ಸರ್ಕಾರಿ ಕಾಲೇಜು ಸೌಲಭ್ಯ ಬಳಸಿಕೊಳ್ಳಿ: ಪ್ರಾಂಶುಪಾಲ ಡಾ.ಎಸ್.ನಾರಾಯಣ

| Published : Jun 17 2024, 01:35 AM IST

ಸರ್ಕಾರಿ ಕಾಲೇಜು ಸೌಲಭ್ಯ ಬಳಸಿಕೊಳ್ಳಿ: ಪ್ರಾಂಶುಪಾಲ ಡಾ.ಎಸ್.ನಾರಾಯಣ
Share this Article
  • FB
  • TW
  • Linkdin
  • Email

ಸಾರಾಂಶ

ಅರಸೀಕೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಈ ಬಾರಿ ಉತ್ತಮ ಫಲಿತಾಂಶ ಬಂದಿದ್ದು. ಈ ಕಾಲೇಜಿನಲ್ಲಿರುವ ಉತ್ತಮ ಬೋಧಕ ವರ್ಗವನ್ನು ಬಳಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಬೇಕು ಎಂದು ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ನಾರಾಯಣ್ ಹೇಳಿದರು. ಅರಸೀಕೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಸುದ್ದಿಗೊಷ್ಠಿ । 2023-24ರಲ್ಲಿ ಉನ್ನತ ಶ್ರೇಣಿಯಲ್ಲಿ ವಿದ್ಯಾರ್ಥಿಗಳು ತೇರ್ಗಡೆ

ಕನ್ನಡಪ್ರಭ ವಾರ್ತೆ ಅರಸೀಕೆರೆ

ನಗರದ ಹೊರ ವಲಯದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಈ ಬಾರಿ ಉತ್ತಮ ಫಲಿತಾಂಶ ಬಂದಿದ್ದು. ಈ ಕಾಲೇಜಿನಲ್ಲಿರುವ ಉತ್ತಮ ಬೋಧಕ ವರ್ಗವನ್ನು ಬಳಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಬೇಕು ಎಂದು ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ನಾರಾಯಣ್ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಲೇಜಿನಲ್ಲಿ ಅನುಭವಿ ಉಪನ್ಯಾಸಕ ಬಳಗವಿದ್ದು, ಉತ್ತಮ ಬೋಧನೆಯನ್ನು ನೀಡುತ್ತಿರುವುದರಿಂದ ಉತ್ತಮ ಫಲಿತಾಂಶ ಬಂದಿದ್ದು 2023-24ರಲ್ಲಿ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ವಿದ್ಯಾರ್ಥಿಗಳ ಆಸಕ್ತಿ, ಪೋಷಕರ ಸಹಕಾರ ಹಾಗೂ ಬೋಧಕ ವರ್ಗದ ಕಾಳಜಿಯೇ ಈ ಸಾಧನೆಗೆ ಕಾರಣವಾಗಿದೆ ಎಂದು ಹೇಳಿದರು.

‘ತಾಲೂಕಿನಲ್ಲೇ ಕಾಲೇಜು ಅತ್ಯುತ್ತಮ ಪರಿಸರವನ್ನು ಹೊಂದಿದ್ದು ವಿದ್ಯಾರ್ಜನೆಗೆ ಉತ್ತಮ ವಾತಾವರಣ, ಆಧುನಿಕ ಕಟ್ಟಡವಿದ್ದು ಆಸನಗಳು, ನುರಿತ ಮತ್ತು ಕ್ರೀಯಾಶೀಲಾ ಅಧ್ಯಾಪಕರ ವೃಂದ ಹೊಂದಿದೆ. ಸುಮಾರು ೧೮೦೦೦ ಪುಸ್ತಕಗಳನ್ನು ಒಳಗೊಂಡ ಗಣಕೀಕೃತ ಗ್ರಂಥಾಲಯವಿದೆ. ಯೋಗಾ ಮತ್ತು ಪ್ರಾಣಾಯಾಮ ತರಗತಿಗಳನ್ನು ನಡೆಸಲಾಗುವುದು. ಕ್ರೀಡೆ, ಎನ್‌ಎಸ್‌ಎಸ್‌, ಸ್ಕೌಡ್ಸ್ ಅಂಡ್ ಗೈಡ್ಸ್ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಅವಕಾಶ ಹಾಗೂ ಪ್ರೋತ್ಸಾಹ ಭೋದನಾ ಸಲಕರಣೆ ಮತ್ತು ಪ್ರಯೋಗಾಲಯವನ್ನು ಹೊಂದಿರುವ ಈ ಕಾಲೇಜಿಗೆ ಸ್ಮಾರ್ಟ್ ಕ್ಲ್ಯಾಸ್ ಸೌಲಭ್ಯವಿದೆ’ ಎಂದು ತಿಳಿಸಿದರು.

‘ಉದ್ಯೋಗ ಅವಕಾಶಗಳ ಕೋಶದಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸೂಕ್ತ ಮಾರ್ಗದರ್ಶನ, ವಿಶಾಲವಾದ ಆಟದ ಮೈದಾನ, ಪ್ರತಿ ವರ್ಷ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಆಧುನಿಕ ಭೋದನಾ ಪದ್ಧತಿ, ಪ್ರೋಜೆಕ್ಟರ್, ಸ್ಮಾರ್ಟ್ ಕ್ಲಾಸ್, ಗ್ರೀನ್ ಬೋರ್ಡ್ ಬಳಸಲಾಗುವುದು. ಈಗಾಗಲೇ ಬಿಎ ಇತಿಹಾಸ, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ರಾಜ್ಯಶಾಸ್ತ್ರ, ಐಚ್ಚಿಕ ಕನ್ನಡ ಮತ್ತು ಬಿಕಾಂ ಹಾಸನ ವಿಶ್ವವಿದ್ಯಾಲಯ ಪಠ್ಯಕ್ರಮಕ್ಕೆ ಅನುಗುಣವಾಗಿ ನೀಡಲಾಗುವುದು’ ಎಂದು ಹೇಳಿದರು.

‘ಕಾಲೇಜಿನಲ್ಲಿರುವ ಎಲ್ಲ ಕೋರ್ಸ್‌ಗಳಿಂದ ಕಳೆದ ಹತ್ತು ವರ್ಷಗಳಿಂದ ಅತ್ಯುತ್ತಮ ಫಲಿತಾಂಶ ಬಂದಿದ್ದು 2024-25ನೇ ಸಾಲಿಗೆ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುವ ಮೂಲಕ ಸರ್ಕಾರದ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಬಳಸಿಕೊಂಡು ತಮ್ಮ ಜ್ಞಾನಾರ್ಜನೆಯನ್ನು ವೃಧಿಗೊಳಿಸಿಕೊಳ್ಳಬೇಕು. ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಕ್ಲಾಸ್ ಸೌಲಭ್ಯವಿದೆ. ಉದ್ಯೋಗವಕಾಶಗಳ ಕೋಶದಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸೂಕ್ತ ಮಾರ್ಗದರ್ಶನ ನೀಡಲಾಗುವುದು’ ಎಂದ ವಿವರಿಸಿದರು.