ಸಾರಾಂಶ
ಹೊಳವನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರ 12 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದು ಯಾವುದೇ ಗೋಜು ಗೊಂದಲಗಳಿಗೆ ಅವಕಾಶ ನೀಡದೆ ಚುನಾವಣೆ ಪ್ರಕ್ರಿಯೆ ಸೂಸುತ್ರವಾಗಿ ನಡೆಯಿತು.
ಕನ್ನಡಪ್ರಭ ವಾರ್ತೆ ಕೊರಟಗೆರೆ
ಹೊಳವನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರ 12 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದು ಯಾವುದೇ ಗೋಜು ಗೊಂದಲಗಳಿಗೆ ಅವಕಾಶ ನೀಡದೆ ಚುನಾವಣೆ ಪ್ರಕ್ರಿಯೆ ಸೂಸುತ್ರವಾಗಿ ನಡೆಯಿತು.ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನೂತನ ನಿರ್ದೇಶಕರಾಗಿ ಸಾಮಾನ್ಯ ವರ್ಗದಿಂದ ರಂಗರಾಜು, ಶಿವಕುಮಾರ್, ಸುರೇಶ್, ಮನ್ಸೂರ್ ಪಾಷ, ಮಲ್ಲಿಕಾರ್ಜುನಯ್ಯ, ಆಯ್ಕೆಯಾದರೆ, ಮಹಿಳಾ ಮೀಸಲು ಕ್ಷೇತ್ರದಿಂದ ನರಸಮ್ಮ, ಲತಾ, ಹಿಂದುಳಿದ ಎ ಕ್ಷೇತ್ರದಿಂದ ರವಿಕುಮಾರ್, ಹಿಂದುಳಿದ ಬಿ. ಕ್ಷೇತ್ರದಿಂದ ಮರುಡಪ್ಪ, ಪರಿಶಿಷ್ಟ ವರ್ಗದಿಂದ ಕೇಶವಮೂರ್ತಿ, ಪರಿಶಿಷ್ಟ ಜಾತಿಯಿಂದ ಜಯರಾಮು ಹಾಗೂ ಸಾಲಗಾರರಲ್ಲದ ಸಾಮಾನ್ಯ ಕ್ಷೇತ್ರದಿಂದ ಸ್ವಾತಿ ಅವರನ್ನು ಹೊಳವನಹಳ್ಳಿ, ಕರಕಲಘಟ್ಟ ದುಗ್ಗೇನಹಳ್ಳಿ, ಶಾಂತಲಿಂಗಯ್ಯನಪಾಳ್ಯ, ಕ್ಯಾಮೇನಹಳ್ಳಿ ಗ್ರಾಮದ ಮುಖಂಡರ ಒಮ್ಮತದಿಂದ ಅವಿರೋಧ ಆಯ್ಕೆ ಮಾಡಲಾಯಿತು ಎಂದು ಚುನಾವಣಾಧಿಕಾರಿಯಾದ ಗುರುರಾಜು ತಿಳಿಸಿದ್ದಾರೆ.
ತುಮಕೂರು ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಹನುಮಾನ್ ಮಾತನಾಡಿ ಗ್ರಾಮೀಣ ಭಾಗದ ರೈತರಿಗೆ ನೆರವು ನೀಡುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಭಿವೃದ್ಧಿಗಾಗಿ ಹೊಳವನಹಳ್ಳಿ ಸೇರಿದಂತೆ ಇದಕ್ಕೆ ಸಂಬಂಧಿಸಿದ ಗ್ರಾಮಗಳ ಮುಖಂಡರ ಸಹಕಾರದಿಂದ ಹಾಗೂ ಡಿಸಿಸಿ ಬ್ಯಾಂಕ್ ಜಿಲ್ಲಾ ಅಧ್ಯಕ್ಷರಾದ ಕೆ.ಎನ್.ರಾಜಣ್ಣ ಅವರ ಆದೇಶದಂತೆ ಎಲ್ಲಾ ವರ್ಗದ ಕ್ಷೇತ್ರಗಳಿಗೆ ಅವಿರೋಧ ಮಾಡಿರುವುದು ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ಸಂಘದ ಅಭಿವೃದ್ಧಿಗಾಗಿ ಸದಾ ನಿಮ್ಮ ಜೊತೆ ಇರುತ್ತೇನೆ. ಎಲ್ಲಾ ನಿರ್ದೇಶಕರಿಗೆ ಅಭಿನಂದನೆಗಳು ಎಂದು ತಿಳಿಸಿದರು.ಕೊರಟಗೆರೆ ಡಿಸಿಸಿ ಬ್ಯಾಂಕ್ ಮೇಲ್ವಾಚರಕರಾದ ಬೋರಣ್ಣ ಮಾತನಾಡಿ ಒಂದು ಸಹಕಾರ ಸಂಘ ಅಭಿವೃದ್ಧಿ ಆಗಬೇಕಾದರೆ ಸ್ಥಳೀಯ ಮುಖಂಡರು ರೈತರು ವರ್ತಕರು, ಹಾಗೂ ಸಾರ್ವಜನಿಕರ ಸಹಕಾರ ಅಗತ್ಯವಾದುದ್ದು, ಡಿಸಿಸಿ ಬ್ಯಾಂಕ್ ಜಿಲ್ಲಾ ಅಧ್ಯಕ್ಷರಾದ ಕೆ.ಎನ್.ರಾಜಣ್ಣ ಅವರು ರೈತರಿಗಾಗಿ ಅನೇಕ ಯೋಜನೆಗಳನ್ನ ಜಾರಿಗೆ ತಂದಿದ್ದು, ಸಾಕಷ್ಟು ರೈತರಿಗೆ ಅನುಕೂಲ ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು.ಇದೆ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆಶ್ವಥ್‌ನಾರಾಯಣ್, ಗ್ರಾಪಂ ಸದಸ್ಯ ಶಂಶಾದ್ ಅಲಿ, ರವಿಕುಮಾರ್, ಮುಖಂಡರಾದ ಮೋಹನ್, ರಂಗನಾಥ್, ಸುರೇಶ್, ಕೇಶವಮೂರ್ತಿ, ಜಯರಾಮು, ಮಲ್ಲಿಕಾರ್ಜುನಯ್ಯ, ನಾಸೀರ್, ಉಮೇಶ್, ಮನ್ಸೂರ್ ಪಾಷ, ಶಿವಣ್ಣ, ರಂಗರಾಜು, ಮರುಡಪ್ಪ, ಮೋಹನ್, ಜಯರಾಜ್, ಮಕ್ತಿಯಾರ್, ರವಿಕುಮಾರ್, ಸೇರಿದಂತೆ ಇತರರು ಇದ್ದರು.