ಸಾರಾಂಶ
ಶಿರಾಡಿ ಘಾಟ್ ಬಳಿ ಗುಡ್ಡ ಕುಸಿತದ ಪರಿಣಾಮ ಸ್ಥಗಿತಗೊಂಡಿದ್ದ ರೈಲು ಸಂಚಾರ ಪುನಾರಂಭಗೊಂಡ ಕೆಲವೇ ದಿನಗಳಲ್ಲಿ ಸಕಲೇಶಪುರ ಸಮೀಪದ ಆಚಂಗಿ ಬಳಿ ಹಳಿಗಳ ಮೇಲೆ ಮತ್ತೆ ಭಾರೀ ಪ್ರಮಾಣದಲ್ಲಿ ಶನಿವಾರ ಗುಡ್ಡ ಕುಸಿದಿದೆ.
ಆಲೂರು: ಶಿರಾಡಿ ಘಾಟ್ ಬಳಿ ಗುಡ್ಡ ಕುಸಿತದ ಪರಿಣಾಮ ಸ್ಥಗಿತಗೊಂಡಿದ್ದ ರೈಲು ಸಂಚಾರ ಪುನಾರಂಭಗೊಂಡ ಕೆಲವೇ ದಿನಗಳಲ್ಲಿ ಸಕಲೇಶಪುರ ಸಮೀಪದ ಆಚಂಗಿ ಬಳಿ ಹಳಿಗಳ ಮೇಲೆ ಮತ್ತೆ ಭಾರೀ ಪ್ರಮಾಣದಲ್ಲಿ ಶನಿವಾರ ಗುಡ್ಡ ಕುಸಿದಿದೆ.
ಹೀಗಾಗಿ ಈ ಮಾರ್ಗದ ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ. ಗುಡ್ಡ ಕುಸಿದ ತಕ್ಷಣ ಆಲೂರು, ಸಕಲೇಶಪುರ ಹಾಗೂ ಹಾಸನದ ರೈಲ್ವೆ ನಿಲ್ದಾಣಗಳಲ್ಲಿ ರೈಲುಗಳನ್ನು ತಡೆಹಿಡಿದ ಪರಿಣಾಮ ಪ್ರಯಾಣಿಕರು ಪರದಾಡಿದರು.