ಯಕ್ಷಿತ್ ಯುವ ಫೌಂಡೇಶನ್ ವತಿಯಿಂದ 18 - 25 ವರ್ಷದ ಯುವಕ ಯುವತಿಯರಿಗೆ ಕ್ರೀಡಾ ಆಡಳಿತ, ನಾಯಕತ್ವ ಮತ್ತು ವ್ಯವಸ್ಥಾಪನಾ ಕೌಶಲ್ಯಗಳ ಬಗ್ಗೆ ‘ಸ್ಪೋರ್ಟ್ ಲೀಡರ್ ಶಿಪ್’ ಕಾರ್ಯಾಗಾರ ಆಯೋಜಿಸಲಾಗಿತ್ತು.
ಮಣಿಪಾಲ: ಇಲ್ಲಿನ ಯಕ್ಷಿತ್ ಯುವ ಫೌಂಡೇಶನ್ ವತಿಯಿಂದ 18 - 25 ವರ್ಷದ ಯುವಕ ಯುವತಿಯರಿಗೆ ಕ್ರೀಡಾ ಆಡಳಿತ, ನಾಯಕತ್ವ ಮತ್ತು ವ್ಯವಸ್ಥಾಪನಾ ಕೌಶಲ್ಯಗಳ ಬಗ್ಗೆ ‘ಸ್ಪೋರ್ಟ್ ಲೀಡರ್ ಶಿಪ್’ ಕಾರ್ಯಾಗಾರ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ರೋಟರಿ ಕ್ಲಬ್ ಆಫ್ ಸಾಯಿಬ್ರಕಟ್ಟೆ ಅಧ್ಯಕ್ಷ ಥಾಮಸ್ ಮಾತನಾಡಿ, ಯಾವುದೇ ಕ್ರೀಡಾ ಸಂಸ್ಥೆಯ ಆಡಳಿತದಲ್ಲಿ ನಿಷ್ಠೆ ಮತ್ತು ಹೊಣೆಗಾರಿಕೆಯು ಮಹತ್ವದ್ದಾಗಿರುತ್ತದೆ ಎಂದರು.
ಪತ್ರಕರ್ತ ಸಂತೋಷ್ ನಾಯ್ಕ್ ಅವರು, ಕ್ರೀಡಾ ಕ್ಷೇತ್ರದಲ್ಲಿ ಬದಲಾಗುತ್ತಿರುವ ಅವಕಾಶಗಳನ್ನು ಯುವಕರು ಶೋಧಿಸಬೇಕೆಂದು ಹೇಳಿದರು. ಫಾಲ್ಕನ್ ಫಿಟ್‌ನೆಸ್ ಸಂಸ್ಥೆಯ ಸೂರಜ್ ಶೆಟ್ಟಿ ಅವರು ದೈಹಿಕ ಸಾಮರ್ಥ್ಯ ಮತ್ತು ಬಲವಾದ ನಾಯಕತ್ವ ಗುಣಗಳು ಒಟ್ಟಿಗೆ ಬಂದಾಗ ಕ್ರೀಡಾ ಕ್ಷೇತ್ರದಲ್ಲಿ ನಿಜವಾದ ಪರಿವರ್ತನೆ ಸಾಧ್ಯವೆಂದು ಅಭಿಪ್ರಾಯಪಟ್ಟರು. ಯಕ್ಷಿತ್ ಯುವ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಶ್ರೀಪಾದ ರವಿ ರಾವ್ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟಿ ಸ್ವಪ್ನಿಲ್ ಪಾಟೀಲ್ ಪ್ರಮಾಣಪತ್ರಗಳನ್ನು ವಿತರಿಸಿದರು. ಪ್ರಧಾನ ಕಾರ್ಯದರ್ಶಿ ವೈಭವ್ ಆರ್ ಪಾಟೀಲ್ ವಂದಿಸಿದರು.ಈ ಕಾರ್ಯಾಗಾರದಲ್ಲಿ ಭಾರತದಲ್ಲಿನ ಕ್ರೀಡಾ ಆಡಳಿತದ ರಚನೆ, ಕ್ರೀಡಾ ಸಂಸ್ಥೆಗಳ ಕಾರ್ಯವೈಖರಿ, ಪಾರದರ್ಶಕತೆ ಮತ್ತು ನ್ಯಾಯತತ್ವಗಳ ಮಹತ್ವ, ಕ್ರೀಡಾ ಕ್ಷೇತ್ರದಲ್ಲಿನ ವೃತ್ತಿ ಮಾರ್ಗಗಳು ಮತ್ತು ನಾಯಕತ್ವ ಗುಣಗಳ ಅಭಿವೃದ್ಧಿ ಕುರಿತು ಸಮಗ್ರವಾಗಿ ತಿಳಿಸಲಾಯಿತು.