ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಹದಿ ಹರಯದಲ್ಲಿ ವಿದ್ಯಾರ್ಥಿಗಳು ಮೋಬೈಲ್ ಮತ್ತು ಬಾಯ್ ಫ್ರೆಂಡ್ಸ್ ಹಾಗೂ ಗರ್ಲ್ ಫ್ರೆಂಡ್ಸ್ ಗಳಿಂದ 2 ವರ್ಷದೂರವಿದ್ದು, ವಿದ್ಯಾಭ್ಯಾಸ ಮಾಡಿದಲ್ಲಿ ಪ್ರತಿ ವಿದ್ಯಾರ್ಥಿಯೂ ತಮ್ಮ ಜೀವನ ಮಾತ್ರವಲ್ಲದೇ ದೇಶದ ಭವಿಷ್ಯವನ್ನು ರೂಪಿಸಬಹುದು ಎಂದು ಕೋಲಾರ ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಎಂ.ನಾರಾಯಣ್ ಅಭಿಪ್ರಾಯಪಟ್ಟರು.ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಭಾನುವಾರ ಭಗತ್ ಸಿಂಗ್ ಚಾರಿಟಬಲ್ ಟ್ರಸ್ಟ್ ವತಿಯಿಂದ 2023-24 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ 60 ಕ್ಕಿಂತ ಹೆಚ್ಚು ಅಂಕ ಪಡೆದ ಚಿಕ್ಕಬಳ್ಳಾಪುರ ತಾಲಾಕಿನ ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ವರ್ಗದ ಸುಮಾರು 300 ವಿದ್ಯಾರ್ಥಿಗಳಿಗೆ ಸ್ಪಂದನ ವಿದ್ಯಾರ್ಥಿ ವೇತನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಎಷ್ಟೋ ಮಂದಿ ವಿದ್ಯಾರ್ಥಿಗಳು ತಮ್ಮ ಮನೆಯಲ್ಲಿನ ಕಷ್ಟಕಾರ್ಪಣ್ಯಗಲಿಂದಾಗಿ ಇಂದು ವಿದ್ಯಾಭ್ಯಾಸವನ್ನು ಮೊಟಕುಗೊಳಿಸುವ ಹಂತಕ್ಕೆ ತಲುಪಿದ್ದರೆ ಇದು ನಿಜಕ್ಕೂ ದುರ್ದೈವ. ಅಂತಹ ವಿದ್ಯಾರ್ಥಿಗಳು ದಾನಿಗಳು ನೀಡುವ ಸವಲತ್ತನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.ಪಠ್ಯೇತರಕ್ಕೂ ಒತ್ತು ನೀಡಿ
ಭಗತ್ ಸಿಂಗ್ ಚಾರಿಟಬಲ್ ಟ್ರಸ್ಟ್ ಸಂಸ್ಥಾಪಕ ಸಂದೀಪ್.ಬಿ.ರೆಡ್ಡಿ ಮಾತನಾಡಿ, ಬಡವರಲ್ಲಿ ನಗು ಮೂಡಿದರೆ ಅದು ನನಗೆ ಇಷ್ಟ, ನಾನು ಯಾವುದೇ ರಾಜಕೀಯ ಉದ್ದೇಶ ಇಟ್ಟು ವಿದ್ಯಾರ್ಥಿಗಳಿಗೆ ಉದ್ಯೋಗ ನೀಡುತ್ತಿಲ್ಲ ಬದಲಿಗೆ ಬಾಳು ಬೆಳಗಲು ನನ್ನ ಶ್ರಮದಲ್ಲಿ ಒಂದಷ್ಟು ಹಣ ಮೀಸಲಿಟ್ಟು ಈ ಸೇವೆ ಮಾಡುತ್ತಿದ್ದೇನೆ. ಎಲ್ಲರ ಶಕ್ತಿಯಿಂದ ಎಲ್ಲರ ಸಹಕಾರದಿಂದ ಈ ಕೆಲಸ ಮಾಡಬೇಕು, ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಮಾತ್ರ ಸೀಮಿತ ಆಗಿರದೆ ಪಠ್ಯೇತರ ಚಟುವಟಿಕೆಗಳಲ್ಲೂ ಸಕ್ರಿಯರಾಗಿ ನಾನಾ ವೃದ್ಧಿ ಮಾಡಿಕೊಳ್ಳಬೇಕು ಎಂದರು.ಡಾ.ಬಿ.ಆರ್.ಅಂಬೇಡ್ಕರ್ ದೇಶದ ಎಲ್ಲಾ ಸಮಾಜದವರಿಗೂ ದೇವರು. ಆ ಮನುಷ್ಯನ ದೊಡ್ಡ ಸಾಧನೆಯಿಂದ ನಾವು ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿದೆ, ಅಂತಹವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ನಮ್ಮ ಬದುಕು ಉತ್ತಮವಾದರೆ ಅದೇ ಸ್ವರ್ಗ. ರೈತನಾಗು, ವೈದ್ಯನಾಗು, ಉನ್ನತ ಸ್ಥರದ ಅಧಿಕಾರಿಯಾಗು ಏನೇ ಆಗು ಮೊದಲು ಮಾನವನಾಗಬೇಕು ಎಂದರು.
ವಿದ್ಯಾರ್ಥಿವೇತನ ವಿತರಣೆಭಗತ್ ಸಿಂಗ್ ಚಾರಿಟಬಲ್ ಟ್ರಸ್ಟ್ ವತಿಯಿಂದ ತಾಲ್ಲೂಕಿನಲ್ಲಿ ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ವರ್ಗಕ್ಕೆ ಸೇರಿದ 2023-24 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ 60 ಕ್ಕಿಂತ ಹೆಚ್ಚು ಶೇ 90ರವರೆಗೆ ಅಂಕಪಡೆದ ವಿದ್ಯಾರ್ಥಿಗಳಿಗೆ ತಲಾ ರೂ 5000 ಮತ್ತು ಶೇ 90ಕ್ಕಿಂತ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ತಲಾ ರೂ10000 ಗಳನ್ನು ವಿದ್ಯಾರ್ಥಿ ವೇತನ ನೀಡುತ್ತಿರುವುದಾಗಿ ತಿಳಿಸಿದರು.ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್.ಆಂಜನೇಯರೆಡ್ಡಿ ಮಾತನಾಡಿ, ಮಕ್ಕಳು ವಿದ್ಯಾಭ್ಯಾಸ ಮಾಡಲು ಉತ್ತಮ ವಾತಾವರಣ ನಿರ್ಮಾಣ ಮಾಡುವುದರ ಜೊತೆಗೆ ಅವರ ತಕ್ಕಂತೆ ಮುನ್ನಡೆಯಲು ಅವಕಾಶ ಮಾಡಿಕೊಡಬೇಕು. ದೊಡ್ಡ ಗುರಿಯೊಂದಿಗೆ ತಮ್ಮ ಓದಿನ ಬದುಕು ಕಟ್ಟಿಕೊಂಡು ಸಮಾಜದಲ್ಲಿ ಸತ್ಪ್ರಜೆ ಯಾಗಬೇಕು ಎಂದು ಸಲಹೆ ಇತ್ತರು.ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಡಾ.ಎಂ.ಶಿವಾನಂದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿವಿಆರ್ ರಾಜೇಶ್, ದಸಂಸ ಮುಖಂಡರಾದ ಸುಧಾ ವೆಂಕಟೇಶ್,ಮೂರ್ತಿ, ಗವಿರಾಯಪ್ಪ, ಹೈಕೋರ್ಟ್ ವಕೀಲ ರಾಜೇಶ್, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ, ತಾ.ಪಂ. ಮಾಜಿ ಸದಸ್ಯ ತಿರುಮಲಪ್ಪ, ತಿಪ್ಪೇನಹಳ್ಳಿ ಗ್ರಾಪಂ ಅಧ್ಯಕ್ಷ ಶ್ರೀನಿವಾಸ್, ಪೋಶೆಟ್ಟಿಹಳ್ಳಿ ಗ್ರಾ.ಪಂ.ಅಧ್ಯಕ್ಷ ಶ್ರೀನಿವಾಸ್, ಶಿಕ್ಷಕರ ಸಂಘದ ಪದಾಧಿಕಾರಿಗಳಾದ ರಾಜೇಂದ್ರ ಬಾಬು, ಜೈ ಕುಮಾರ್, ಮತ್ತಿತರರು ಇದ್ದರು.