ಉಡುಪಿ: ವಿದ್ಯಾನಿಧಿ, ಸಹಾಯಧನ ವಿತರಣೆ

| Published : Jun 20 2024, 01:01 AM IST / Updated: Jun 20 2024, 01:02 AM IST

ಸಾರಾಂಶ

ಸ್ಥಾಪಕ ಅಧ್ಯಕ್ಷ ಮಾಧವ ಉಪಾಧ್ಯಾಯ, ಶ್ರೀಕಾಂತ ಕೆ. ಆರಿಮಣಿತ್ತಾಯ ಅವರನ್ನು ಗೌರವಿಸಿದರು. ೮.೫ ಲಕ್ಷ ರು.ಗೂ ಅಧಿಕ ಮೊತ್ತದ ವಿದ್ಯಾನಿಧಿ ಸಹಾಯಧನ ಹಸ್ತಾಂತರಿಸಲಾಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಇಲ್ಲಿನ ಪುತ್ತೂರು ವಿದ್ಯಾನಿಧಿ ಸಮಿತಿ ವಾರ್ಷಿಕ ಮಹಾಸಭೆ ಹಾಗೂ ವಿವಿಧ ವಿದ್ಯಾದಾನ ವಿತರಣೆ ವಿದ್ಯಾ ದೇಗುಲದ ಸುಜ್ಞಾನ ಮಂಟಪದಲ್ಲಿ ಇತ್ತೀಚೆಗೆ ನಡೆಯಿತು.

ಮುಖ್ಯ ಅತಿಥಿಯಾಗಿದ್ದ ಉದ್ಯಮಿ ಶ್ರೀಕಾಂತ ಕೆ. ಅರಿಮಣಿತ್ತಾಯ ಮಾತನಾಡಿ, ಶಾರೀರಿಕ, ಬೌದ್ಧಿಕ, ಮಾನಸಿಕ ಮತ್ತು ದೈವಿಕ ಎಂಬೀ ನಾಲ್ಕು ಶಕ್ತಿಗಳ ಸಮತೋಲನ ಸಾಧಿಸಿದಲ್ಲಿ ಯಶಸ್ವಿಯಾಗಬಹುದು ಎಂದು ವಿವರಿಸಿದರು.

ಕರ್ಣಾಟಕ ಬ್ಯಾಂಕ್ ಉಡುಪಿ ಪ್ರಾದೇಶಿಕ ಕಚೇರಿ ಎಜಿಎಂ ವಾದಿರಾಜ ಕೆ., ೨೦೦೫ರಿಂದಲೂ ಬ್ಯಾಂಕ್ ಈ ಸಂಸ್ಥೆಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದು, ಮುಂದೆಯೂ ಸಹಕಾರ ನೀಡುವುದಾಗಿ ತಿಳಿಸಿದರು.

ಸ್ಥಾಪಕ ಅಧ್ಯಕ್ಷ ಮಾಧವ ಉಪಾಧ್ಯಾಯ, ಶ್ರೀಕಾಂತ ಕೆ. ಆರಿಮಣಿತ್ತಾಯ ಅವರನ್ನು ಗೌರವಿಸಿದರು. ೮.೫ ಲಕ್ಷ ರು.ಗೂ ಅಧಿಕ ಮೊತ್ತದ ವಿದ್ಯಾನಿಧಿ ಸಹಾಯಧನ ಹಸ್ತಾಂತರಿಸಲಾಯಿತು.

ವಿದ್ಯಾರ್ಥಿಗಳಾದ ಪ್ರಾರ್ಥನಾ ಮತ್ತು ಆದ್ಯ ಭಟ್ ಕೆ. ಪ್ರಾರ್ಥಿಸಿದರು. ಶ್ರೀಪಾದ ಹೆಬ್ಬಾರ್ ಮತ್ತು ಪುರಂದರ ರಾವ್ ಪರಿಚಯಿಸಿದರು. ದೇವರಾಜ ಭಟ್ ಸ್ವಾಗತಿಸಿದರು. ಹರಿಪ್ರಸಾದ್ ಪ್ರಸ್ತಾವನೆಗೈದರು.

ವಾಸುದೇವ ಭಟ್, ಹಯವದನ ಭಟ್ ಮತ್ತು ವಿಷ್ಣು ಪ್ರಸಾದ್, ಷಣ್ಮುಖರಾಜ್, ಸುಷೇಣ ಬಾಯರಿ ಮತ್ತು ಕೋಶಾಧಿಕಾರಿ ಕೃಷ್ಣರಾಜ ರಾವ್ ಸಹಕರಿಸಿದರು. ಅಧ್ಯಕ್ಷೆ ವೀಣಾ ಜಿ. ಹತ್ವಾರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಮುರಳಿಧರ ಭಟ್ ವಂದಿಸಿದರು. ಡಾ. ಟಿ. ಶ್ರೀಧರ ಬಾಯರಿ ನಿರೂಪಿಸಿದರು.