ಸಾರಾಂಶ
ಕುಡಿಯುವ ನೀರು ಯೋಗ್ಯವಾಗಿಲ್ಲ, ಮಹಿಳೆಯರಿಗೆ ಶೌಚಾಲಯವಿಲ್ಲ, ಸಮರ್ಪಕ ರಸ್ತೆ ಇಲ್ಲದ ಕುರಿತು ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಕ್ರಮಕೈಗೊಂಡಿಲ್ಲ. ಹೀಗಾಗಿ ಅನಿವಾರ್ಯವಾಗಿ ಪ್ರತಿಭಟನೆ ನಡೆಸಬೇಕಾಗಿದೆ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.
ನವಲಗುಂದ:
ಕೆರೆಯ ನೀರು ಅಶುದ್ಧವಾಗಿದ್ದರೂ ಅದೇ ನೀರನ್ನು ಕುಡಿಯಲು ಪೂರೈಸಲಾಗುತ್ತಿದೆ ಎಂದು ಆಕ್ರೋಶಗೊಂಡ ಮಹಿಳೆಯರು ತುಪ್ಪದಕುರಹಟ್ಟಿ ಗ್ರಾಪಂ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.ಕುಡಿಯುವ ನೀರು ಯೋಗ್ಯವಾಗಿಲ್ಲ, ಮಹಿಳೆಯರಿಗೆ ಶೌಚಾಲಯವಿಲ್ಲ, ಸಮರ್ಪಕ ರಸ್ತೆ ಇಲ್ಲದ ಕುರಿತು ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಕ್ರಮಕೈಗೊಂಡಿಲ್ಲ. ಹೀಗಾಗಿ ಅನಿವಾರ್ಯವಾಗಿ ಪ್ರತಿಭಟನೆ ನಡೆಸಬೇಕಾಗಿದೆ ಎಂದರು.
ಸಮಸ್ಯೆ ಆಲಿಸಲು ಬಂದ ಪಂಚಾಯಿತಿ ನೌಕರ ಶಿವಾನಂದ ಬಿಜಾಪುರ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಮಹಿಳೆಯರು, ಸಮಸ್ಯೆಗಳು ಬಂದಾಗ ಸ್ಥಳಕ್ಕೆ ಭೇಟಿ ನೀಡದ ಅಧಿಕಾರಿಗಳ ಬಗ್ಗೆ ಬೇಸರ ವ್ಯಕ್ತಪಡಿಸಿದರು.ಗ್ರಾಮದಲ್ಲಿನ ಗಂಭೀರ ಸಮಸ್ಯೆ ಬಗೆಹರಿಸದೆ ಹೋದರೆ, ಈ ಬಾರಿಯ ನಡೆಯುವ ಜಿಲ್ಲಾ, ತಾಪಂ ಚುನಾವಣೆ ಬಹಿಷ್ಕರಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ನಂತರ ಗ್ರಾಮದ ಹಿರಿಯರು, ಪಂಚಾಯಿತಿ ಅಧಿಕಾರಿಗಳು ಮಹಿಳೆಯರ ಮನವೊಲಿಸಿದ ನಂತರ ಪ್ರತಿಭಟನೆ ಮೊಟಕು ಗೊಳಿಸಿದರು.
ಈ ವೇಳೆ ಲಲಿತಾ ಹಡಪದ, ಮಾಬೂಬಿ ಬಡೇಖಾನವರ, ರೇಖಾ ಹಂಡಿ, ಕಸ್ತೂರಿ ಸಾಸ್ವಿಹಳ್ಳಿ, ಅನ್ನಪೂರ್ಣ ಮಡಿವಾಳರ, ರೇಣವ್ವ ಹಂಡಿ, ಅಂಜುಮ್ ಬಡೇಖಾನವರ, ಶಾರದಾ ಗಾನೇಗೇರ, ಪೀರವ್ವ ಬಡೇಖಾನವರ, ಶಂಕರವ್ವ ಗಾಣಿಗೇರ ಸೇರಿದಂತೆ ನೂರಾರು ಮಹಿಳೆಯರು ಇದ್ದರು.