಚಾರ್ಯ ಕುಕ್ಕೆಹಳ್ಳಿ, ಸುಮಿತ್ರ ಮತ್ತು ನರಸಿಂಹ ಆಚಾರ್ಯ ಬೆಳ್ಳಂಪಳ್ಳಿ, ವೈ. ಎ. ಬಾಳ್ಳಟ್ಟ ಮೊದಲಾದವರ ನಿರ್ವಹಣೆಯಲ್ಲಿ ಈ ಮನೆ ನಿರ್ಮಿಸಲಾಗಿತ್ತು.