ಉಡುಪಿ ಜಿಪಂಗೆ ಕೇಂದ್ರಿಂದ 2 ಕೋಟಿ ರು. ಬಹುಮಾನ! ಕೊಡಗಿನ ಗಾಳಿಬೀಡು ಗ್ರಾಂಪಗೆ 1 ಕೋಟಿ ರು.

| Published : Dec 09 2024, 10:39 AM IST

Money Horoscope

ಸಾರಾಂಶ

ಕೇಂದ್ರ ಸರ್ಕಾರದ ಪಂಚಾಯತ್ ರಾಜ್ ಇಲಾಖೆಯಿಂದ ನೀಡಲಾಗುವ ರಾಷ್ಟ್ರೀಯ ಪುರಸ್ಕಾರಕ್ಕೆ ರಾಜ್ಯದ ಕೊಡಗು ಜಿಲ್ಲೆ, ಮಡಿಕೇರಿ ತಾಲೂಕಿನ ಗಾಳಿಬೀಡು ಗ್ರಾಪಂ ಪ್ರಥಮ ಬಹುಮಾನ ಹಾಗೂ ಉಡುಪಿ ಜಿಪಂ ತೃತೀಯ ಬಹುಮಾನ ಗೌರವಕ್ಕೆ ಭಾಜನವಾಗಿವೆ.

ಬೆಂಗಳೂರು : ಕೇಂದ್ರ ಸರ್ಕಾರದ ಪಂಚಾಯತ್ ರಾಜ್ ಇಲಾಖೆಯಿಂದ ನೀಡಲಾಗುವ ರಾಷ್ಟ್ರೀಯ ಪುರಸ್ಕಾರಕ್ಕೆ ರಾಜ್ಯದ ಕೊಡಗು ಜಿಲ್ಲೆ, ಮಡಿಕೇರಿ ತಾಲೂಕಿನ ಗಾಳಿಬೀಡು ಗ್ರಾಪಂ ಪ್ರಥಮ ಬಹುಮಾನ ಹಾಗೂ ಉಡುಪಿ ಜಿಪಂ ತೃತೀಯ ಬಹುಮಾನ ಗೌರವಕ್ಕೆ ಭಾಜನವಾಗಿವೆ.

 ‘ಬಡತನ ಮುಕ್ತ ಮತ್ತು ಜೀವನೋಪಾಯ ಅಭಿವೃದ್ಧಿ’ಗಾಗಿ ಗಾಳಿಬೀಡು ಪಂಚಾಯಿತಿ ಪ್ರಥಮ ಸ್ಥಾನ ಗಳಿಸಿದ್ದು, 1 ಕೋಟಿ ರು. ನಗದು ಬಹುಮಾನದೊಂದಿಗೆ ‘ದೀನ್ ದಯಾಳ್ ಉಪಧ್ಯಾಯ ಪಂಚಾಯತ್ ಸತತ ವಿಕಾಸ ಪುರಸ್ಕಾರ’ಕ್ಕೆ ಪಾತ್ರವಾಗಿದೆ. ‘ಒಟ್ಟಾರೆ ಸಾಧನೆಗಾಗಿ’ ಉಡುಪಿ ಜಿಪಂ ತೃತೀಯ ಸ್ಥಾನ ಗಳಿಸಿದ್ದು, 2 ಕೋಟಿ ರು. ನಗದು ಬಹುಮಾನದೊಂದಿಗೆ ‘ನಾನಾಜೀ ದೇಶಮುಖ್ ಸರ್ವೋತ್ತಮ ಪಂಚಾಯತ್ ಸತತ ವಿಕಾಸ ಪುರಸ್ಕಾರ’ಕ್ಕೆ ಪಾತ್ರವಾಗಿದೆ.

ಸುಸ್ಥಿರ ಅಭಿವೃದ್ಧಿಗಾಗಿ 17 ಗುರಿಗಳ ಸಾಧನೆಗಾಗಿ ಆರೋಗ್ಯಕರ ಪಂಚಾಯಿತಿ, ಮಕ್ಕಳ ಸ್ನೇಹಿ ಪಂಚಾಯಿತಿ, ಮಹಿಳಾ ಸ್ನೇಹಿ ಪಂಚಾಯಿತಿ, ಸ್ವಚ್ಛ ಮತ್ತು ಹಸಿರು ಪಂಚಾಯಿತಿ ಸೇರಿ ಒಟ್ಟು 9 ವಿಷಯಗಳಲ್ಲಿನ ಸಾಧನೆಗೆ ತಲಾ ಮೂರು ಬಹುಮಾನಗಳನ್ನು ನೀಡಲಾಗುತ್ತದೆ. ದೇಶದ ಸರಿ ಸುಮಾರು 2.5 ಲಕ್ಷ ಗ್ರಾಪಂಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದವು. ಉಡುಪಿ ಜಿಪಂ 9 ವಿಷಯಗಳಲ್ಲಿ ತನ್ನ ಗ್ರಾಪಂಗಳ ‘ಸರ್ವೋತ್ತಮ’ ಸಾಧನೆಗಾಗಿ ತೃತೀಯ ಸ್ಥಾನ ಗಳಿಸಿದೆ.=