ಬುದ್ಧ, ಬಸವ, ಅಂಬೇಡ್ಕರ್ ವಿಚಾರಗಳಿಗೆ ವಿಶ್ವಮಾನ್ಯತೆ

| Published : May 05 2025, 12:45 AM IST

ಬುದ್ಧ, ಬಸವ, ಅಂಬೇಡ್ಕರ್ ವಿಚಾರಗಳಿಗೆ ವಿಶ್ವಮಾನ್ಯತೆ
Share this Article
  • FB
  • TW
  • Linkdin
  • Email

ಸಾರಾಂಶ

ಈ ಮೂರು ಮಹನೀಯರು ನಡೆದ ಹಾದಿಯಲ್ಲಿ ನಾವು ಸಾಗಬೇಕು. ಇದರಿಂದ ಸಮಸಮಾಜ ನಿರ್ಮಾಣ ಸಾಧ್ಯವಾಗಲಿದೆ. ಶತಮಾನಗಳ ಹಿಂದೆ ಕಂದಾಚಾರಗಳನ್ನು ತೊರೆದು, ಸಾಮಾಜಿಕ ಪಿಡುಗುಗಳ ವಿರುದ್ಧ ಸಾಮಾಜಿಕ ಹೋರಾಟ ನಡೆಸಿದವರು.

ಕನ್ನಡಪ್ರಭ ವಾರ್ತೆ ರಾಮನಗರ

ಬುದ್ಧ, ಬಸವ, ಅಂಬೇಡ್ಕರ್ ಅವರ ವಿಚಾರಧಾರೆಗಳಿಗೆ ವಿಶ್ವಮಾನ್ಯತೆ ಸಿಕ್ಕಿದೆ. ಇವರ ತತ್ವಾದರ್ಶಗಳು ಭಾರತ ಮಾತ್ರವಲ್ಲದೆ ಜಗತ್ತಿಗೂ ಅನ್ವಯಾಗುತ್ತಿವೆ ಎಂದು ಜನಪದ ಲೋಕದ ಕ್ಯೂರೇಟರ್ ಡಾ.ಯು.ಎಂ.ರವಿ ಹೇಳಿದರು.

ತಾಲೂಕಿನ ಕುಂಬಾಪುರ ಕಾಲೋನಿಯಲ್ಲಿ ಜನಮುಖಿ ಟ್ರಸ್ಟ್ ವತಿಯಿಂದ ನಡೆದ ಅಂಬೇಡ್ಕರ್ ಮತ್ತು ಬಸವ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಈ ಮೂರು ಮಹನೀಯರು ನಡೆದ ಹಾದಿಯಲ್ಲಿ ನಾವು ಸಾಗಬೇಕು. ಇದರಿಂದ ಸಮಸಮಾಜ ನಿರ್ಮಾಣ ಸಾಧ್ಯವಾಗಲಿದೆ. ಶತಮಾನಗಳ ಹಿಂದೆ ಕಂದಾಚಾರಗಳನ್ನು ತೊರೆದು, ಸಾಮಾಜಿಕ ಪಿಡುಗುಗಳ ವಿರುದ್ಧ ಸಾಮಾಜಿಕ ಹೋರಾಟ ನಡೆಸಿದವರು. ಬಸವೇಶ್ವರರು ಸಮಾಜವನ್ನು ವಚನಗಳ ಮೂಲಕ ಜಾಗೃತಗೊಳಿಸಿದ್ದಾರೆ ಎಂದರು.

ಜಾತಿ ವ್ಯವಸ್ಥೆ, ಲಿಂಗ ತಾರತಮ್ಯ, ಅಸಮಾನತೆ ವಿರುದ್ಧ ಹೋರಾಟದ ಮೂಲಕ ಅಂಬೇಡ್ಕರ್ ಅವರು ತಮ್ಮ ಜೀವಮಾನವನ್ನು ಕಳೆದಿದ್ದಾರೆ. ಈ ಮೇರು ಪರ್ವತಗಳಿಗೆ ಯಾವುದೇ ರಾಜಾಶ್ರಯಗಳು ಇರಲಿಲ್ಲ. ಮೇಲ್ವರ್ಗದವರ ವಿರೋಧದ ನಡುವೆಯೂ ತಳ ಸಮುದಾಯಗಳಿಗೆ ಸಾಮಾಜಿಕ ನ್ಯಾಯವನ್ನು ದೊರಕಿಸಿಕೊಟ್ಟಿದ್ದಾರೆ. ಇವರ ವಿಚಾರಧಾರೆಗಳು ಸರ್ವ ಕಾಲಕ್ಕೂ ಪ್ರಸ್ತುತ. ತತ್ವಾದರ್ಶಗಳ ಪಾಲನೆಯಿಂದ ಮಾತ್ರ ಭಾರತೀಯ ಸಮಾಜ ಉನ್ನತೀಕರಣಗೊಳ್ಳಲು ಸಾಧ್ಯ ಎಂದು ತಿಳಿಸಿದರು.ಸಂವಿಧಾನ ರಚನೆ ಬಗ್ಗೆ ಹಲವರು ಟೀಕೆಗಳನ್ನು ಮಾಡುತ್ತಾರೆ. ಆ ಟೀಕೆಗಳಿಗೆ ಯಾವುದೇ ಆಧಾರವಿಲ್ಲ, ಅವು ದುರುದೇಶದಿಂದ ಕೂಡಿದ ಆರೋಪ. ಸಂವಿಧಾನ ರಚನಾ ಮಂಡಳಿಯಲ್ಲಿ ಹಲವರು ಇದ್ದರೂ, ದಿನದ 18 ಗಂಟೆಗಳ ಕಾಲ ಕೆಲಸ ಮಾಡಿದ ಏಕೈಕ ನಾಯಕ ಡಾ.ಬಿ.ಅಂಬೇಡ್ಕರ್ ಅವರು ಮಾತ್ರ ಎಂದು ರವಿ ಸ್ಮರಿಸಿದರು.

ಹರೀಶ್ ಮಾತನಾಡಿ, ಅಸಮಾನತೆ, ಅಸ್ಪೃಶ್ಯತೆ ಎಂಬುದು ರೂಪಾಂತರಗೊಂಡಿದೆ. ಆಧುನಿಕ ರೂಪದಲ್ಲಿ ಶೋಷಣೆ, ಅಸಮಾನತೆ, ಅಸ್ಪೃಶ್ಯತೆ ನಡೆಯುತ್ತಿದೆ. ಈ ಬಗ್ಗೆ ಶೋಷಿತ ಸಮುದಾಯಗಳಿಗೆ ಜಾಗೃತಿ ಅಗತ್ಯ ಎಂದು ಹೇಳಿದರು.

ಸಭೆಯಲ್ಲಿ ಜನಮುಖಿ ಟ್ರಸ್ ಕಾರ್ಯದರ್ಶಿ, ನಾಟಕ ಅಕಾಡೆಮಿ ಸದಸ್ಯ ಕುಂಬಾಪುರ ಬಾಬು, ನಗರಾಜ್ ಸಿಂಗ್, ಪುಟ್ಟಸ್ವಾಮಿ, ಡಾ.ಸಂದೀಪ್, ಗಿರಿಯಪ್ಪ, ಶಂಕರ್, ಶ್ರೀನಿವಾಸ್, ಎಚ್.ಸಿ.ರಾಮಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.

------

4ಕೆಆರ್ ಎಂಎನ್ 1.ಜೆಪಿಜಿ

ರಾಮನಗರ ತಾಲೂಕಿನ ಕುಂಬಾಪುರ ಕಾಲೋನಿಯಲ್ಲಿ ಜನಮುಖಿ ಟ್ರಸ್ಟ್ ವತಿಯಿಂದ ಅಂಬೇಡ್ಕರ್ ಮತ್ತು ಬಸವ ಜಯಂತಿ ಆಚರಿಸಲಾಯಿತು.