ಏ.1 ರಿಂದ ಕಾಲು ಬಾಯಿ ರೋಗದ ಲಸಿಕಾ ಕಾರ್ಯಕ್ರಮ

| Published : Mar 30 2024, 12:58 AM IST

ಸಾರಾಂಶ

ಎಲ್ಲ ರಾಸುಗಳಿಗೆ ಕಾಲು ಬಾಯಿ ರೋಗದ ಲಸಿಕೆ ಹಾಕುವ ಮೂಲಕ ತಾಲೂಕಿನಲ್ಲಿ ಶೇ.100ರಷ್ಟು ಪ್ರಗತಿ ಸಾಧಿಸ ಬೇಕೆಂದು ತರೀಕೆರೆ ಪಶು ಆಸ್ಪತ್ರೆ ಸಹಾಯಕ ನಿರ್ದೇಶಕ ಡಾ.ಆರ್.ದೇವೇಂದ್ರಪ್ಪ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ತರೀಕೆರೆ

ಎಲ್ಲ ರಾಸುಗಳಿಗೆ ಕಾಲು ಬಾಯಿ ರೋಗದ ಲಸಿಕೆ ಹಾಕುವ ಮೂಲಕ ತಾಲೂಕಿನಲ್ಲಿ ಶೇ.100ರಷ್ಟು ಪ್ರಗತಿ ಸಾಧಿಸ ಬೇಕೆಂದು ತರೀಕೆರೆ ಪಶು ಆಸ್ಪತ್ರೆ ಸಹಾಯಕ ನಿರ್ದೇಶಕ ಡಾ.ಆರ್.ದೇವೇಂದ್ರಪ್ಪ ತಿಳಿಸಿದ್ದಾರೆ.ತರೀಕೆರೆ ಪಶುಪಾಲನಾ ಇಲಾಖೆಯಿಂದ ಪಶು ಆಸ್ಪತ್ರೆ ಸಭಾಂಗಣದಲ್ಲಿ ಪಶು ವೈದ್ಯರಿಗೆ ಹಾಗೂ ಸಿಬ್ಬಂದಿಗೆ ಏರ್ಪಡಿಸಿದ್ದ ಕಾಲು ಬಾಯಿ ಲಸಿಕಾ ಕಾರ್ಯಕ್ರಮದ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿದರು. ಕಾಲು ಬಾಯಿ ಲಸಿಕಾ ಕಾರ್ಯಕ್ರಮ ಏಪ್ರಿಲ್ 1 ರಿಂದ ಏಪ್ರಿಲ್ 30 ರವರೆಗೆ ಒಂದು ತಿಂಗಳ ಕಾಲ ನಡೆಯಲ್ಲಿದ್ದು, ತಾಲೂಕಿನಲ್ಲಿ ದನಗಳು ಮತ್ತು ಎಮ್ಮೆಗಳು 37, 210, ಸೇರಿದಂತೆ ಒಟ್ಟು 55,560 ಜಾನುವಾರುಗಳು ತಾಲೂಕಿನಲ್ಲಿ ಇದ್ದು, ಈ ಕಾರ್ಯಕ್ರಮಕ್ಕಾಗಿ ಒಟ್ಟು 35 ಸಿಬ್ಬಂದಿಯನ್ನು ಆರು ತಂಡಗಳಲ್ಲಿ ರಚಿಸಲಾಗಿದ್ದು, ಪ್ರತಿ ತಂಡಕ್ಕೆ 2 ಪಶು ವೈದ್ಯರನ್ನು ಉಸ್ತುವಾರಿಯಾಗಿ ನೇಮಿಸಲಾಗಿದೆ ಎಂದು ತಿಳಿಸಿದರು. ಪ್ರತಿ ಪಂಚಾಯಿತಿಗೆ ಒಬ್ಬರಂತೆ ತಾಲೂಕಿನ ಎಲ್ಲಾ 26 ಪಶು ಸಖಿಯರಿಗೆ ಕಾಲು ಬಾಯಿ ರೋಗದ ಲಸಿಕೆ ಬಗ್ಗೆ ಮಾಹಿತಿ ನೀಡಲಾಗಿದ್ದು, ತಮ್ಮ ವ್ಯಾಪ್ತಿಯಲ್ಲಿ ಬರುವ ಪ್ರತಿ ಹಳ್ಳಿಗಳಲ್ಲಿನ ಪ್ರತಿ ಮನೆಗೂ ಸಿಬ್ಬಂದಿಯನ್ನು ಕರೆದುಕೊಂಡು ಹೋಗಿ, ಪ್ರತಿ ರಾಸುಗಳಿಗೆ ಲಸಿಕೆ ಹಾಕಿಸಬೇಕೆಂದು ಅವರು ಸೂಚಿಸಿದರು.

ಪಶು ಆಸ್ಪತ್ರೆ ಡಾ.ಜಯ್ಯಣ್ಣ ಮಾತನಾಡಿ ಎಲ್ಲಾ ಸಿಬ್ಬಂದಿ ಹಾಗು ಪಶು ಸಖಿಯರಿಗೂ ರಾಸುಗಳ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು.ಸಭೆಯಲ್ಲಿ ಪಶು ವೈದ್ಯರಿಂದ ಮತ್ತು ಪಶು ಸಖಿಯರಿಂದ ತಮ್ಮ ವ್ಯಾಪ್ತಿಯ ಮೇವು ಮತ್ತು ನೀರಿನ ಬಗ್ಗೆ ಮಾಹಿತಿ ಪಡೆಯ ಲಾಯಿತು, ನೀರಿನ ತೊಟ್ಟಿಗಳ ನಿರ್ವಹಣೆ ಬಗ್ಗೆ ಆಯಾ ಪಂಚಾಯಿತಿ ಪಿಡಿಒ ಗಳಿಗೆ ಪಶು ವೈದ್ಯರ ಮುಖಾಂತರ ಮಾಹಿತಿ ತಿಳಿಸಬೇಕೆಂದು ಪಶು ಸಖಿಯರಿಗೆ ಸೂಚಿಸಲಾಯಿತು.

29ಕೆಟಿಆರ್.ಕೆ.2ಃ

ತರೀಕೆರೆಯಲ್ಲಿ ಪಶುಪಾಲನಾ ಇಲಾಖೆಯಿಂದ ಕಾಲು ಬಾಯಿ ರೋಗದ ಲಸಿಕಾ ಕಾರ್ಯಕ್ರಮದ ಪೂರ್ವಬಾವಿ ಸಭೆಯಲ್ಲಿ ಪಶು ಆಸ್ಪತ್ರೆ ಸಹಾಯಕ ನಿರ್ದೇಶಕ ಡಾ.ಆರ್.ದೇವೇಂದ್ರಪ್ಪ ಮಾತನಾಡಿದರು. ಡಾ.ಜಯ್ಯಣ್ಣ ಮತ್ತಿತರರು ಇದ್ದರು.