ಸಾರಾಂಶ
ಮಾಗಡಿ: ತಾಲೂಕಿನ ಬೆಳಗುಂಬ ಗ್ರಾಪಂ ನೂತನ ಅಧ್ಯಕ್ಷರಾಗಿ ಉಮಾದೇವಿನರಸಿಂಹಮೂರ್ತಿ, ಉಪಾಧ್ಯಕ್ಷರಾಗಿ ಕನಕಗಿರೀಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಗುರುವಾರ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಒಂದೊಂದೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ರೇಣುಕೇಶ್ ಮುಂದಿನ ಅವಧಿಗೆ ಅಧ್ಯಕ್ಷ ಉಪಾಧ್ಯಕ್ಷರ ಅವಿರೋಧ ಆಯ್ಕೆ ಘೋಷಣೆ ಮಾಡುತ್ತಿದ್ದಂತೆ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.ನೂತನ ಅಧ್ಯಕ್ಷ ಉಮಾದೇವಿ ಮಾತನಾಡಿ, ಎಲ್ಲಾ ಸದಸ್ಯರ ಸಹಕಾರದಿಂದ ನಾನು ಅವಿರೋಧವಾಗಿ ಆಯ್ಕೆಯಾಗಿದ್ದೇನೆ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಗ್ರಾಮ ಪಂಚಾಯಿತಿಯ ಸರ್ವತೋಮುಖ ಅಭಿವೃದ್ಧಿಗೆ ಶಕ್ತಿಮೀರಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಮೂಲ ಸಮಸ್ಯೆಗಳನ್ನು ಬಗೆಹರಿಸಲು ಹೆಚ್ಚಿನ ಶ್ರಮ ವಹಿಸುತ್ತೇನೆ. ಎಲ್ಲಾ ಸದಸ್ಯರ ಹಾಗೂ ಹಿರಿಯರ ಮಾರ್ಗದರ್ಶನದಲ್ಲಿ ಪಂಚಾಯಿತಿಯ ನೂತನ ಕಟ್ಟಡ ನಿರ್ಮಾಣಕ್ಕೆ ಚರ್ಚಿಸಿ ಈ ಮೂಲಕ ಅಗತ್ಯ ಶ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಉಪಾಧ್ಯಕ್ಷ ಕನಕ ಗಿರೀಶ್ ಮಾತನಾಡಿ, ಅಧ್ಯಕ್ಷರೊಂದಿಗೆ ಕೈಜೋಡಿಸಿ ಪಂಚಾಯಿತಿಯ ಸಮಗ್ರ ಅಭಿವೃದ್ಧಿಗೆ ಕಂಕಣಬದ್ಧರಾಗಿದ್ದೇವೆ ಎಂದು ತಿಳಿಸಿದರು.ಇದೆ ವೇಳೆ ಸದಸ್ಯರಾದ ಸದಾಶಿವಯ್ಯ, ಚಂದ್ರಕಲಾ, ಎಂ.ಸಿ.ವೆಂಕಟೇಶ್, ಭೈರಪ್ಪ,ರಾಧಿಕಾರಾಜಣ್ಣ, ಬಿ.ಎನ್. ಕೋಟಪ್ಪ. ಜೀವಿ ವಿಶ್ವನಾಥ್, ಶಬ್ಬಿನಾ ತಾಜ್ ಅಬ್ದುಲ್ ಬಶೀರ್, ಸಿ.ಆರ್.ಸುರೇಶ್, ಗಂಗಲಕ್ಷ್ಮೀವೆಂಕಟೇಶ್, ಹೊನ್ನಾಶಾಮಯ್ಯ, ಜಯಲಕ್ಷ್ಮಮ್ಮ ಗ್ರಾಮಸ್ಥರ ಬೆಂಬಲಿಗರು ಭಾಗವಹಿಸಿದ್ದರು.