ಉಪ್ಪಿನಂಗಡಿ: ಸಾಮೂಹಿಕ ಯೋಗ ಶಿವನಮಸ್ಕಾರ, ಶಿವಾಷ್ಟೋತ್ತರ ಶತನಾಮಾವಳಿ ಪಠಣ

| Published : Feb 27 2025, 12:36 AM IST

ಉಪ್ಪಿನಂಗಡಿ: ಸಾಮೂಹಿಕ ಯೋಗ ಶಿವನಮಸ್ಕಾರ, ಶಿವಾಷ್ಟೋತ್ತರ ಶತನಾಮಾವಳಿ ಪಠಣ
Share this Article
  • FB
  • TW
  • Linkdin
  • Email

ಸಾರಾಂಶ

ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಾಲಯದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಮಂಗಳೂರು, ಸುಳ್ಯ, ಬಂಟ್ವಾಳ ಹಾಗೂ ಉಪ್ಪಿನಂಗಡಿ ತಾಲೂಕುಗಳ ಯೋಗ ಬಂಧುಗಳ ಸಾಮೂಹಿಕ ಯೋಗ ಶಿವನಮಸ್ಕಾರ ಮತ್ತು ಶಿವಾಷ್ಟೋತ್ತರ ಶತನಾಮಾವಳಿ ಪಠಣ ಹಾಗೂ ಅರ್ಚನೆ ಕಾರ್ಯಕ್ರಮ ಬುಧವಾರ ಮುಂಜಾನೆ ನಡೆಯಿತು.

ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ

ಮಹಾಶಿವರಾತ್ರಿಯ ಪ್ರಯುಕ್ತ ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಾಲಯದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಮಂಗಳೂರು, ಸುಳ್ಯ, ಬಂಟ್ವಾಳ ಹಾಗೂ ಉಪ್ಪಿನಂಗಡಿ ತಾಲೂಕುಗಳ ಯೋಗ ಬಂಧುಗಳ ಸಾಮೂಹಿಕ ಯೋಗ ಶಿವನಮಸ್ಕಾರ ಮತ್ತು ಶಿವಾಷ್ಟೋತ್ತರ ಶತನಾಮಾವಳಿ ಪಠಣ ಹಾಗೂ ಅರ್ಚನೆ ಕಾರ್ಯಕ್ರಮ ಬುಧವಾರ ಮುಂಜಾನೆ ನಡೆಯಿತು.

ಪ್ರಾತಃ ಕಾಲ ದೇವಸ್ಥಾನದ ಕಾಳಿಕಾಂಬಾ ವೇದಿಕೆಯಲ್ಲಿ ಪ್ರಾರಂಭಗೊಂಡ ಈ ಕಾರ್ಯಕ್ರಮದಲ್ಲಿ ಯೋಗ ಬಂಧುಗಳಾದ ಗಾಯತ್ರಿ, ಚಂದ್ರಾವತಿ ರೈ, ವಿಮಲಾ, ಪದ್ಮಾವತಿ, ಚಂದ್ರಾವತಿ, ಮೋಹಿನಿ ಹಾಗೂ ದಯಾನಂದ ಭಜನೆ ನೆರವೇರಿಸಿದರು. , ಅಮೃತ ವಚನ ವಾಚನವನ್ನು ಸುನೀತಾ ಹಾಗೂ ಪಂಚಾಗ ಪಠಣವನ್ನು ರಾಜೇಂದ್ರ ಭಟ್ ಅವರು ನಿರ್ವಹಿಸಿದರು.

ಮಾನಸಿಕ ಸಿದ್ಧತೆಯಿಂದ ಯೋಗ ಗಣಪತಿ ನಮಸ್ಕಾರದ ಅವಧಿಯಲ್ಲಿ ವಿವರಣೆಯನ್ನು ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ನೇತ್ರಾವತಿ ವಲಯ ಶಿಕ್ಷಣ ಪ್ರಮುಖ ಆರ್ ಜೆ ಬಿರಾದಾರ್ ನಿರ್ವಹಿಸಿದರು. ಪ್ರಾತ್ಯಕ್ಷಿಕೆಯಲ್ಲಿ ಯೋಗಬಂಧುಗಳಾದ ಆಶಾ, ಸಂದೇಶ್, ಅನಿತಾ ಹಾಗೂ ನಾರಾಯಣ ಸಹಕರಿಸಿದರು.

ನಂತರ ಸಾಮೂಹಿಕ ಯೋಗ ಶಿವ ನಮಸ್ಕಾರವನ್ನು ದೇವಳದ ಅರ್ಚಕ ಮಧುಸೂಧನ ಕಲ್ಲೂರಾಯ ಉದ್ಘಾಟಿಸಿದರು.ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಪ್ರಾಂತ ಪ್ರಮುಖ್ ರವೀಶ್, ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಾಧಾಕೃಷ್ಣ ನಾಯಕ್, ವೃತ್ತನಿರೀಕ್ಷಕ ರವಿ ಬಿ ಎಸ್, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್, ಪುತ್ತೂರು ತಾಲೂಕು ಅಧ್ಯಕ್ಷ ಲೋಕೇಶ್ ಬೆತ್ತೋಡಿ, ನಿಕಟಪೂರ್ವ ನೇತ್ರಾವತಿ ವಲಯ ಸಂಚಾಲಕ ಗೋಕುಲನಾಥ್ , ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಗಳ ಮಾರ್ಗದರ್ಶಕಿ ಗೀತಾ, ಆನಂದ, ಸಂಚಾಲಕ ಸಂತೋಷ್ ಕುಮಾರ್ ಇದ್ದರು.

ಉಪ್ಪಿನಂಗಡಿ, ಸಹಸ್ರಲಿಂಗೇಶ್ವರ ಶಾಖೆಯ ಯೋಗ ಶಿಕ್ಷಕ ಗೋವಿಂದ ಪ್ರಸಾದ ಅವರು ಬೌದ್ದಿಕ್ ನೀಡಿದರು. 4 ಆವೃತ್ತಿಗಳಲ್ಲಿ 11 ಬಾರಿ ಯೋಗ ಶಿವನಮಸ್ಕಾರ ನಡೆಸಲಾಯಿತು. ಯೋಗ ಶಿಕ್ಷಕರಾದ ಸತ್ಯಶಂಕರ, ಶಿವಣ್ಣ, ಶರ್ಮಿಳಾ ಹಾಗೂ ಮೋಹನ್ ನಿರ್ವಹಿಸಿದರೆ, ಪ್ರಾತ್ಯಕ್ಷಿಕೆಯಲ್ಲಿ ವಿಜೇತ, ಸಂಜೀವ, ಭಾರತೀ, ಗಂಗಾಧರ, ಸುಧಾ, ಮುತ್ತಪ್ಪ, ಕೋಮಲ, ವಿನಯ್, ಸುಂದರಿ, ಪದ್ಮನಾಭ, ಸೌಮ್ಯ, ಭುಜಂಗ, ಜಯಂತಿ, ಪ್ರೀತೇಶ್, ಶಶಿ ಮತ್ತು ಶಿವಪ್ರಸಾದ್ ಸಹಕರಿಸಿದರು.

ಅಗ್ನಿಹೋತ್ರವನ್ನು ಸಹಸ್ರಲಿಂಗೇಶ್ವರ ಶಾಖೆ, ಉಪ್ಪಿನಂಗಡಿಯ ಯೋಗ ಬಂಧು ರಾಜೇಂದ್ರ ಭಟ್ ದಂಪತಿ ನಡೆಸಿದರೆ, ಯೋಗ ಸಂಕಲ್ಪವನ್ನು ತಾಲೂಕು ಶಿಕ್ಷಣ ಪ್ರಮುಖ್ ಪ್ರದೀಪ್ ನಿರ್ವಹಿಸಿದರು. ಆರೋಗ್ಯಪೂರ್ಣ ವ್ಯಾಯಾಮಗಳ ನಂತರ ಬಳಲಿದ ದೇಹ ಹಾಗೂ ಮನಸ್ಸುಗಳನ್ನು ಬೆಸೆಯುವ ಶವಾಸನ /ಅಮೃತಾಸನವನ್ನು ಪ್ರಾಂತ ಪ್ರಮುಖ್ ರವೀಶ್, ನಿರ್ವಹಿಸಿದರೆ ಪ್ರಾತ್ಯಕ್ಷಿಕೆಯಲ್ಲಿ ಚಂದ್ರಾವತಿ ರೈ, ಮೋಹನ್, ಶಶಿಕಲಾ ಮತ್ತು ಗಿರೀಶ್ ಸಹಕರಿಸಿದರು .

ನಂತರ ನಡೆದ ಶಿವಾಷ್ಟೋತ್ತರ ಶತನಾಮಾವಳಿ ಮಂತ್ರ ಪಠಣವನ್ನು ಸಹಸ್ರಲಿಂಗೇಶ್ವರ ಶಾಖೆ, ಉಪ್ಪಿನಂಗಡಿಯ ಯೋಗ ಬಂಧುಗಳಾದ ವೀಣಾ, ರಾಜೇಂದ್ರ ಭಟ್ ದಂಪತಿ ಮತ್ತು ಗಾಣಿಗ ಭವನ ಶಾಖೆ, ರಾಮನಗರ, ಉಪ್ಪಿನಂಗಡಿಯ ಪುಟಾಣಿ ಯೋಗಬಂಧುಗಳು ನಡೆಸಿಕೊಟ್ಟರು. ಕಾರ್ಯಕ್ರಮದ ನಿರೂಪಣೆಯನ್ನು ಕೊಯಿಲ ಸದಾಶಿವ ಶಾಖೆಯ ಯೋಗ ಶಿಕ್ಷಕರಾದ ಚೇತನ್ ನಡೆಸಿದ್ದು. ಮುರಳಿ ಮೋಹನ ವಂದಿಸಿದರು.

ಮಂಗಳೂರು, ಸುಳ್ಯ, ಬಂಟ್ವಾಳ, ಉಪ್ಪಿನಂಗಡಿ ತಾಲ್ಲೂಕಿನ 225 ಯೋಗ ಬಂಧುಗಳು ಹಾಗೂ 135 ಯೋಗೇತರ ಬಂಧುಗಳು ಭಾಗವಹಿಸಿದ್ದರು.