ಸಾರಾಂಶ
ಉಡುಪಿ ಮಹಾತ್ಮಾ ಗಾಂಧಿ ಮೆಮೇರಿಯಲ್ ಕಾಲೇಜಿನ ಗಾಂಧಿ ಅಧ್ಯಯನ ಕೇಂದ್ರದ ನೇತೃತ್ವದಲ್ಲಿ ಗುರುವಾರ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಜಯಂತಿ, ದೇಶದ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನಾಚರಣೆ ಹಾಗೂ ಅಂತಾರಾಷ್ಟ್ರೀಯ ಅಹಿಂಸಾ ದಿನ ಆಚರಿಸಲಾಯಿತು.
ಉಡುಪಿ: ನಗರದ ಮಹಾತ್ಮಾ ಗಾಂಧಿ ಮೆಮೇರಿಯಲ್ ಕಾಲೇಜಿನ ಗಾಂಧಿ ಅಧ್ಯಯನ ಕೇಂದ್ರದ ನೇತೃತ್ವದಲ್ಲಿ ಗುರುವಾರ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಜಯಂತಿ, ದೇಶದ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನಾಚರಣೆ ಹಾಗೂ ಅಂತಾರಾಷ್ಟ್ರೀಯ ಅಹಿಂಸಾ ದಿನ ಆಚರಿಸಲಾಯಿತು.
ಉಡುಪಿ ಡಾ.ಜಿ.ಶಂಕರ್ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಸಮಾಜಶಾಸ್ತ್ರ ವಿಭಾಗ ಮುಖ್ಯಸ್ಥ ಡಾ.ರಾಜೇಂದ್ರ ಕೆ. ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿ, ಗಾಂಧೀಜಿ ಜೀವನವು ಇಂದಿನ ಆಧುನಿಕ ಕಾಲದಲ್ಲಿ ಬಹಳ ದೊಡ್ಡ ಸಂದೇಶವಾಗಬಲ್ಲದು. ಗಾಂಧೀಜಿಯ ಬಾಲ್ಯ, ವಿದ್ಯಾಭ್ಯಾಸ, ವಕೀಲಿಕೆ, ಸತ್ಯ-ಅಹಿಂಸೆ ಮೊದಲಾದ ನೈತಿಕ ಮೌಲ್ಯಗಳನ್ನು ಸ್ವಯಂ ಅಳವಡಿಸಿಕೊಳ್ಳುವಲ್ಲಿನ ಪ್ರಯತ್ನ, ಸಾಮಾಜಿಕ ಪಿಡುಗುಗಳ ವಿರುದ್ಧ ಹೋರಾಟ, ರಚನಾತ್ಮಕ ಕಾರ್ಯಗಳ ಅಳವಡಿಕೆ ಎಲ್ಲವೂ ನಮಗೆ ಇಂದೂ ದಾರಿದೀಪವಾಗಿವೆ. ಶಾಸ್ತ್ರೀಜಿಯವರೂ ಅಂತಹ ಉನ್ನತ ಆದರ್ಶಗಳನ್ನು ಬಾಳಿ ಬದುಕಿದವರು ಎಂದು ಅಭಿಪ್ರಾಯಪಟ್ಟರು.ಕಾಲೇಜಿನ ಪ್ರಾಂಶುಪಾಲೆ ಪ್ರೊ. ವನಿತಾ ಮಯ್ಯ ಅಧ್ಯಕ್ಷತೆ ವಹಿಸಿದರು. ಉಪಪ್ರಾಂಶುಪಾಲ ಡಾ. ಎಂ.ವಿಶ್ವನಾಥ್ ಪೈ, ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ. ದೇವಿದಾಸ್ ಎಸ್. ನಾಯ್ಕ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಪ್ರೊ. ಮಾಲತಿ ದೇವಿ ಎ. ಉಪಸ್ಥಿತರಿದ್ದು ಮೌಲಿಕ ಸಂದೇಶಗಳನ್ನು ನೀಡಿದರು.
ಗಾಂಧಿ ಅಧ್ಯಯನ ಕೇಂದ್ರದ ಸಂಯೋಜಕ ಯು. ವಿನಿತ್ ರಾವ್ ಸ್ವಾಗತಿಸಿ, ವಂದಿಸಿದರು. ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ಸುಚಿತ್ ಕೋಟ್ಯಾನ್ ನಿರೂಪಿಸಿದರು. ಸಂಸ್ಕೃತ ವಿಭಾಗ ಮುಖ್ಯಸ್ಥೆ ಡಾ. ವಸುಮತಿ ಭಟ್ ನೇತೃತ್ವದಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಂದ ರಾಮ್ ಧುನ್ ಕಾರ್ಯಕ್ರಮ ನಡೆಯಿತು.