ಜಗದ್ಗುರುಗಳ ವಿರುದ್ಧ ಗಲಾಟೆ: ಕ್ರಮಕ್ಕೆ ಆಗ್ರಹಿಸಿ ಎಸ್ಪಿಗೆ ಮನವಿ

| Published : Feb 28 2024, 02:33 AM IST

ಜಗದ್ಗುರುಗಳ ವಿರುದ್ಧ ಗಲಾಟೆ: ಕ್ರಮಕ್ಕೆ ಆಗ್ರಹಿಸಿ ಎಸ್ಪಿಗೆ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯ ಕಲಾದಗಿ ಗ್ರಾಮದ ಗುರುಲಿಂಗೇಶ್ವರ ಮಠದ ಪೀಠಾಧಿಪತಿ ವಿವಾದದ ನೆಪದಲ್ಲಿ ರಂಭಾಪುರಿ ಶ್ರೀಗಳ ಆಗಮನ ವೇಳೆ ಗಲಾಟೆ ನಡೆಸಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಉದಗಟ್ಟಿ ಗ್ರಾಮದ ಭಕ್ತರಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಜಿಲ್ಲೆಯ ಕಲಾದಗಿ ಗ್ರಾಮದ ಗುರುಲಿಂಗೇಶ್ವರ ಮಠದ ಪೀಠಾಧಿಪತಿ ವಿವಾದದ ನೆಪದಲ್ಲಿ ರಂಭಾಪುರಿ ಶ್ರೀಗಳ ಆಗಮನ ವೇಳೆ ಗಲಾಟೆ ನಡೆಸಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಉದಗಟ್ಟಿ ಗ್ರಾಮದ ಭಕ್ತರಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.

ಕಲಾದಗಿ ಗ್ರಾಮದ ಮೂಲಕ ರಂಭಾಪುರಿ ಶ್ರೀಗಳು ಉದಗಟ್ಟಿಗೆ ತೆರಳುವ ವೇಳೆ ನಡೆದಿದ್ದ ಗಲಾಟೆ ಪ್ರಕರಣದಲ್ಲಿ ಭಾಗಿಯಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಉದಗಟ್ಟಿ ಗ್ರಾಮದ ಭಕ್ತರು ಮನವಿ ಮಾಡಿದರು.

ಕಲಾದಗಿ ಪೊಲೀಸ್ ಠಾಣೆಯಲ್ಲಿ ಘಟನೆ ಸಂಬಂಧ ಕಲಾದಗಿ ಗ್ರಾಮದ 59 ಜನರ ವಿರುದ್ಧ ದಾಖಲಾಗಿದ್ದ ಕೇಸನ್ನು ನೆನಪಿಸಿರುವ ಭಕ್ತರು, ಘಟನೆಯಿಂದ ಮಠದ ಭಕ್ತರಿಗೆ ತೀವ್ರ ನೋವುಂಟಾಗಿದೆ. ವಿವಾದ ಕೋರ್ಟ್‌ನಲ್ಲಿರುವಾಗ ವಿನಾಕಾರಣ ವಿವಾದ ಹುಟ್ಟು ಹಾಕೋದು ಸರಿಯಲ್ಲ. ಕೇಸ್ ದಾಖಲಾದರೂ ಆರೋಪಿಗಳ ದಸ್ತಗಿರಿ ಮಾಡದ್ದಕ್ಕೆ ನಮಗೆ ನೋವು ತಂದಿದೆ ಎಂದಿರುವ ಭಕ್ತರು, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಎಸ್ಪಿ ಬಳಿ ಮನವಿ ಮಾಡಿದರು.