ವಿಪ ಚುನಾವಣೆಯಲ್ಲಿ ಉಪ್ಪಾರರಿಗೆ ಆದ್ಯತೆ ನೀಡಬೇಕು

| Published : May 27 2024, 01:08 AM IST

ವಿಪ ಚುನಾವಣೆಯಲ್ಲಿ ಉಪ್ಪಾರರಿಗೆ ಆದ್ಯತೆ ನೀಡಬೇಕು
Share this Article
  • FB
  • TW
  • Linkdin
  • Email

ಸಾರಾಂಶ

ಹಿಂದುಳಿದ ಶೋಷಿತ ಸಮುದಾಗಳಲ್ಲಿ 2ನೇ ಅತಿ ದೊಡ್ಡ ಸಮಾಜ, ರಾಜ್ಯದಲ್ಲಿ 35 ಲಕ್ಷ ಜನಸಂಖ್ಯೆ ಹೊಂದಿರುವ ಉಪ್ಪಾರ ಸಮಾಜವು 224 ವಿಧಾನಸಭಾ ಕ್ಷೇತ್ರದ ಪೈಕಿ 35 ಕ್ಷೇತ್ರದ ನಿರ್ಣಾಯಕವಾಗಿದೆ. ಇಂತಹ ಸಮಾಜಕ್ಕೆ ವಿಧಾನ ಪರಿಷತ್‌ಗೆ ಅವಕಾಶ ನೀಡುವಂತೆ ದೂಡಾ ಮಾಜಿ ಅಧ್ಯಕ್ಷ, ಹಿರಿಯ ವಕೀಲ ಎ.ವೈ.ಪ್ರಕಾಶ ಒತ್ತಾಯಿಸಿದ್ದಾರೆ.

- ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಹಿರಿಯ ವಕೀಲ ಎ.ವೈ.ಪ್ರಕಾಶ ಮನವಿ - - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಹಿಂದುಳಿದ ಶೋಷಿತ ಸಮುದಾಗಳಲ್ಲಿ 2ನೇ ಅತಿ ದೊಡ್ಡ ಸಮಾಜ, ರಾಜ್ಯದಲ್ಲಿ 35 ಲಕ್ಷ ಜನಸಂಖ್ಯೆ ಹೊಂದಿರುವ ಉಪ್ಪಾರ ಸಮಾಜವು 224 ವಿಧಾನಸಭಾ ಕ್ಷೇತ್ರದ ಪೈಕಿ 35 ಕ್ಷೇತ್ರದ ನಿರ್ಣಾಯಕವಾಗಿದೆ. ಇಂತಹ ಸಮಾಜಕ್ಕೆ ವಿಧಾನ ಪರಿಷತ್‌ಗೆ ಅವಕಾಶ ನೀಡುವಂತೆ ದೂಡಾ ಮಾಜಿ ಅಧ್ಯಕ್ಷ, ಹಿರಿಯ ವಕೀಲ ಎ.ವೈ.ಪ್ರಕಾಶ ಒತ್ತಾಯಿಸಿದ್ದಾರೆ.

ರಾಜ್ಯದಲ್ಲಿ ಪ್ರತಿ ಚುನಾವಣೆಯಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಉಪ್ಪಾರರು ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸುತ್ತಿದ್ದಾರೆ. ಇಂತಹ ಸಮಾಜ ರಾಜಕೀಯ ಪ್ರಾತಿನಿಧ್ಯದಿಂದ ವಂಚಿತವಾಗಿದೆ. ಲೋಕಸಭೆ, ವಿಧಾನಸಭೆ ಚುನಾವಣೆಯಲ್ಲೂ ಉಪ್ಪಾರ ಸಮಾಜಕ್ಕೆ ಅವಕಾಶ ನೀಡಲಿಲ್ಲ. ಸಮಾಜಕ್ಕೆ ಅವಕಾಶ ನೀಡದಿರುವುದಕ್ಕೆ ಏನು ಮಾಡದಂಡ ಎಂಬುದೇ ಅರ್ಥವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.

ವೃತ್ತಿಯಲ್ಲಿ ವಕೀಲನಾಗಿ, ಉಪ್ಪಾರ ಜನಾಂಗಕ್ಕೆ ಸೇರಿದ ತಾವು ಸಮಾಜ ಸಂಘಟನೆಯಲ್ಲೂ ಸಕ್ರಿಯವಾಗಿದ್ದೇನೆ. 35 ವರ್ಷದಿಂದ ಬಿಜೆಪಿಯಲ್ಲಿ ಸಕ್ರಿಯ ಕಾರ್ಯಕರ್ತ, ಯುವ ಮೋರ್ಚಾ ಅಧ್ಯಕ್ಷನಾಗಿದ್ದೇನೆ. 3 ಜಿಲ್ಲೆಗಳ ಕಾನೂನು ಪ್ರಕೋಷ್ಟದ ವಿಭಾಗೀಯ ಪ್ರಮುಖ, ಪಕ್ಷದ ಜಿಲ್ಲಾ ಕಾರ್ಯದರ್ಶಿ, ದೂಡಾ ಅಧ್ಯಕ್ಷನಾಗಿಯೂ ಸೇವೆ ಸಲ್ಲಿಸಿದ್ದೆನೆ. ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆಯಲ್ಲಿ ಬಿಜೆಪಿಯಿಂದ ರಾಜಕೀಯ ಪ್ರಾತಿನಿಧ್ಯ ವಂಚಿತವಾದ ಉಪ್ಪಾರ ಸಮಾಜಕ್ಕೆ ಅವಕಾಶ ನೀಡಬೇಕು. ಈ ಹಿನ್ನೆಲೆ ತಮ್ಮ ಹೆಸರನ್ನೂ ಪರಿಗಣಿಸುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಮನವಿ ಮಾಡಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷರಿಗೆ ಮನವಿ ಅರ್ಪಣೆ:

ವಿಧಾನ ಪರಿಷತ್ತು ಚುನಾವಣೆ ಹಿನ್ನೆಲೆ ನಗರಕ್ಕೆ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಆಗಮಿಸಿದ್ದ ವಿಜಯೇಂದ್ರ ಅವರನ್ನು ಭೇಟಿ ಮಾಡಿದ ಸಮಾಜದ ಮುಖಂಡರ ನಿಯೋಗ ವಿಧಾನ ಪರಿಷತ್‌ಗೆ ಚುನಾವಣೆಗೆ ಉಪ್ಪಾರ ಸಮಾಜಕ್ಕೆ ಅವಕಾಶ ನೀಡುವಂತೆ ಒತ್ತಾಯಿಸಿ ಮನವಿ ಸಲ್ಲಿಸಿತು. ಸಮಾಜದ ಜಿಲ್ಲಾಧ್ಯಕ್ಷ ಎಂ.ಸಿ.ರಮೇಶ, ಬಿಜೆಪಿ ಮುಖಂಡರಾದ ಮಾಜಿ ಉಪ ಮಹಾಪೌರ ಪಿ.ಎಸ್. ಜಯಣ್ಣ, ದೂಡಾ ಮಾಜಿ ಅಧ್ಯಕ್ಷ, ಹಿರಿಯ ವಕೀಲ ಎ.ವೈ.ಪ್ರಕಾಶ, ಓಬಿಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಯಕೊಂಡ ಎಂ.ಎನ್. ಮಂಜುನಾಥ, ದಕ್ಷಿಣ ಮಂಡಲ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹೊಸ ನಾಯಕನಹಳ್ಳಿ ಶಿವಮೂರ್ತಿ, ಉತ್ತರ ಕ್ಷೇತ್ರದ ಉಪಾಧ್ಯಕ್ಷ ದೊಡ್ಡಬಾತಿ ಬಿ.ಜಿ. ರೇವಣಸಿದ್ದಪ್ಪ, ಸಮಾಜದ ಬಿಜೆಪಿ ಮುಖಂಡರು ಇದ್ದರು.

- - --26ಕೆಡಿವಿಜಿ12:

ದಾವಣಗೆರೆಯಲ್ಲಿ ಬಿಜೆಪಿಯಿಂದ ವಿಧಾನ ಪರಿಷತ್‌ಗೆ ಉಪ್ಪಾರರಿಗೆ ಅವಕಾಶ ನೀಡುವಂತೆ ಒತ್ತಾಯಿಸಲು ಸಮಾಜದ ಮುಖಂಡರು ಸಭೆ ನಡೆಸಿದರು.