ಯುಪಿಎಂಸಿ: ಜೀವನ ಕೌಶಲ ಕಾರ್ಯಾಗಾರ

| Published : Sep 06 2024, 01:02 AM IST

ಸಾರಾಂಶ

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಶಿಕ್ಷಕ ದಿನಾಚರಣೆ ಅಂಗವಾಗಿ ಬಿ.ಕಾಂ ಮತ್ತು ಬಿಬಿಎ ಪದವಿ ವಿದ್ಯಾರ್ಥಿಗಳಿಗೆ ಜೀವನ ಕೌಶಲ ಅಭಿವೃದ್ಧಿಯ ಕುರಿತು ವಿಶೇಷ ಕಾರ್ಯಾಗಾರ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಇಲ್ಲಿನ ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಗುರುವಾರ ಶಿಕ್ಷಕ ದಿನಾಚರಣೆ ಅಂಗವಾಗಿ ಬಿ.ಕಾಂ ಮತ್ತು ಬಿಬಿಎ ಪದವಿ ವಿದ್ಯಾರ್ಥಿಗಳಿಗೆ ಜೀವನ ಕೌಶಲ ಅಭಿವೃದ್ಧಿಯ ಕುರಿತು ವಿಶೇಷ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಯಿತು.ಲೈಫ್ಸ್ ಸ್ಕಿಲ್ ಟ್ರೈನರ್ ಆಗಿರುವ ಅಂಕೋಲದ ನೇಚರ್ ಬೌಂಡ್ ಸಹ್ಯಾದ್ರಿ ಇದರ ನಿರ್ದೇಶಕ ಪಿ.ಜಿ. ಕೊಣ್ಣೂರ್ ಅವರು, ವಿದ್ಯಾರ್ಥಿಗಳಿಗೆ ಪದವಿ ಜೀವನದಲ್ಲಿ ಜೀವನ ಕೌಶಲಗಳನ್ನು ಅಳವಡಿಸಿಕೊಂಡಲ್ಲಿ ಮಾತ್ರ ಮುಂದಿನ ವೃತ್ತಿ ಜೀವನದಲ್ಲಿ ಯಶಸ್ಸುಗಳಿಸಲು ಸಾಧ್ಯ. ಹಾಗೆಯೇ ಮುಂದಿನ ದಿನದಲ್ಲಿ ವರ್ಷಕ್ಕೆ ಸಾಕಷ್ಟು ಉದ್ಯೋಗಾವಕಾಶ ಸೃಷ್ಟಿ ಆದರೂ ಕೇವಲ ಪದವಿ ಸರ್ಟಿಫಿಕೆಟ್ ಪಡೆದ ವಿದ್ಯಾರ್ಥಿಗಳು ಸಿಗುತ್ತಾರೆ ವಿನಃ ಕೌಶಲಭರಿತ ಅಭ್ಯರ್ಥಿ ಸಿಗುವುದು ತುಂಬಾ ವಿರಳವಾಗುತ್ತಿದೆ ಎಂದು ವಿಷಾದಿಸಿ, ಲೈಫ್ ಸ್ಕಿಲ್ ಅತೀ ಅವಶ್ಯ ಎಂದು ಕೆಲವು ಉದಾಹರಣೆಗಳ ಮುಖೇನ ತಿಳಿಸಿದರು.ಕಾಲೇಜಿನ ಹಳೆ ವಿದ್ಯಾರ್ಥಿ ಹಾಗೆಯೇ ಪ್ರಸ್ತುತ ಶ್ರೀ ಭಾರತೀ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ ಇದರ ನಿರ್ದೇಶಕ ಗಿರೀಶ್ ಎಂ. ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ಪ್ರಾಚಾರ್ಯರಾದ ಆಶಾ ಕುಮಾರಿ ಅಧ್ಯಕ್ಷರಾಗಿದ್ದರು.ವಾಣಿಜ್ಯ ಉಪನ್ಯಾಸಕ ಹರಿಕೇಶವ್ ಸ್ವಾಗತಿಸಿದರು. ರಾಜೇಶ್ ಕುಮಾರ್ ವಂದಿಸಿದರು. ರಾಘವೇಂದ್ರ ಜಿ.ಜಿ. ಕಾರ್ಯಕ್ರಮ ನಿರೂಪಿಸಿದರು.