ಸಾರಾಂಶ
ಬೆಳಗಾವಿ ನಗರದ ಸುರೇಶ ಅಂಗಡಿ ಶಿಕ್ಷಣ ಪ್ರತಿಷ್ಠಾನದ ಅಂಗಡಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆ್ಯಂಡ್ ಮ್ಯಾನೇಜಮೆಂಟ್ ಸಭಾಗಂಣದಲ್ಲಿ ಭಾರತ ಸರ್ಕಾರದ ನೆಹರು ಯುವ ಕೇಂದ್ರ ಬೆಳಗಾವಿ ಹಾಗೂ ಅಂಗಡಿ ವಾಣಿಜ್ಯ ಮತ್ತು ವಿಜ್ಞಾನ ಕಾಲೇಜ ಸಂಯುಕ್ತ ಆಶ್ರಯದಲಿ 2023-24ನೇ ಸಾಲಿನ ದಿವ್ಯ ಚೇತನ ಸ್ವಾಮಿ ವಿವೇಕಾನಂದರ 162ನೇ ಜಯಂತಿ ಅಂಗವಾಗಿ ರಾಷ್ಟ್ರೀಯ ಯುವ ದಿನ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಬೆಳಗಾವಿ
ಸ್ವಾಮಿ ವಿವೇಕಾನಂದರ ಆದರ್ಶ ಮತ್ತು ದೇಶ ಪ್ರೇಮವನ್ನು ಎಲ್ಲರೂ ಬೆಳಸಿಕೊಳ್ಳಬೇಕು ಎಂದು ಸಂಸದೆ ಮಂಗಲ ಅಂಗಡಿ ಹೇಳಿದರು.ನಗರದ ಸುರೇಶ ಅಂಗಡಿ ಶಿಕ್ಷಣ ಪ್ರತಿಷ್ಠಾನದ ಅಂಗಡಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆ್ಯಂಡ್ ಮ್ಯಾನೇಜಮೆಂಟ್ ಸಭಾಗಂಣದಲ್ಲಿ ಭಾರತ ಸರ್ಕಾರದ ನೆಹರು ಯುವ ಕೇಂದ್ರ ಬೆಳಗಾವಿ ಹಾಗೂ ಅಂಗಡಿ ವಾಣಿಜ್ಯ ಮತ್ತು ವಿಜ್ಞಾನ ಕಾಲೇಜ ಸಂಯುಕ್ತ ಆಶ್ರಯದಲಿ 2023-24ನೇ ಸಾಲಿನ ದಿವ್ಯ ಚೇತನ ಸ್ವಾಮಿ ವಿವೇಕಾನಂದರ 162ನೇ ಜಯಂತಿ ಅಂಗವಾಗಿ ರಾಷ್ಟ್ರೀಯ ಯುವ ದಿನ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಸ್ವಾಮಿ ವಿವೇಕಾನಂದರ ಜೀವನವೇ ನಮಗೆ ಸ್ಫೂರ್ತಿ ತುಂಬುತ್ತದೆ. ಅವರ ಬಾಲ್ಯ ಜೀವನ ಮತ್ತು ಅವರು ಕಂಡ ಭವಿಷ್ಯದ ಭಾರತದ ಕನಸು ನನಸು ಮಾಡಲು ತಾವೆಲ್ಲರೂ ಸಿದ್ಧವಾಗಿರಬೇಕು ಎಂದರು.
ಸ್ವಾಮಿ ವಿವೇಕಾನಂದರ ಜನ್ಮ ದಿನ ಪ್ರತಿ ವರ್ಷ ಜ.12 ರಂದು ವಿಶ್ವದಾದ್ಯಂತ ಸ್ವಾಮಿ ವಿವೇಕಾನಂದರ ಜಯಂತಿಯನ್ನು ಬಹಳ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತದೆ. ರಾಷ್ಟ್ರೀಯ ಯುವ ದಿನ 2024 ಕೇವಲ ಆಚರಣೆಗಿಂತ ಹೆಚ್ಚಿನದಾಗಿ ಭರವಸೆ ನೀಡುತ್ತದೆ. ಇದು ಭಾರತದ ಯುವ ಪೀಳಿಗೆಯಲ್ಲಿ ನಂಬಿಕೆಯ ಘೋಷಣೆಯಾಗಿದೆ. ಅವರ ಆಲೋಚನೆಗಳು ಪ್ರವರ್ಧಮಾನಕ್ಕೆ ಬರಲು ವೇದಿಕೆಯಾಗಿದೆ ಮತ್ತು ನಮ್ಮ ರಾಷ್ಟ್ರವನ್ನು ಉಜ್ವಲವಾದ, ಉತ್ತಮವಾದ ವಿಕ್ಷಿತ್ ಭಾರತ್@2047 ಕಡೆಗೆ ಮುನ್ನಡೆಸಲು ಸಹಾಯವಾಗುತ್ತದೆ ಎಂದು ತಿಳಿಸಿದರು.ಮಲ್ಲಯ್ಯ ಕರಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಗೀತ ದೇಸಾಯಿ, ಪ್ರೊ.ಸಂಜೀವ ಕುಮಾರಮಠ, ಪ್ರೊ.ನಾಗೇಶ್ವರ ದೇಮನಿಕೊಪ್ಪ, ಪ್ರೊ.ಸಂತೋಷ ಹಾವರಗಿ, ಕಾಲೇಜಿನ ಎಲ್ಲ ಶಿಕ್ಷಕರು ಉಪಸ್ಥಿತರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))