ಬೊಜ್ಜು, ಕ್ಯಾನ್ಸರ್‌ಪೀಡಿತರಿಗೆ ಇನ್ನು ಅಮೆರಿಕ ವೀಸಾ ಕಷ್ಟ!

| N/A | Published : Nov 08 2025, 01:30 AM IST / Updated: Nov 08 2025, 06:53 AM IST

Donald Trump
ಬೊಜ್ಜು, ಕ್ಯಾನ್ಸರ್‌ಪೀಡಿತರಿಗೆ ಇನ್ನು ಅಮೆರಿಕ ವೀಸಾ ಕಷ್ಟ!
Share this Article
  • FB
  • TW
  • Linkdin
  • Email

ಸಾರಾಂಶ

ವಿದೇಶಿಗರು ಅಮೆರಿಕಕ್ಕೆ ಬರುವುದನ್ನು ತಡೆಯಲು ಹಲವು ನೆಪಗಳನ್ನು ನೀಡಿ ನಿರ್ಬಂಧಗಳನ್ನು ಹೇರುತ್ತಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸರ್ಕಾರ, ಇದೀಗ ಬೊಜ್ಜು, ಹೃದ್ರೋಗ, ಕ್ಯಾನ್ಸರ್‌ನಂತಹ ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿರುವವರಿಗೆ ವೀಸಾ ನೀಡದಂತೆ ಮಾರ್ಗಸೂಚಿ ಹೊರಡಿಸಿದೆ.

 ವಾಷಿಂಗ್ಟನ್‌: ವಿದೇಶಿಗರು ಅಮೆರಿಕಕ್ಕೆ ಬರುವುದನ್ನು ತಡೆಯಲು ಹಲವು ನೆಪಗಳನ್ನು ನೀಡಿ ನಿರ್ಬಂಧಗಳನ್ನು ಹೇರುತ್ತಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸರ್ಕಾರ, ಇದೀಗ ಬೊಜ್ಜು, ಹೃದ್ರೋಗ, ಕ್ಯಾನ್ಸರ್‌ನಂತಹ ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿರುವವರಿಗೆ ವೀಸಾ ನೀಡದಂತೆ ಮಾರ್ಗಸೂಚಿ ಹೊರಡಿಸಿದೆ.

ಸರ್ಕಾರದ ವೆಚ್ಚದಲ್ಲಿ ಚಿಕಿತ್ಸೆ ಕೊಡಿಸುವ ವ್ಯವಸ್ಥೆ

ಅಮೆರಿಕದಲ್ಲಿ ಗ್ರೀನ್‌ಕಾರ್ಡ್‌ (ನಾಗರಿಕತ್ವ) ಹೊಂದಿರುವವರಿಗೆ ಸರ್ಕಾರದ ವೆಚ್ಚದಲ್ಲಿ ಚಿಕಿತ್ಸೆ ಕೊಡಿಸುವ ವ್ಯವಸ್ಥೆಯಿದೆ. ವಲಸಿಗರ ಮೇಲೆ ಇಂತಹ ಖರ್ಚು ಮಾಡುವುದನ್ನು ತಪ್ಪಿಸಲು, ಅನಾರೋಗ್ಯದಿಂದ ಬಳಲುತ್ತಿರುವವರಿಗೆ ವೀಸಾ ಕೊಡದೇ ಇರಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಈ ಮೂಲಕ, ಹೃದ್ರೋಗ, ಉಸಿರಾಟದ ಸಮಸ್ಯೆ, ಕ್ಯಾನ್ಸರ್‌, ಮಧುಮೇಹ, ಚಯಾಪಚಯ ಕಾಯಿಲೆಗಳು, ನರವೈಜ್ಞಾನಿಕ ಮತ್ತು ಮಾನಸಿಕ ಆರೋಗ್ಯ ಅಸ್ವಸ್ಥತೆಗಳಿರುವವರಿಗೆ ವೀಸಾ ಸಿಗುವುದು ಕಷ್ಟವಾಗಲಿದೆ. ಅಂತೆಯೇ, ಬೊಜ್ಜಿರುವವರಲ್ಲಿ ಆಸ್ತಮಾ ಮತ್ತು ಅಧಿಕ ರಕ್ತದೊತ್ತಡದಂತಹ ಸಮಸ್ಯೆಗಳು ಉದ್ಭವಿಸುವ ಸಂಭವವಿರುವುದರಿಂದ ಅವರಿಗೂ ಈ ನಿರ್ಬಂಧ ಅನ್ವಯವಾಗಲಿದೆ.

ಸ್ವಂತ ಖರ್ಚು ಮಾಡಿದರೆ ಓಕೆ:

ವರದಿಗಳ ಪ್ರಕಾರ, ಸರ್ಕಾರದಿಂದ ಆರ್ಥಿಕ ನೆರವಿಲ್ಲದೆ ಅರ್ಜಿದಾರರು ತಮ್ಮ ಸ್ವಂತ ಖರ್ಚಿನಲ್ಲಿ ಜೀವನಪೂರ್ತಿ ಚಿಕಿತ್ಸೆಯನ್ನು ಪಡೆಯುವ ಸಾಮರ್ಥ್ಯ ಹೊಂದಿದ್ದಾರೆಯೇ ಎಂಬುದನ್ನೂ ಪರಿಶೀಲಿಸಲು ವೀಸಾ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ. ಅಷ್ಟೇ ಅಲ್ಲದೆ, ಅರ್ಜಿದಾರರ ಮೇಲೆ ಅವಲಂಬಿತರಾಗಿರುವವರಿಗೂ (ಮಕ್ಕಳು ಅಥವಾ ಹೆತ್ತವರು) ಸರ್ಕಾರಿ ಖರ್ಚಿನಲ್ಲಿ ಚಿಕಿತ್ಸೆ ಕೊಡಿಸಬೇಕಾಗಿ ಬರದಂತೆ ಎಚ್ಚರ ವಹಿಸಲು ನಿರ್ದೇಶಿಸಲಾಗಿದೆ.

ಈ ಮೊದಲು, ವೀಸಾಗೆ ಅರ್ಜಿ ಹಾಕಿದವರ ಕ್ಷಯರೋಗ, ಲಸಿಕೆ ದಾಖಲೆ, ಆರೋಗ್ಯ ತಪಾಸಣೆಗಳನ್ನು ನಡೆಸಲಾಗುತ್ತಿತ್ತು. ಈಗ ಅದನ್ನು ಇನ್ನಷ್ಟು ರೋಗಗಳಿಗೆ ವಿಸ್ತರಿಸಲಾಗಿದೆ.

ಗ್ರೀನ್‌ಕಾರ್ಡ್‌ ಹೊಂದಿರುವವರಿಗೆ ಅಮೆರಿಕದಲ್ಲಿ ಸರ್ಕಾರದ ವೆಚ್ಚದಲ್ಲೇ ಉಚಿತ ಚಿಕಿತ್ಸೆ ಕೊಡಿಸುವ ವ್ಯವಸ್ಥೆ ಇದೆ

ಹೃದ್ರೋಗ, ಕ್ಯಾನ್ಸರ್‌, ಮಧುಮೇಹ, ಚಯಾಪಚಯ ಕಾಯಿಲೆಗಳು, ನರವೈಜ್ಞಾನಿಕಗಳ ವೆಚ್ಚ ಬಲು ದುಬಾರಿ

ಇದು ಸರ್ಕಾರಕ್ಕೆ ಹೊರೆ. ಗುಣವಾಗದಿದ್ದರೆ ವೈದ್ಯಕೀಯ ವ್ಯವಸ್ಥೆ ಬಗ್ಗೆ ಕಳಂಕ ಎಂಬುದು ಸರ್ಕಾರದ ವಾದ

ಹೀಗಾಗಿ ವೀಸಾ ವಿತರಣೆ ಸಮಯದಲ್ಲೇ ಇಂಥ ವ್ಯಕ್ತಿಗಳ ಪರಿಶೀಲನೆಗೆ ಒಳಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ

Read more Articles on