ಸಾರಾಂಶ
ಉಡುಪಿಯ ಐವೈಸಿ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕ ಕಲಾಶ್ರೀ ಕೀರ್ತಿಶೇಷ ಗುರು ಕಮಲಾ ಭಟ್ ಅವರಿಗೆ ನೃತ್ಯ ಸುಧಾ ಸಂಸ್ಥೆಯ ಕಲಾವಿದರಿಂದ ಪುಷ್ಪ ಹಾಗೂ ನೃತ್ಯಾರ್ಚನೆ ‘ನೃತ್ಯ ಕಮಲಾರ್ಪಣಂ’ ಜರುಗಿತು.
ಕನ್ನಡಪ್ರಭ ವಾರ್ತೆ ಉಡುಪಿ
ಯಾವುದೇ ಕಲಾ ಸಂಸ್ಥೆ ೨೦ ವರ್ಷಗಳನ್ನು ಪೂರೈಸುವುದೆಂದರೆ ಅದೊಂದು ದೊಡ್ಡ ಸಾಧನೆಯ ಮೈಲಿಗಲ್ಲು. ಇದರಿಂದ ನೃತ್ಯ ಸುಧಾ ಸಂಸ್ಥೆಯ ಗುರುಗಳು ಮತ್ತು ವಿದ್ಯಾರ್ಥಿಗಳ ಜವಾಬ್ದಾರಿ ಹೆಚ್ಚಾಗಿದೆ. ಸಂಸ್ಥೆ ಇನ್ನಷ್ಟು ಬೆಳೆದು ಬೆಳಗಲಿ ಎಂದು ಉಡುಪಿ ಅಕಾಡೆಮಿ ಆಫ್ ಫೈನ್ ಆರ್ಟ್ಸ್ ಪ್ರಾಧ್ಯಾಪಕ ವಿದ್ವಾನ್ ಮಾಲೂರು ಪಿ. ಬಾಲಸುಬ್ರಹ್ಮಣ್ಯಂ ಶುಭ ಹಾರೈಸಿದರು.ಉಡುಪಿಯ ಐವೈಸಿ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕ ಕಲಾಶ್ರೀ ಕೀರ್ತಿಶೇಷ ಗುರು ಕಮಲಾ ಭಟ್ ಅವರಿಗೆ ನೃತ್ಯ ಸುಧಾ ಸಂಸ್ಥೆಯ ಕಲಾವಿದರಿಂದ ಪುಷ್ಪ ಹಾಗೂ ನೃತ್ಯಾರ್ಚನೆ ‘ನೃತ್ಯ ಕಮಲಾರ್ಪಣಂ’ ಜರುಗಿತು.ಮುಖ್ಯ ಅತಿಥಿ ಉಡುಪಿ ಗೆರೆಬರೆ ಚಿತ್ರಕಲಾ ಕೇಂದ್ರದ ನಿರ್ದೇಶಕ ಜೀವನ್ ಶೆಟ್ಟಿ, ಭರತನಾಟ್ಯದಲ್ಲಿ ನೃತ್ಯ ಮಾತ್ರವಲ್ಲ ಸಂಗೀತ, ಸಾಹಿತ್ಯ, ಅಭಿನಯ, ಶಿಸ್ತು, ವ್ಯಾಯಾಮ ಎಲ್ಲವೂ ಅಡಕವಾಗಿದೆ. ಯಾವುದೇ ಕಲೆಯ ಕಲಿಯುವಿಕೆಯಲ್ಲಿ ಪ್ರತಿಭೆ, ಪ್ರೇರಣೆ, ಪ್ರೋತ್ಸಾಹ, ಪ್ರದರ್ಶನ, ಪ್ರಶಂಸೆಗಳ ೫ ಕಿರುಮಂತ್ರಗಳನ್ನು ಮಕ್ಕಳ ಹೆತ್ತವರು ಹಾಗೂ ಪೋಷಕರಿಗೆ ಕಿವಿಮಾತು ಹೇಳಿದರು.ವಿಂಶತಿ ವರ್ಷಾಚರಣೆಯನ್ನು ಸಂಸ್ಥೆಯ ನಿರ್ದೇಶಕಿ, ವಿದುಷಿ ಅವರ ಗುರು ಕಮಲಾ ಭಟ್ ಅವರಿಗೆ ಅರ್ಪಿಸಲಾಗಿದೆ. ಗುರುಗಳಿಗೆ ಎಷ್ಟು ಪ್ರಾಮುಖ್ಯತೆ ಕೊಡಬಹುದು ಅನ್ನೋದಕ್ಕೆ ಈ ಕಾರ್ಯಕ್ರಮ ಒಂದು ಮಾದರಿ ಎಂದು ಮುಖ್ಯ ಅತಿಥಿ ರಾಧಾಕೃಷ್ಣ ನೃತ್ಯ ನಿಕೇತನದ ನಿರ್ದೇಶಕಿ ವಿದುಷಿ ವೀಣಾ ಸಾಮಗ ಹೇಳಿದರು.ಸುಮಾರು ೬೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ನೃತ್ಯ ಪ್ರದರ್ಶನ ನೀಡಿದರು. ಹಿರಿಯ ವಿದ್ಯಾರ್ಥಿಗಳು ವಿದುಷಿಯರಾದ ನಿಧಿ ಸಾತ್ವಿಕ್ ಶೆಟ್ಟಿ, ಭಾಗೀರತಿ ಎಂ., ಸಿಂಚನಾ ಎಚ್.ಎಸ್. ಸಂಸ್ಥೆಯೊಂದಿಗಿನ ನಂಟಿನ ಅನುಭವ ಹಂಚಿಕೊಂಡರು.ಉಡುಪಿ ಶಾರದಾ ನಾಟ್ಯಾಲಯದ ಪಾವನ ರಾವ್, ನೃತ್ಯ ಸುಧಾ ಸಂಸ್ಥೆಯ ಅಧ್ಯಕ್ಷ ಡಾ.ಸುಧೀಂದ್ರ ರಾವ್, ಶ್ರಿಯಾ ರಾವ್ ಉಪಸ್ಥಿತರಿದ್ದರು. ಅರ್ಪಿತಾ ಶೆಟ್ಟಿ ನಿರ್ವಹಿಸಿದರು. ನೃತ್ಯ ಸುಧಾ ಸಂಸ್ಥೆಯ ನಿರ್ದೇಶಕಿ ವಿದುಷಿ ಸೌಮ್ಯ ಸುಧೀಂದ್ರ ರಾವ್ ವಂದಿಸಿದರು.