ಮಾಹೆಯಲ್ಲಿ ಹೊಸ ಬಯೋ-ಎಲ್‌ಸಿ ವಿಶ್ಲೇಷಕ ವ್ಯವಸ್ಥೆಯ ಅನಾವರಣ

| Published : Mar 29 2024, 12:47 AM IST

ಮಾಹೆಯಲ್ಲಿ ಹೊಸ ಬಯೋ-ಎಲ್‌ಸಿ ವಿಶ್ಲೇಷಕ ವ್ಯವಸ್ಥೆಯ ಅನಾವರಣ
Share this Article
  • FB
  • TW
  • Linkdin
  • Email

ಸಾರಾಂಶ

ಮಾಹೆಯ ಮಣಿಪಾಲ್‌ ಸೆಂಟರ್‌ ಫಾರ್‌ ಬಯೊಥೆರಾಪಿಟಿಕ್ಸ್‌ ರೀಸರ್ಜ್‌ನಲ್ಲಿ ಅತ್ಯಾಧುನಿಕ ಏಜಿಲೆಂಟ್‌ ಬಯೊ-ಎಲ್‌ಸಿ ಇನ್‌ಫನೈಟಿ - 2 ವಿಶ್ಲೇಷಕ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಈ ವ್ಯವಸ್ಥೆಯನ್ನು ಮಾಹೆಯ ಕುಲಪತಿ ಲೆ.ಜ. ಡಾ. ಎಂ.ಡಿ. ವೆಂಕಟೇಶ್‌ ಮತ್ತು ಆರೋಗ್ಯ ವಿಜ್ಞಾನ ವಿಭಾಗದ ಸಹಕುಲಪತಿ ಡಾ. ಶರತ್‌ ಕೆ. ರಾವ್‌ ಜಂಟಿಯಾಗಿ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಮಣಿಪಾಲತನ್ನ ಸಂಶೋಧನ ಸಾಮರ್ಥ್ಯವನ್ನು ವಿಸ್ತರಿಸುವ ಪ್ರಮುಖ ಹೆಜ್ಜೆಯಾಗಿ ಮಾಹೆಯ ಮಣಿಪಾಲ್‌ ಸೆಂಟರ್‌ ಫಾರ್‌ ಬಯೊಥೆರಾಪಿಟಿಕ್ಸ್‌ ರೀಸರ್ಜ್‌ನಲ್ಲಿ ಅತ್ಯಾಧುನಿಕ ಏಜಿಲೆಂಟ್‌ ಬಯೊ-ಎಲ್‌ಸಿ ಇನ್‌ಫನೈಟಿ - 2 ವಿಶ್ಲೇಷಕ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಈ ವ್ಯವಸ್ಥೆಯನ್ನು ಮಾಹೆಯ ಕುಲಪತಿ ಲೆ.ಜ. ಡಾ. ಎಂ.ಡಿ. ವೆಂಕಟೇಶ್‌ ಮತ್ತು ಆರೋಗ್ಯ ವಿಜ್ಞಾನ ವಿಭಾಗದ ಸಹಕುಲಪತಿ ಡಾ. ಶರತ್‌ ಕೆ. ರಾವ್‌ ಜಂಟಿಯಾಗಿ ಉದ್ಘಾಟಿಸಿದರು.

ನಂತರ ಡಾ. ಎಂ.ಡಿ. ವೆಂಕಟೇಶ್‌ ಅವರು, ಈ ಅತ್ಯಾಧುನಿಕ ಸೌಲಭ್ಯವನ್ನು ವಿಜ್ಞಾನಿಗಳು, ಸಂಶೋಧಕರು ಬಳಸಿಕೊಳ್ಳಬೇಕು. ಇದನ್ನು ಕೇವಲ ವರ್ತಮಾನ ಕಾಲದ ಅಗತ್ಯಕ್ಕಾಗಿ ಸ್ಥಾಪಿಸಲಾಗಿಲ್ಲ. ಭವಿಷ್ಯದ ವಿಜ್ಞಾನದ ಸಂಶೋಧನ ಕ್ಷೇತ್ರಕ್ಕೂ ಮತ್ತು ಉಪಕ್ರಮಗಳಿಗೆ ಬಲವಾದ ಅಡಿಪಾಯವನ್ನು ಹಾಕಲಿದೆ ಎಂದರು.ಡಾ. ಶರತ್‌ ರಾವ್‌ ಅವರು, ನಿರಂತರವಾದ ಸಂಶೋಧನ ಪ್ರಕ್ರಿಯೆಯನ್ನು ಉತ್ತೇಜಿಸುವುದಕ್ಕಾಗಿ ‘ಮಾಹೆ ಶೀಘ್ರದಲ್ಲೇ ಸಂಶೋಧನ ಪಾರ್ಕ್‌ ನಿರ್ಮಿಸಲಿದೆ ಎಂದರು.ಎಜಿಲೆಂಟ್‌ ಟೆಕ್ನಾಲಜೀಸ್‌ ಇಂಡಿಯ ಪ್ರೈ ಲಿ.ನ ಮಾರುಕಟ್ಟೆ ಅಭಿವೃದ್ಧಿ ವ್ಯವಸ್ಥಾಪಕ ಡಾ. ವಾದಿರಾಜ ಭಟ್‌, ಮಾಹೆಯ ಡೆರೆಕ್ಟೋರೇಟ್‌ ಆಫ್‌ ರೀಸರ್ಚ್‌ನ ನಿರ್ದೇಶಕ ಡಾ. ಬಿ.ಎಸ್‌. ಸತೀಶ್‌ ರಾವ್‌ ಮುಖ್ಯ ಅತಿಥಿಗಳಾಗಿದ್ದರು.

ಮಣಿಪಾಲ್‌ ಸೆಂಟರ್‌ ಫಾರ್‌ ಬಯೊಥೆರಾಪಿಟಿಕ್ಸ್‌ ರೀಸರ್ಜ್‌ನ ಪ್ರಾಧ್ಯಾಪಕ ಮತ್ತು ಸಂಯೋಜಕ ಡಾ. ರವಿರಾಜ ಎನ್‌. ಎಸ್‌. ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸಂಶೋಧನ ಕ್ಷೇತ್ರದಲ್ಲಿ ಮಾಹೆಯು ‘ಸಂಶೋಧನಾ ಶ್ರೇಷ್ಠತೆಯ ವರ್ಷ’ದ ಆಚರಣೆಯನ್ನು ನಡೆಸುತ್ತಿದ್ದು, ಮಾಹೆಯ ವಿಜ್ಞಾನಿಗಳ ಮತ್ತು ಸಂಶೋಧಕರ ಸಮೂಹ ಪ್ರಯತ್ನದಿಂದಾಗಿ ಸಂಶೋಧನ ಪ್ರಕ್ರಿಯೆಯು ನಿರಂತರವಾಗಿ ಮುಂದುವರಿದಿದೆ ಎಂದರು.

ಈ ಸೌಲಭ್ಯದ ಸಂಯೋಜಕ ಡಾ. ಸೌವಿಕ್ ಡೇ ಉಪಸ್ಥಿತರಿದ್ದರು. ಮಣಿಪಾಲ್‌ ಸೆಂಟರ್‌ ಫಾರ್‌ ಬಯೊಥೆರಾಪಿಟಿಕ್ಸ್‌ ರೀಸರ್ಚ್‌ನ ಸಹಾಯಕ ಪ್ರಾಧ್ಯಾಪಕ ರಾಘವೇಂದ್ರ ಉಪಾಧ್ಯ ಧನ್ಯವಾದ ಸಮರ್ಪಿಸಿದರು. ಅದಿತಿ ಖಾಮಮ್‌ಕರ್‌ ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು.