ಸಾರಾಂಶ
ಉಡುಪಿ: ಭಾರತೀಯ ಗುಣಮಟ್ಟ ಮಂಡಳಿ (ಕ್ಯುಸಿಐ), ಆಸ್ಪತ್ರೆಗಳು ಮತ್ತು ಆರೋಗ್ಯ ಸೇವೆ ಒದಗಿಸುವವರ ರಾಷ್ಟ್ರೀಯ ಮಾನ್ಯತಾ ಮಂಡಳಿ (ಎನ್‌ಎಬಿಎಚ್)ಗಳ ಸಹಯೋಗದಲ್ಲಿ ಇಲ್ಲಿನ ಉದ್ಯಾವರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದಲ್ಲಿ ವಿವಿಧ ಆಯುಷ್ ಆಸ್ಪತ್ರೆ ಮತ್ತು ಚಿಕಿತ್ಸಾಲಯಗಳಿಗೆ ಎನ್‌ಎಬಿಎಚ್ ಪ್ರವೇಶ ಮಟ್ಟ ಪ್ರಮಾಣಪತ್ರ ಮತ್ತು ಮಾನ್ಯತೆ ಕುರಿತ ಜಾಗೃತಿ ಕಾರ್ಯಕ್ರಮ ‘ಗುಣವತ್ತಾ ಯಾತ್ರಾ’ ಆಯೋಜಿಸಲಾಗಿತ್ತು.
ಇದರ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ಎನ್‌ಎಬಿಎಚ್‌ನ ಪ್ರಧಾನ ಮೌಲ್ಯಮಾಪಕ ಡಾ. ಶ್ವೇತಾ ಸುವರ್ಣ ಅವರು ಎನ್‌ಎಬಿಎಚ್ ಆಯುಷ್ ಮಾನ್ಯತೆ ಮತ್ತು ಪ್ರಮಾಣೀಕರಣದ ಅಗತ್ಯತೆಗಳು ಹಾಗೂ ಆಯುಷ್ ವೈದ್ಯಕೀಯ ಅಭ್ಯಾಸದಲ್ಲಿ ಎನ್‌ಎಬಿಎಚ್ ಮಾನದಂಡ ಅಳವಡಿಸಿಕೊಳ್ಳುವುದರ ಮಹತ್ವದ ಬಗ್ಗೆ ಉಪಯುಕ್ತ ಮಾಹಿತಿ ನೀಡಿದರು.ಎನ್‌ಬಿಕ್ಯುಸಿ ಸಲಹೆಗಾರರಾದ ವೇಣುಗೊಪಾಲ್ ಸಿ. ಅವರು ಗುಣವತ್ತಾ ಯಾತ್ರೆಯ ಪರಿಚಯ ಹಾಗೂ ಕ್ಯುಸಿಐ ಇದರ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.ಕಾಲೇಜಿನ ಪ್ರಾಂಶುಪಾಲೆ ಡಾ. ಮಮತಾ ಕೆ.ವಿ. ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮ ಸಂಯೋಜಕ ಡಾ. ನಿತಿನ್ ಕುಮಾರ್ ಉಪಸ್ಥಿತರಿದ್ದರು. ಎನ್‌ಎಬಿಎಚ್ ಸಂಯೋಜಕಿ ಡಾ. ಸಹನಾ ಕಾಮತ್ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕ ಡಾ. ಕೊಚುತ್ರೇಸಿಯಾ ಜೋಸ್ ನಿರೂಪಿಸಿದರು.
ಈ ಜಾಗೃತಿ ಕಾರ್ಯಕ್ರಮದಲ್ಲಿ ಕರ್ನಾಟಕ ಮತ್ತು ಕೇರಳದ ವಿವಿಧ ಆಯುರ್ವೇದ ಮತ್ತು ಯೋಗ ವೈದ್ಯರು ಭಾಗವಹಿಸಿದರು.;Resize=(128,128))
;Resize=(128,128))
;Resize=(128,128))