ಸರ್ಕಾರದ ಅನುದಾನಕ್ಕೆ ಕಾಯದೆ ಇರುವ ಸಂಪನ್ಮೂಲ ಬಳಸಿಕೊಳ್ಳಿ: ಶಾಸಕ ಎಚ್.ಟಿ.ಮಂಜು

| Published : Feb 10 2025, 01:45 AM IST

ಸರ್ಕಾರದ ಅನುದಾನಕ್ಕೆ ಕಾಯದೆ ಇರುವ ಸಂಪನ್ಮೂಲ ಬಳಸಿಕೊಳ್ಳಿ: ಶಾಸಕ ಎಚ್.ಟಿ.ಮಂಜು
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಮದಲ್ಲಿ 20 ಲಕ್ಷ ರು. ವೆಚ್ದದಲ್ಲಿ ನರೇಗಾ ಹಾಗೂ ಇಲಾಖಾ ವಿವಿಧ ಅನುದಾನದಲ್ಲಿ ಕಟ್ಟಡ ನಿರ್ಮಾಣವಾಗುತ್ತಿದೆ. ಗ್ರಾಮದ ಪಟೇಲ್‌ ಈರೇಗೌಡ ಕಟ್ಟಡ ನಿರ್ಮಾಣಕ್ಕೆ ಭೂಮಿ ದಾನ ಮಾಡಿರುವುದು ಮಾದರಿಯಾಗಿದೆ. ಇಂತಹ ವ್ಯಕ್ತಿಗಳನ್ನು ಗೌರವಿಸುವ ಕೆಲಸ ಮೊದಲು ಆಗಬೇಕಿದೆ.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಸರ್ಕಾರದ ಅನುದಾನವನ್ನು ಕಾಯದೆ ಇರುವ ಸ್ಥಳೀಯ ಸಂಪನ್ಮೂಲ, ಅನುದಾನ ಬಳಸಿಕೊಂಡು ಅಭಿವೃದ್ಧಿ ಕೆಲಸ ಮಾಡುವಂತೆ ಶಾಸಕ ಎಚ್.ಟಿ.ಮಂಜು ಸಲಹೆ ನೀಡಿದರು.

ಅಂಕನಹಳ್ಳಿಯಲ್ಲಿ ಅಂಗನವಾಡಿ ಕೇಂದ್ರದ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಸರ್ಕಾರದಿಂದ ಅನುದಾನ ಸಿಗುವುದು ಬಲುಕಷ್ಟ. ಅನುದಾನವನ್ನು ಕಾಯುತ್ತಾ ಕುಳಿತರೆ ಅಭಿವೃದ್ಧಿ ಕೆಲಸಗಳು ಕುಂಟುತ್ತಾ ಸಾಗುತ್ತದೆ ಎಂದರು.

ಗ್ರಾಮದಲ್ಲಿ 20 ಲಕ್ಷ ರು. ವೆಚ್ದದಲ್ಲಿ ನರೇಗಾ ಹಾಗೂ ಇಲಾಖಾ ವಿವಿಧ ಅನುದಾನದಲ್ಲಿ ಕಟ್ಟಡ ನಿರ್ಮಾಣವಾಗುತ್ತಿದೆ. ಗ್ರಾಮದ ಪಟೇಲ್‌ ಈರೇಗೌಡ ಕಟ್ಟಡ ನಿರ್ಮಾಣಕ್ಕೆ ಭೂಮಿ ದಾನ ಮಾಡಿರುವುದು ಮಾದರಿಯಾಗಿದೆ. ಇಂತಹ ವ್ಯಕ್ತಿಗಳನ್ನು ಗೌರವಿಸುವ ಕೆಲಸ ಮೊದಲು ಆಗಬೇಕಿದೆ ಎಂದರು.

ರಾಜ್ಯ ಸಹಕಾರ ಮಾರಾಟ ಮಹಾ ಮಂಡಲ ನಿರ್ದೇಶಕ ಚೋಳೇನಹಳ್ಳಿ ಸಿ.ಎನ್.ಪುಟ್ಟಸ್ವಾಮಿಗೌಡ ಮಾತನಾಡಿ, ನಿಮ್ಮೂರಿನ ದೇಗುಲದಂತಿರುವ ಅಂಗನವಾಡಿ ಕೇಂದ್ರ ಕಟ್ಟಡದ ಕಾಮಗಾರಿ ಉಸ್ತುವಾರಿಯನ್ನು ಗ್ರಾಮಸ್ಥರು ನಿರ್ವಹಿಸಿ ಗುಣಮಟ್ಟ ಕಾಪಾಡಿ ಕೆಲಸ ಮಾಡಿದ್ದಾರೆ ಎಂದರು.ಪೋಷಕರು ಖಾಸಗಿ ಶಾಲೆ ವ್ಯಾಮೋಹ ಬಿಟ್ಟು ಮಕ್ಕಳನ್ನು ಸರ್ಕಾರಿ ಶಾಲೆ, ಅಂಗನವಾಡಿ ಕೇಂದ್ರಗಳಿಗೆ ಮಕ್ಕಳನ್ನು ಸೇರಿಸಿ ಎಂದು ಮನವಿ ಮಾಡಿದರು. ಇದೇ ವೇಳೆ ಅಂಗನವಾಡಿ ಕೇಂದ್ರ ಕಟ್ಟಡಕ್ಕೆ ಭೂ ದಾನ ಮಾಡಿದ ಗ್ರಾಮದ ಪಟೇಲ್‌ ಈರೇಗೌಡರನ್ನು ಸನ್ಮಾನಿಸಲಾಯಿತು.

ಸುಬ್ರಹ್ಮಣ್ಯ ಸೇವಾ ಟ್ರಸ್ಟ್‌ ಅಧ್ಯಕ್ಷ ಬಿ.ಎಂ.ಕಿರಣ್, ಐಕನಹಳ್ಳಿ ಗ್ರಾಪಂ ಅಧ್ಯಕ್ಷೆ ಸುಧಾ ದೇವರಾಜೇಗೌಡ, ಕಿಕ್ಕೇರಿ ಕೆಪಿಎಸ್ ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಐಕನಹಳ್ಳಿ ಕೃಷ್ಣೇಗೌಡ, ತಾಪಂ ಇಒ ಸುಷ್ಮಾ, ಸಿಡಿಪಿಒ ಅರುಣಕುಮಾರ್, ಪಿಡಿಒ ವಿಜಯ್, ಗ್ರಾಪಂ ಉಪಾಧ್ಯಕ್ಷ ಪ್ರಸನ್ನ, ಸದಸ್ಯರಾದ ಎ.ಎಸ್.ಮಂಜೇಗೌಡ, ಕೆ.ಎನ್.ಕುಮಾರ್, ಶಂಕರ್, ಈರಾಜು, ಅಶೋಕ ನಾಯಕ್, ಅಂಬುಜಾ ಉದಯಶಂಕರ್, ನಂಜುಂಡೇಗೌಡ, ಐ.ಆರ್.ಸುಮಿತ್ರಾ ಶಂಭುಲಿಂಗಯ್ಯ, ಕವಿತಾರವಿ, ನಾಗಮಣಿ ಶಿವಣ್ಣ, ಪಲ್ಲವಿ ವೆಂಕಟೇಶ್, ಭಾರತಿ ಬಲರಾಂ, ಭಾಗ್ಯಮ್ಮ ಆಶೋಕನಾಯಕ್‌ ಭಾಗವಹಿಸಿದ್ದರು.