ಉಪ್ಪಿನಂಗಡಿ ಮಾಧವ ಶಿಶು ಮಂದಿರ: ಶ್ರೀಕೃಷ್ಣ ಜನ್ಮಾಷ್ಟಮಿ

| Published : Aug 28 2024, 12:53 AM IST

ಸಾರಾಂಶ

ಉಪ್ಪಿನಂಗಡಿ ವೇದಶಂಕರ ನಗರದಲ್ಲಿನ ಶ್ರೀ ಮಾಧವ ಶಿಶು ಮಂದಿರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ವಿವಿಧ ವಿನೋಧಾವಳಿಗಳೊಂದಿಗೆ ನಡೆಯಿತು. ಶಿವಪ್ರಸಾದ್-ಶುಭಶ್ರೀ ದಂಪತಿಗಳ ಮಗು ಶ್ರೀರಾಮನನ್ನು ಬಾಲಕೃಷ್ಣನಾಗಿ ತೊಟ್ಟಿಲ ತೂಗುವಿಕೆ ಶಾಸ್ತ್ರ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ

ಇಲ್ಲಿನ ವೇದಶಂಕರ ನಗರದಲ್ಲಿನ ಶ್ರೀ ಮಾಧವ ಶಿಶು ಮಂದಿರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ವಿವಿಧ ವಿನೋಧಾವಳಿಗಳೊಂದಿಗೆ ನಡೆಯಿತು.

ಯುವ ಉದ್ಯಮಿ ಶ್ರೀಕಾಂತ್ ಪಟೇಲ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಗೆಳೆಯರು ೯೪ ಇದರ ಅಧ್ಯಕ್ಷ ರಾಧಾಕೃಷ್ಣ ಭಟ್ ಬೊಳ್ಳಾವು ಭಾಗವಹಿಸಿದ್ದರು. ವೇದಿಕೆಯಲ್ಲಿ ಶಿಶು ಮಂದಿರದ ಅಧ್ಯಕ್ಷ ಮನೋಜ್ ಶೆಟ್ಟಿ, ಪೋಷಕ ಸಂಘದ ಅಧ್ಯಕ್ಷೆ ಶ್ರೀದೇವಿ , ಹಿರಿಯ ಸಮಾಜಸೇವಕ ಕಂಗ್ವೆ ವಿಶ್ವನಾಥ ಶೆಟ್ಟಿ, ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಮಾತೃ ಮಂಡಳಿ ಸಂಚಾಲಕಿ ಶ್ಯಾಮಲಾ ಶೆಣೈ ದೀಪ ಬೆಳೆಗಿಸಿ ಉದ್ಘಾಟಿಸಿದರು. ಶಿವಪ್ರಸಾದ್-ಶುಭಶ್ರೀ ದಂಪತಿಗಳ ಮಗು ಶ್ರೀರಾಮನನ್ನು ಬಾಲಕೃಷ್ಣನಾಗಿ ತೊಟ್ಟಿಲ ತೂಗುವಿಕೆ ಶಾಸ್ತ್ರ ನಡೆಸಲಾಯಿತು.

ಗಣ್ಯರಾದ ಹರಿರಾಮಚಂದ್ರ, ಯು ಜಿ ರಾಧಾ, ವಿದ್ಯಾಧರ ಜೈನ್, ಯು ರಾಜೇಶ್ ಪೈ, ಜಯಶ್ರೀ ಜನಾರ್ದನ್, ಸುಬ್ರಹ್ಮಣ್ಯ ಶೆಣೈ, ಚಂದ್ರಶೇಖರ್ ಮಡಿವಾಳ, ರಾಮಚಂದ್ರ ಮಣಿಯಾಣಿ, ಶಶಿಧರ್ ಶೆಟ್ಟಿ, ಸುನಿಲ್ ಸಂಗಮ್ , ಸುಧಾಕರ್ ಶೆಟ್ಟಿ, ಸುಜಾತ ಕೃಷ್ಣ ಆಚಾರ್ಯ, ಕಿಶೋರ್ ಜೋಗಿ, ಉಷಾಚಂದ್ರ ಮುಳಿಯ, ಅಚಲ್ ಉಬರಡ್ಕ, ಯತೀಶ್ ಶೆಟ್ಟಿ, ರಾಜು ಅಲಗುರಿ ಮಜಲು, ಜಗದೀಶ್ ಶೆಟ್ಟಿ, ರಮೇಶ್ ಕಟಿಲೇಶ್ವರಿ , ವಿಮಲಾ ತೇಜಾಕ್ಷಿ, ಚೈತ್ರಾ, ಕಾಂತಿಮಣಿ, ಚಂದ್ರಾವತಿ, ಯು ಕೆ ರೋಹಿತಾಕ್ಷ , ಹರೀಶ್ ಭಂಡಾರಿ, ವಿನೋದ್ ಕುಮಾರ್ ಮೊದಲಾದವರು ಭಾಗವಹಿಸಿದ್ದರು.

ಅಕ್ಷತಾ ಕಾರ್ಯಮ್ರಮ ನಿರ್ವಹಿಸಿದರು. ಭಾಗ್ಯಶ್ರೀ ಸ್ವಾಗತಿಸಿ, ಶ್ರೀದೇವಿ ವಂದಿಸಿದರು.