ಸಾರಾಂಶ
ಕನ್ನಡಪ್ರಭ ವಾರ್ತೆ ಬಸವಾಪಟ್ಟಣ
ಇಲ್ಲಿಗೆ ಸಮೀಪದ ಕೇರಳಾಪುರ ಗ್ರಾಮದ ಕೃಷಿಪತ್ತಿನ ಸಹಕಾರಿ ಸಂಘದ ಉಳಿದ ಅವಧಿಗೆ ಅವಿರೋಧವಾಗಿ ಕೃಷಿಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ಸುರೇಶ್ ಅಧ್ಯಕ್ಷರಾಗಿ ಆಯ್ಕೆಯಾದವರು.ಹಾಗೆಯೇ ಉಪಾಧ್ಯಕ್ಷರಾಗಿ ಶಿವಮೂರ್ತಿಯವರು ಅವಿರೋಧವಾಗಿ ಆಯ್ಕೆಯಾದರು. ಶನಿವಾರ ನಡೆದ ಅಧ್ಯಕ್ಷರ ಪ್ರಕ್ರಿಯೆಯಲ್ಲಿ ಹಾಸನ ಜಿಲ್ಲಾ ಸಕಲೇಶಪುರ ಸಹಕಾರಿ ಇಲಾಖೆಯ ಉಪನಿರ್ಬಂಧಕರ ಕಚೇರಿಯ ಕುಮಾರ್‌ರವರು ಚುನಾವಣಾ ಪ್ರಕ್ರಿಯೆಯನ್ನು ನಡೆಸಿದರು. ಆಯ್ಕೆಯಾದ ನೂತನ ಅಧ್ಯಕ್ಷರಿಗೆ ಅರಕಲಗೂಡು ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಮಂಜು, ಹಾಸನ ಜಿಲ್ಲಾ ಕೃಷಿಪತ್ತಿನ ಜಿಲ್ಲಾ ಸಹಕಾರಿ ಸಂಘದ ನಿರ್ದೇಶಕರಾದ ಕೆ.ಸತೀಶ್, ಕೇರಳಾಪುರ ಗ್ರಾಮಪಂಚಾಯ್ತಿ ಮಾಜಿ ಅಧ್ಯಕ್ಷರಾದ ಕರೀಗೌಡ, ಕೃಷಿಪತ್ತಿನ ಸಹಕಾರಿ ಸಂಘದ ಮಾಜಿ ಅಧ್ಯಕ್ಷರಾದ ಮಂಜುನಾಥ್, ಯೋಗೇಶ್, ಮಾಜಿ ಅಧ್ಯಕ್ಷರಾದ ಕೆ.ವೈ ರವಿ, ಲಕ್ಷಣ, ಕಲ್ಯಾಣಮ್ಮ, ನಿರ್ದೇಶಕರಾದ ಜರ್ನಾಧನ ಅಲ್ಲದೆ ಕೇರಳಾಪುರ ಕೃಷಿಪತ್ತಿನ ನಿರ್ದೇಶಕರು, ಎ.ಮಂಜು ಅಭಿಮಾನಿಗಳು ನೂತನ ಅಧ್ಯಕ್ಷರಿಗೆ ಶುಭಾಶಯಗಳನ್ನು ಕೋರಿದ್ದು, ಆಯ್ಕೆಯ ನಂತರ ಸಿಹಿ ಹಂಚಿ ಸಂಭ್ರಮಿಸಿದರು. ನೂತನ ಅಧ್ಯಕ್ಷರಾದ ಸುರೇಶ್‌ರವರು ಮಾತನಾಡಿ, ರೈತರಿಗೆ ಹೆಚ್ಚಿನ ನೆರವು ಒದಗಿಸಲು ಶ್ರಮಿಸುವುದಾಗಿ ತಿಳಿಸಿ ಎಲ್ಲರ ಸಹಕಾರ ಕೋರಿದರು.