ಪಾವತಿಯಾಗದ ಡಿಸೇಲ್ ಬಿಲ್: ಕಸ ಸಂಗ್ರಹ ವಾಹನಗಳ ಸಂಚಾರ ಬಂದ್

| Published : Jun 09 2024, 01:30 AM IST

ಸಾರಾಂಶ

ಬೀರೂರು, ಒಂದು ದಿನ ಮನೆ ಮುಂದೆ ಸಂಗಹ್ರವಾದ ಕಸ ಅಲ್ಲಿಯೇ ಉಳಿದು ಬಿಟ್ಟರೆ ಎಷ್ಟು ಗಬ್ಬು ನಾರುತ್ತದೆಯೋ ಅಂತಹದರಲ್ಲಿ ಕಳೆದ ಒಂದು ವಾರದಿಂದ ಪೌರಕಾರ್ಮಿಕರು ತೆಗೆದ ಕಸ ಅಲ್ಲಿಯೇ ಉಳಿದು ಬಿಟ್ಟರೇ ನಾಗರಿಕರ ಕಥೆ ಏನಾಗಬೇಕು?. ಜೊತೆಗೆ ಡೆಂಘೀ, ಟೈಫಾಯಿಡ್ ಮತ್ತಿತರ ಕಾಯಿಲೆಗಳು ಇಂತಹ ಕಸದಿಂದಲೇ ಸೊಳ್ಳೆಗಳ ಹಾವಳಿ ಹೆಚ್ಚುತ್ತದೆ ಎಂದು ತಿಳಿದಿದ್ದರೂ ತಮ್ಮ ತಾತ್ಸಾರ ಮನೋಭಾವದಿಂದ ಪುರಸಭೆ ಅಧಿಕಾರಿಗಳು ಇಂದು ಎಲ್ಲಾ ಕಸವಿಲೇವಾರಿ ವಾಹನಗಳು ಸ್ಥಗಿತವಾಗಲು ಕಾರಣವಾಗಿದ್ದು, ಈ ಸ್ಥಿತಿಯನ್ನು ನಾಗರಿಕರು ಎದುರಿಸುವಂತಾಗಿದೆ

- ಕಳೆದ 10ತಿಂಗಳಿನಿಂದ 11.5ಲಕ್ಷ ರು. ಪೆಟ್ರೋಲ್‌ ಬಂಕ್‌ಗೆ ಬಾಕಿಪಾವತಿ ಮಾಡಿಲ್ಲಕನ್ನಡಪ್ರಭ ವಾರ್ತೆ, ಬೀರೂರುಒಂದು ದಿನ ಮನೆ ಮುಂದೆ ಸಂಗಹ್ರವಾದ ಕಸ ಅಲ್ಲಿಯೇ ಉಳಿದು ಬಿಟ್ಟರೆ ಎಷ್ಟು ಗಬ್ಬು ನಾರುತ್ತದೆಯೋ ಅಂತಹದರಲ್ಲಿ ಕಳೆದ ಒಂದು ವಾರದಿಂದ ಪೌರಕಾರ್ಮಿಕರು ತೆಗೆದ ಕಸ ಅಲ್ಲಿಯೇ ಉಳಿದು ಬಿಟ್ಟರೇ ನಾಗರಿಕರ ಕಥೆ ಏನಾಗಬೇಕು?. ಜೊತೆಗೆ ಡೆಂಘೀ, ಟೈಫಾಯಿಡ್ ಮತ್ತಿತರ ಕಾಯಿಲೆಗಳು ಇಂತಹ ಕಸದಿಂದಲೇ ಸೊಳ್ಳೆಗಳ ಹಾವಳಿ ಹೆಚ್ಚುತ್ತದೆ ಎಂದು ತಿಳಿದಿದ್ದರೂ ತಮ್ಮ ತಾತ್ಸಾರ ಮನೋಭಾವದಿಂದ ಪುರಸಭೆ ಅಧಿಕಾರಿಗಳು ಇಂದು ಎಲ್ಲಾ ಕಸವಿಲೇವಾರಿ ವಾಹನಗಳು ಸ್ಥಗಿತವಾಗಲು ಕಾರಣವಾಗಿದ್ದು, ಈ ಸ್ಥಿತಿಯನ್ನು ನಾಗರಿಕರು ಎದುರಿಸುವಂತಾಗಿದೆ.ಕಸ ವಿಲೇವಾರಿ ಟ್ರಾಕ್ಟರ್, ಟಿಪ್ಪರ್ ಗಾಡಿಗಳು ಪುರಸಭೆ ಕಚೇರಿ ಹಿಂಭಾಗದಲ್ಲಿ ಅಲುಗಾಡದೆ ನಿಂತಿವೆ. ಇದಕ್ಕೆ ಕಾರಣ ಅವರು ನಿಗದಿಪಡಿಸಿದ್ದ ಪೆಟ್ರೋಲ್ ಬಂಕ್‌ಗೆ ಕಳೆದ 1 ವರ್ಷದಿಂದ ಹಾಕಿಸಿದ್ದ ಡಿಸೇಲ್ ಬಿಲ್ ಪಾವತಿಸಿಲ್ಲ. ಪರಿಣಾಮ ಪೆಟ್ರೋಲ್ ಬಂಕ್ ಮಾಲೀಕನ ನಿಲುವಿನಿಂದ ಇದೀಗ ಸಂಕಷ್ಟ ಎದುರಾಗಿದೆ.ಪಟ್ಟಣದಲ್ಲಿ ಪ್ರತಿ ದಿನ 9 ಟನ್ ಹಸಿ ಮತ್ತು ಒಣ ಕಸ ಪ್ರತಿ ಮನೆ, ಹೋಟೆಲ್ ಅಂಗಡಿ ಮುಂಗಟ್ಟು ಮತ್ತಿತರ ಪ್ರದೇಶಗಳಿಂದ ಸಂಗ್ರಹವಾಗುತ್ತದೆ. ಇದನ್ನು ವಿಲೇವಾರಿ ಮಾಡಲು ಪುರಸಭೆಯಲ್ಲಿ 3 ಟ್ರಾಕ್ಟರ್ 5ಆಟೋ ಟಿಪ್ಪರ್ ಹಾಗೂ 2 ಜೆಸಿಬಿ ಮತ್ತಿತರ ವಾಹನಗಳಿಗೆ ಪ್ರತಿ ತಿಂಗಳು 1.40 ಲಕ್ಷ ಹಣಪಾವತಿ ಮಾಡ ಬೇಕಾಗುತ್ತದೆ. ಆದರೆ ಅಧಿಕಾರಿಗಳ ತಾತ್ಸಾರದಿಂದ ದಿನನಿತ್ಯ ಅಗತ್ಯದ ಇಂಧನದ ಬಿಲ್ ನೀಡದೆ 10 ತಿಂಗಳ ಬಿಲ್ ಒಟ್ಟು ಮೊತ್ತ 11 ಲಕ್ಷ ರು.ಬಾಕಿ ಉಳಿವ ಸ್ಥಿತಿ ಇಂದು ತಲುಪಿದೆ.ಕಳೆದ 1ವರ್ಷದಿಂದ ನಾವು ನಮ್ಮ ಬಂಕ್ ಮಾಲೀಕರು ಹೇಳಿದ ಹಾಗೇ ಪುರಸಭೆ ವಾಹನಗಳಿಗೆ ಪ್ರತಿನಿತ್ಯ ಡಿಸೇಲ್ ತುಂಬಿಸಿ ಕಳುಹಿಸುತ್ತಿದ್ದೆವು. ಆದರೆ ಈವರೆಗೂ ಎಷ್ಟೆ ಅಲೆದಾಡಿದರೂ ಪುರಸಭೆ ಬಿಲ್ ಪಾವತಿ ಮಾಡಿಲ್ಲ. ಹಾಗಾಗಿ ನಾವು ಡಿಸೇಲ್ ನೀಡುವುದನ್ನು ನಿಲ್ಲಿಸಿದ್ದೇವೆ ಎಂದು ಹೆಸರು ಹೇಳಿಸಲಿಚ್ಚಿಸದ ಪೆಟ್ರೊಲ್ ಬಂಕ್ ಕಾರ್ಮಿಕ ಹೇಳುತ್ತಾರೆ.

ಸಾರ್ವಜನಿಕರು ಪುರಸಭೆಗೆ ಯಾವುದಾದರೂ ಕೆಲಸ, ಖಾತೆ, ಮತ್ತಿತರ ಕಾರ್ಯಗಳಿಗೆ ತೆರಳಿದಾಗ 100 ರು. ಕಂದಾಯ ಪಾವತಿ ಮಾಡದೇ ಇದ್ದರೆ ಯಾವ ಕೆಲಸ, ಕಾರ್ಯವೂ ಆಗದು ಇಂತಹ ಪರಿಸ್ಥಿತಿಯಲ್ಲಿ ಲಕ್ಷಾಂತರ ರು. ಮೌಲ್ಯದ ಬಿಲ್ ಪಾವತಿಸದಿದ್ದರೆ ...? , ದಿನ ನಿತ್ಯ ಬಳಕೆಗೆ ಬೇಕಾಗುವ ಇಂತಹ ತುರ್ತು ಅವಶ್ಯಕತೆ ಇರುವ ವಸ್ತುಗಳ ಖರೀದಿಗೆ ಪುರಸಭೆ ಹಣ ಮೀಸಲಿಡದಿದ್ದರೆ ನಾಗರಿಕರು ಪರಿತಪಿಸು ವಂತಾಗುವುದರಲ್ಲಿ ಸಂದೇಹವಿಲ್ಲ.ಜಿಲ್ಲಾಧಿಕಾರಿಗಳು ಮತ್ತು ಸಂಬಂಧಪಟ್ಟ ಇಲಾಖೆ ಪುರಸಭೆಗೆ ಭೇಟಿ ನೀಡಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ಇಲ್ಲಿನ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುತ್ತಾರೆಯೇ ಎಂದು ಕಾದು ನೋಡಬೇಕಾಗಿದೆ

--- ಕೋಟ್‌--

ಕಳೆದ ವಾರದ ಹಿಂದೆ ಹಾಲಪ್ಪ ಬಡಾವಣೆಯಲ್ಲಿ ಪುರಸಭೆ ಪೌರ ಕಾರ್ಮಿಕರು ಚರಂಡಿ ಮತ್ತಿತರ ಕಸ ತೆಗೆದು ಹೋಗಿದ್ದಾರೆ. ಆದರೆ ಅದನ್ನು ತುಂಬಿಕೊಳ್ಳಲು ಯಾರು ಬರುತ್ತಿಲ್ಲ. ಕೇಳಿದರೆ ಟ್ರಾಕ್ಟರ್ ಸರಿಯಿಲ್ಲ, ಡಿಸೇಲ್ ಇಲ್ಲ ಮತ್ತಿತರ ಕಾರಣಗಳನ್ನು ನೀಡುತ್ತಿದ್ದಾರೆ. ಒಂದೆಡೆ ಮಳೆ ಪ್ರತಿ ನಿತ್ಯ ಸುರಿಯುವ ಪರಿಣಾಮ ತೆಗೆದ ಕಸ ಮತ್ತೆ ಚರಂಡಿ ಸೇರುತ್ತಿದೆ. ಇದರಿಂದ ಚರಂಡಿ ಕಟ್ಟಿ , ಸೊಳ್ಳೆ ಗಳ ಅವಾಸ ಸ್ಥಾನವಾಗಿ ರೋಗಗಳು ಆಹ್ವಾನಿಸಿ ಆಸ್ಪತ್ರೆ ಹಾದಿ ಹಿಡಿಯುವಂತಾಗಿದೆ.

ಶಾಂತಮ್ಮ ಗೃಹಿಣಿ.--

ಈ ಹಿಂದಿನ ಮುಖ್ಯಾಧಿಕಾರಿಗಳು ಮಾಡಿದ ತಪ್ಪಿಗೆ ನಾವು ಈ ಪರಿಸ್ಥಿತಿ ಅನುಭವಿಸುವಂತಾಗಿದೆ. ನಾನು ಪ್ರಭಾರಿ ಮುಖ್ಯಾಧಿಕಾರಿಯಾಗಿ ಸದ್ಯ ಕಾರ್ಯನಿರ್ವಹಿಸುತ್ತಿದ್ದು ಸಮಸ್ಯೆಯನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು ಬಾಕಿ ಪಾವತಿ ಬಗ್ಗೆ ಪರಿಶೀಲನೆ ನಡೆಸಿ, ಆದ್ಯತೆ ಮೇರೆಗೆ ಬಿಲ್ ಪಾವತಿ ಮಾಡಲಾವುದು. ಸದ್ಯ ಬಂಕ್ ಮಾಲೀಕರನ್ನು ಕರೆಸಿ ಶೀಘ್ರ ಸಮಸ್ಯೆ ಬಗೆಹರಿಸಲಾಗುವುದು.

ಜಿ.ಪ್ರಕಾಶ್ ಪ್ರಭಾರ ಮುಖ್ಯಾಧಿಕಾರಿ

ಪುರಸಭೆ ಬೀರೂರು..

8 ಬೀರೂರು 1ಡಿಸೇಲ್ ಇಲ್ಲದೆ ಪುರಸಭೆ ಹಿಂಭಾಗದಲ್ಲಿ ತಟಸ್ಥವಾಗಿ ನಿಂತಿರುವ ಕಸವಿಲೆವಾರಿ ವಾಹನಗಳು.