ಹೊಸಕೋಟೆ: ತಾಲೂಕಿನ ಜಡಿಗೇನಹಳ್ಳಿ ಹೋಬಳಿಯ ವಾಗಟ ಗ್ರಾಮದಲ್ಲಿರುವ ಐತಿಹಾಸಿಕ ಯೋಗಪುರಿ ವರದರಾಜಸ್ವಾಮಿ ಬ್ರಹ್ಮ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿತು.
ವರದರಾಜಸ್ವಾಮಿ ಮೂರ್ತಿಗೆ ಪಂಚಾಮೃತ ಅಭಿಷೇಕ, ಹೂವಿನ ಅಲಂಕಾರ ಮಾಡಿ ಉತ್ಸವ ಮೂರ್ತಿಗಳಿಗೆ ವಿಶೇಷ ಪೂಜೆ ಸಲ್ಲಿಸಿ ರಥದಲ್ಲಿ ಕೂರಿಸಲಾಯಿತು. ಮಾಜಿ ಸಂಸದ ಬಿ.ಎನ್.ಬಚ್ಚೇಗೌಡರು ರಥಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ವರದರಾಜಸ್ವಾಮಿ ರಥಕ್ಕೆ ಧವನ ಬಾಳೆಹಣ್ಣು ಸಮರ್ಪಿಸಿ ಭಕ್ತರು ಹರಕೆ ತೀರಿಸಿದರು. ಭಕ್ತರಿಗೆ ಪಾನಕ, ಕೋಸಂಬರಿ, ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.ರಥೋತ್ಸವ ಆಚರಣಾ ಸಮಿತಿ ಅಧ್ಯಕ್ಷ ನರೇಂದ್ರಪ್ಪ, ಧರ್ಮದರ್ಶಿ ಭಗವಾನ್, ರಥೋತ್ಸವ ಆಚರಣಾ ಸಮಿತಿ ಕಾರ್ಯದರ್ಶಿ ಹರಿಪ್ರಸಾದ್, ಶಾಸಕ ಶರತ್ ಪತ್ನಿ ಪ್ರತಿಭಾ, ಮುಖಂಡರಾದ ಸೊಣ್ಣೇಗೌಡ, ವಿ.ಎನ್.ಬ್ಯಾಟೇಗೌಡ, ವರದರಾಜು, ಸಿದ್ದಪ್ಪ, ವಿವಿ ನರೇಂದ್ರ, ವಿಎ.ಬ್ಯಾಟೇಗೌಡ, ಹರೀಶ್ ಕುಮಾರ್, ವಿಕೆ.ಸುರೇಶ್, ವಿವಿ.ಮಂಜುನಾಥ್, ಬಿಎಂ.ಮಂಜುನಾಥ್, ವಿಎಸ್.ಕೆಂಪೇಗೌಡ, ಸಂಪಂಗಿ ರಾಮಯ್ಯ ಗಣ್ಯರು ಹಾಜರಿದ್ದರು.
ಫೋಟೋ: ಫೋಟೋ : 23 ಹೆಚ್‌ಎಸ್‌ಕೆ 1 ಮತ್ತು 2ಹೊಸಕೋಟೆ ತಾಲೂಕಿನ ವಾಗಟ ಗ್ರಾಮದಲ್ಲಿ ಶ್ರೀ ಯೋಗಪುರಿ ವರದರಾಜಸ್ವಾಮಿಯ ಬ್ರಹ್ಮ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಂಪನ್ನವಾಯಿತು.