ಕೇಂದ್ರ ಸಚಿವ ವಿ.ಸೋಮಣ್ಣ ಫ್ಲೇಕ್ಸ್ ಹರಿದ ಕಿಡಿಗೇಡಿಗಳು

| Published : Jun 11 2024, 01:32 AM IST

ಸಾರಾಂಶ

ತುಮಕೂರು ಲೋಕಸಭೆ ಸಂಸದ ವಿ.ಸೋಮಣ್ಣ ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಹಿನ್ನೆಲೆ ಹಾಗೂ ಜಾತ್ರಾ ಮಹೋತ್ಸವ ನಿಮಿತ್ತ ಬಿಜೆಪಿ, ಜೆಡಿಎಸ್ ಕಾರ್ಯಕರ್ತರು ಫ್ಲೇಕ್ಸ್ ಹಾಕಿದ್ದನ್ನು ಕಿಡಿಕೇಡಿಗಳು ಹರಿದು ಹಾಕಿದ ಘಟನೆ ತಾಲೂಕಿನ ಸಂಕೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಕೊರಟಗೆರೆ

ತುಮಕೂರು ಲೋಕಸಭೆ ಸಂಸದ ವಿ.ಸೋಮಣ್ಣ ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಹಿನ್ನೆಲೆ ಹಾಗೂ ಜಾತ್ರಾ ಮಹೋತ್ಸವ ನಿಮಿತ್ತ ಬಿಜೆಪಿ, ಜೆಡಿಎಸ್ ಕಾರ್ಯಕರ್ತರು ಫ್ಲೇಕ್ಸ್ ಹಾಕಿದ್ದನ್ನು ಕಿಡಿಕೇಡಿಗಳು ಹರಿದು ಹಾಕಿದ ಘಟನೆ ತಾಲೂಕಿನ ಸಂಕೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

ತಾಲೂಕಿನ ಕೋಲಾಲ ಹೋಬಳಿಯ ನೀಲಗೊಂಡನಹಳ್ಳಿ ಗ್ರಾಪಂ ವ್ಯಾಪ್ತಿಯ ಸಂಕೇನಹಳ್ಳಿ ಗ್ರಾಮದಲ್ಲಿ ಹಲವಾರು ದಿನಗಳಿಂದ ರೇಣುಕೇಶ್, ಆಂಜನೇಯ, ಶನಿಮಹಾತ್ಮ, ಮಾರಮ್ಮ ಜಾತ್ರಾ ಮಹೋತ್ಸವ ಮಾಡಿಕೊಂಡು ಬರಲಾಗುತ್ತಿದ್ದು, ೧೫ ಜನರ ಗುಂಪೊಂದು ವಿ.ಸೋಮಣ್ಣ ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಹಾಗೂ ಜಾತ್ರಾ ಮಹೋತ್ಸವದ ಶುಭಾಶಯ ಕೋರಲು ಫ್ಲೇಕ್ಸ್ ಹಾಕಿದ್ದನ್ನು ಕಿಡಿಗೇಡಿಗಳು ಹರಿದು ಹಾಕಿದ್ದಾರೆ. ಇದರಿಂದ ಜೆಡಿಎಸ್, ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಸಂಕೇನಹಳ್ಳಿ ಗ್ರಾಮದಲ್ಲಿ ಸುಮಾರು ೧೦ಕ್ಕೂ ಹೆಚ್ಚು ಕಡೆ ಹಾಕಲಾಗಿದ್ದ ಪ್ಲೆಕ್ಸ್‌ನ್ನ ಹರಿದು ಹಾಕಲಾಗಿದ್ದು, ನಮ್ಮ ನಾಯಕರಿಗೆ ಅವಮಾನ ಮಾಡಿದ್ದು, ತಕ್ಷಣ ಪೊಲೀಸ್ ಅಧಿಕಾರಿಗಳು ಅವರನ್ನ ಬಂಧಿಸುವಂತೆ ಜೆಡಿಎಸ್, ಬಿಜೆಪಿ ಕಾರ್ಯಕರ್ತರು ಮನವಿ ಮಾಡಿದರು. ಸ್ಥಳಕ್ಕೆ ಕೋಳಾಲ ಪೊಲೀಸ್ ಅಧಿಕಾರಿಗಳು ಬೇಟಿ ನೀಡಿದ್ದಾರೆ.