ಸಾರಾಂಶ
ಉಪ್ಪಿನಂಗಡಿ ಮಾಲಿಕ್ ದೀನಾರ್ ಜುಮಾ ಮಸೀದಿಯಲ್ಲಿ ಪ್ರವಾದಿ ಮುಹಮ್ಮದ್ ಪೈಗಂಬರರ ಜನ್ಮ ದಿನಾಚರಣೆ-ಈದ್ ಮೀಲಾದ್ ಅಂಗವಾಗಿ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ
ದೇವರ ಹೆಸರಿನಲ್ಲಿ ದೇವರಿಗೆ ಹಿತವಾಗದ ಕಾರ್ಯವನ್ನು ಯಾರೂ ಮಾಡಬಾರದು. ಪ್ರೀತಿ, ಸ್ನೇಹದಿಂದ ಸೌಹಾರ್ದತೆ ಮೆರೆದಾಗ ಮನೆ, ಊರು, ಸಮೂಹ, ಸಮಾಜವನ್ನೇ ಗೆಲುವುದಕ್ಕೆ ಸಾಧ್ಯ ಎಂದು ಉಪ್ಪಿನಂಗಡಿ ಮಾಲಿಕ್ ದೀನಾರ್ ಜುಮಾ ಮಸೀದಿಯ ಧರ್ಮಗುರು ಅಬ್ದುಲ್ ಸಲಾಂ ಫೈಝಿ ಎಡಪ್ಪಾಲ ಹೇಳಿದರು.ಅವರು ಸೋಮವಾರ ಮಾಲಿಕ್ ದೀನಾರ್ ಜುಮಾ ಮಸೀದಿಯಲ್ಲಿ ಪ್ರವಾದಿ ಮುಹಮ್ಮದ್ ಪೈಗಂಬರರ ಜನ್ಮ ದಿನಾಚರಣೆ-ಈದ್ ಮೀಲಾದ್ ಅಂಗವಾಗಿ ಹಮ್ಮಿಕೊಳ್ಳಲಾದ ಸಭಾಕಾರ‍್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಸೇವಾ ನಿರತರಿಗೆ ಸನ್ಮಾನ:
ಸಮಾರಂಭದಲ್ಲಿ ಕೆಲ ವರ್ಷಗಳ ಹಿಂದೆ ಜೋಡುಪಾಲದಲ್ಲಿ ನಡೆದ ಪ್ರಾಕೃತಿಕ ವಿಕೋಪ ಘಟನೆ, ಈಚೆಗೆ ವಯನಾಡಿನಲ್ಲಿ ನಡೆದ ದುರಂತ ಮೊದಲಾದ ಅವಘಡ ಸಂದರ್ಭದಲ್ಲಿ ಅಲ್ಲಿಗೆ ತೆರಳಿ ತನ್ನ ಪ್ರಾಣವನ್ನು ಲೆಕ್ಕಿಸದೆ ರಕ್ಷಣಾ ಕಾರ‍್ಯದಲ್ಲಿ ತೊಡಗಿಸಿಕೊಂಡ ಎಸ್.ಕೆ.ಎಸ್.ಎಸ್.ಎಫ್. ವಿಖಾಯ ತಂಡದ ಇಸ್ಮಾಯಿಲ್ ತಂಙಳ್, ಉಪ್ಪಿನಂಗಡಿ ಉಬಾರ್ ಡೋರ್ಸ್ ತಂಡದ ಶಬ್ಬೀರ್ ಕೆಂಪಿ, ಧಾರ್ಮಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಅಶ್ರಫ್ ಹನೀಫಿ ಅವರನ್ನು ಸನ್ಮಾನಿಸಲಾಯಿತು.ಮಾಲಿಕ್ ದೀನಾರ್ ಜುಮಾ ಮಸೀದಿ ಅಧ್ಯಕ್ಷ ಹೆಚ್. ಯೂಸುಫ್ ಹಾಜಿ ಅಧ್ಯಕ್ಷತೆ ವಹಿಸಿದ್ದರು.
ಸಮಾರಂಭದಲ್ಲಿ ಸಮಿತಿ ಪದಾಧಿಕಾರಿಗಳಾದ ಶುಕೂರ್ ಹಾಜಿ, ಅಶ್ರಫ್ ಹಾಜಿ ಕರಾಯ, ಮಹಮ್ಮದ್ ಮುಸ್ತಫಾ, ಅಗ್ನಾಡಿ ಹಾರೂನ್ ರಶೀದ್, ಅಬ್ದುಲ್ ಹಮೀದ್ ಕರಾವಳಿ, ಯೂಸುಫ್ ಪೆದಮಲೆ, ಮುನೀರ್ ಎನ್ಮಾಡಿ, ಮಹಮ್ಮದ್ ಕೂಟೇಲು, ಸಿದ್ದಿಕ್ ಕೆಂಪಿ, ರವೂಫ್ ಯು.ಟಿ., ಹಳೇಗೇಟು ಮದ್ರಸದ ಅಧ್ಯಕ್ಷ ರಶೀದ್, ಕುದುಲೂರು ಮದ್ರದಸ ಯೂಸುಫ್ ಹಾಜಿ, ಅಂಡೆತ್ತಡ್ಕ ಮದ್ರಸದ ಬಶೀರ್, ನಿನ್ನಿಕಲ್ ಮದ್ರಸದ ಫಾರೂಕ್, ಕಡವಿನಬಾಗಿಲು ಮದ್ರಸದ ಹನೀಫ್, ರಾಜತ್ರಗುರಿ ಮದ್ರಸದ ಸುಲೈಮಾನ್, ಪವಿತ್ರನಗರದ ಯು.ಟಿ. ರಹೀಂ, ವಿವಿಧ ಸಂಘ ಸಂಸ್ಥೆ ಪದಾಧಿಕಾರಿಗಳಾದ ಯು.ಟಿ. ತೌಸೀಫ್, ಇಬ್ರಾಹಿಂ ಆಚಿ, ಯು.ಟಿ. ಇರ್ಷಾದ್, ಶಬೀರ್ ನಂದಾವರ, ಇಬ್ರಾಹಿಂ ಸಿಟಿ, ಉಮ್ಮರ್ ಹಾಜಿ, ಝಕರಿಯಾ ಮುಸ್ಲಿಯಾರ್ ಮತ್ತಿತರರು ಉಪಸ್ಥಿತರಿದ್ದರು. ಅದ್ನಾನ್ ಅನ್ಸಾರ್ ಕುದುಲೂರು ಕಾರ‍್ಯಕ್ರಮ ನಿರೂಪಿಸಿದರು.ಕಾರ್ಯಕ್ರಮಕ್ಕೂ ಮುನ್ನ ಮಕ್ಕಳಿಂದ ಆಕರ್ಷಕ ಧಪ್ ಪ್ರದರ್ಶನಗಳೊಂದಿಗೆ ಮೆರವಣಿಗೆ ನಡೆಯಿತು.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))