ಸಾರಾಂಶ
ತಾಲೂಕಿನ ಕಾಡಂಚಿನ ಆಲತ್ತೂರು ಗ್ರಾಮದ ಕೃಷಿಕ ಕುಟುಂಬದ ಜಯಮ್ಮ, ಮಹದೇವೇಗೌಡರ ಪುತ್ರಿ ಚೈತ್ರ 2024ರಲ್ಲಿ ನಡೆದ ಯುಪಿಎಸ್ಸಿ ಇಎಸ್‌ಇ ಪರೀಕ್ಷೆಯಲ್ಲಿ 31ನೇ ರ್‍ಯಾಂಕ್‌ನಲ್ಲಿ ಪಡೆದು ಭಾರತ ಸರ್ಕಾರದ ದೂರ ಸಂಪರ್ಕ ಸಚಿವಾಲಯದಲ್ಲಿ ಜೂನಿಯರ್ ಟೆಲಿಕಾಂ ಆಫೀಸರ್ ಆಗಿ ಆಯ್ಕೆಗೊಂಡಿದ್ದಾರೆ.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ತಾಲೂಕಿನ ಕಾಡಂಚಿನ ಆಲತ್ತೂರು ಗ್ರಾಮದ ಕೃಷಿಕ ಕುಟುಂಬದ ಜಯಮ್ಮ, ಮಹದೇವೇಗೌಡರ ಪುತ್ರಿ ಚೈತ್ರ 2024ರಲ್ಲಿ ನಡೆದ ಯುಪಿಎಸ್ಸಿ ಇಎಸ್‌ಇ ಪರೀಕ್ಷೆಯಲ್ಲಿ 31ನೇ ರ್‍ಯಾಂಕ್‌ನಲ್ಲಿ ಪಡೆದು ಭಾರತ ಸರ್ಕಾರದ ದೂರ ಸಂಪರ್ಕ ಸಚಿವಾಲಯದಲ್ಲಿ ಜೂನಿಯರ್ ಟೆಲಿಕಾಂ ಆಫೀಸರ್ ಆಗಿ ಆಯ್ಕೆಗೊಂಡಿದ್ದಾರೆ.ಇವರು ಸ್ವಗ್ರಾಮದ ಆಲತ್ತೂರಿನ ಎಂಎಲ್‌ಜಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಪಟ್ಟಣದ ಕೆ.ಎಸ್.ನಾಗರತ್ನಮ್ಮ ಶಾಲೆಯಲ್ಲಿ 5ರಿಂದ 10ನೇ ತರಗತಿ, ಪಟ್ಟಣದ ಸರ್ಕಾರಿ ದೊಡ್ಡಹುಂಡಿ ಬೋಗಪ್ಪ ಕಾಲೇಜಿನಲ್ಲಿ ಪಿಯುಸಿ ಪೂರ್ಣಗೊಳಿಸಿದ್ದಾರೆ. ನಂತರ ಮೈಸೂರಿನ ಎಟಿಎಂಇ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿ ಮುಗಿಸಿದ್ದಾರೆ. ಬಳಿಕ ಯುಪಿಎಸ್ಸಿ ಇಎಸ್‌ಇ ಪರೀಕ್ಷೆಯಲ್ಲಿ 31ನೇ ರ್‍ಯಾಂಕ್‌ನಲ್ಲಿ ಪಡೆದು ಭಾರತ ಸರ್ಕಾರದ ದೂರ ಸಂಪರ್ಕ ಸಚಿವಾಲಯದಲ್ಲಿ ಜೂನಿಯರ್ ಟೆಲಿಕಾಂ ಆಫೀಸರ್ ಆಗಿ ಆಯ್ಕೆಗೊಂಡಿದ್ದಾರೆ. ಸೆ.8 ರಂದು ಗಾಜಿಯಾಬಾದಿನ ನ್ಯಾಷನಲ್ ಕಮ್ಯುನಿಕೇಶನ್ ಅಕಾಡೆಮಿಯಲ್ಲಿ ವೃತ್ತಿ ಜೀವನ ಪ್ರಾರಂಭಿಸಲಿದ್ದಾರೆ.