ಕೂಡ್ಲಿಗಿ : ಇಲ್ಲೊಂದು ಗ್ರಾಮದ ಜನರಿಗೆ ಯುಗಾದಿ ಎಂದರೆ ಅಪಶಕುನ

| Published : Apr 09 2024, 12:48 AM IST / Updated: Apr 09 2024, 10:36 AM IST

ಸಾರಾಂಶ

ಮನೆಯಲ್ಲಿ ಮತ್ತಷ್ಟು ಕೆಟ್ಟ ಘಟನೆಗಳು ನಡೆಯುತ್ತವೆ ಎಂದು ನಂಬಿಕೊಂಡಿದ್ದಾರೆ.ವಿದ್ಯಾವಂತರು, ನೌಕರಿ ಮಾಡುವವರೂ ಇದಕ್ಕೆ ಹೊರತಾಗಿಲ್ಲ.

ಭೀಮಣ್ಣ ಗಜಾಪುರ

ಕೂಡ್ಲಿಗಿ: ಯುಗಾದಿ ಎಂದರೆ ಹಿಂದೂ ಧರ್ಮದಲ್ಲಿ ಹೊಸ ಮನ್ವಂತರ, ಹೊಸ ವರುಷದ ಸಂಭ್ರಮ ಇರುತ್ತದೆ. ಆದರೆ ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿ, ಕೊಟ್ಟೂರು ಸೇರಿದಂತೆ ಬಾರಿಕ, ನಾಯಕ ಇತರೆ ಹಿಂದುಳಿದ ಸಮುದಾಯಗಳಲ್ಲಿನ ಕೆಲವರು ಮಾತ್ರ ಯುಗಾದಿ ಹಬ್ಬವೆಂದರೆ ಮಾರುದ್ದ ಓಡುತ್ತಾರೆ. ಈ ಕುಟುಂಬಗಳಲ್ಲಿ ಯುಗಾದಿ ನಿಷಿದ್ಧವಿದ್ದು, ಒಂದು ರೀತಿಯಲ್ಲಿ ಅಪಶಕುನವೆಂಬಂತೆ ಕಾಣುತ್ತಿದ್ದಾರೆ.

ತಾಲೂಕಿನ ಗಜಾಪುರ ಗ್ರಾಮದಲ್ಲಿ 80ಕ್ಕೂ ಹೆಚ್ಚು ಕುಟುಂಬಗಳು ಯುಗಾದಿ ಆಚರಿಸುವುದಿಲ್ಲ. ಯುಗಾದಿ ಅಮವಾಸ್ಯೆ ಬಂತೆಂದರೆ ಅಂದಿನಿಂದ ಮೂರು ದಿನ ಈ ಕುಟುಂಬಸ್ಥರು ಸ್ನಾನ ಮಾಡುವುದಿಲ್ಲ, ಹೊಸ ಬಟ್ಟೆ ಉಡುವಂತಿಲ್ಲ. ಸಿಹಿ ಅಡುಗೆ ಮಾಡುವುದಿಲ್ಲ. ತಮ್ಮ ಪೂರ್ವಜರ ಆಚರಣೆಗಳಿಗೆ ವಿರುದ್ಧವಾಗಿ ನಡೆದುಕೊಂಡರೆ ನಮಗೆ ಕೇಡು ಆಗುತ್ತದೆ. ಮನೆಯಲ್ಲಿ ಮತ್ತಷ್ಟು ಕೆಟ್ಟ ಘಟನೆಗಳು ನಡೆಯುತ್ತವೆ ಎಂದು ನಂಬಿಕೊಂಡಿದ್ದಾರೆ.ವಿದ್ಯಾವಂತರು, ನೌಕರಿ ಮಾಡುವವರೂ ಇದಕ್ಕೆ ಹೊರತಾಗಿಲ್ಲ.

ಮದುವೆ ಸೇರಿದಂತೆ ಯಾವುದೇ ಶುಭ ಕಾರ್ಯಗಳನ್ನು ಯುಗಾದಿಗೂ ಮುಂಚೆ ಮಾಡುವುದಿಲ್ಲ. ಯುಗಾದಿ ನಂತರವೇ ಸ್ನಾನ ಮಾಡುವ ಮೂಲಕ ಸೂತಕದಿಂದ ಹೊರ ಬರುತ್ತಾರೆ. ಬಳಿಕ ಶುಭ ಕಾರ್ಯ ಹಮ್ಮಿಕೊಳ್ಳುತ್ತಾರೆ. ಇಂತಹ ಆಚರಣೆಗಳು ಪ್ರಜ್ಞಾವಂತರ ಕಾಲದಲ್ಲಿಯೂ ನಡೆಯುತ್ತಿರುವುದು ಸೋಜಿಗದ ಸಂಗತಿ.

ನಮ್ಮ ಹಿರಿಯರು ಯುಗಾದಿಯಲ್ಲಿ ಬೇವು-ಮಾವು ಎಲೆ ತರಲು ಹೋದವರು ವಾಪಸಾಗಿಲ್ಲ. ಹಾಗಾಗಿ ನಾವು ಹಬ್ಬ ಆಚರಿಸಲ್ಲ. ಹಿರಿಯರ ಮಾತು ಮೀರಲ್ಲ ಎನ್ನುತ್ತಾರೆ ಗಜಾಪುರ ನಿವಾಸಿ ಬಾರಿಕರ ಮಂಜುನಾಥ