ರಾಜಕೀಯ ಕ್ಷೇತ್ರದಲ್ಲಿ ವಾಜಪೇಯಿ ಛಾಪು

| Published : Dec 26 2023, 01:30 AM IST

ಸಾರಾಂಶ

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನವನ್ನು ಎಲ್ಲೆಡೆ ಆಚರಿಸಲಾಯಿತು. ಈ ವೇಳೆ ಅವರ ಕಾರ್ಯವನ್ನು ಸ್ಮರಿಸಲಾಯಿತು.

ರಾಯಬಾಗ: ಮಾಜಿ ಪ್ರಧಾನಿ ಅಟಲ ಬಿಹಾರಿ ವಾಜಪೇಯಿ ಅವರು ರಾಜಕೀಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ ಎಂದು ಶಾಸಕ ಡಿ.ಎಮ್.ಐಹೊಳೆ ಹೇಳಿದರು.

ಸೋಮವಾರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ವಾಜಪೇಯಿ ಅವರ 99ನೇ ಜನ್ಮ ದಿನಾಚರಣೆ ನಿಮಿತ್ತ ಒಳರೋಗಿಗಳಿಗೆ ಹಣ್ಣು, ಹಂಪಲ, ಬಿಸ್ಕಿಟ್‌ಗಳನ್ನು ಹಂಚಿ ಮಾತನಾಡಿದ ಅವರು, ವಾಜಪೇಯಿ ತಮ್ಮ ಅಧಿಕಾರಾವಧಿಯಲ್ಲಿ ಉತ್ತಮ ಆಡಳಿತ ನೀಡಿ, ಅನೇಕ ಅಭಿವೃದ್ಧಿ ಯೋಜನೆಗಳನ್ನು ಜಾರಿ ತಂದಿದ್ದರು. ಅವರ ಜನ್ಮ ದಿನಾಚರಣೆಯನ್ನು ದೇಶಾದ್ಯಂತ ಸುಶಾಸನ ದಿವಸ (ಉತ್ತಮ ಆಡಳಿತ ದಿನ) ವನ್ನಾಗಿ ಆಚರಿಸಲಾಗುತ್ತಿದೆ ಎಂದರು.

ಬೆಳಗ್ಗೆ ಬಿಜೆಪಿ ಕಾರ್ಯಾಲಯದಲ್ಲಿ ವಾಜಪೇಯಿಯವರ ಭಾವಚಿತ್ರಕ್ಕೆ ಶಾಸಕರು ಮತ್ತು ಬಿಜೆಪಿ ಕಾರ್ಯಕರ್ತರು ಪೂಜೆ ಸಲ್ಲಿಸಿದರು.

ಮುಖ್ಯವೈದ್ಯಾಧಿಕಾರಿ ಡಾ.ಆರ್‌.ಎಚ್.ರಂಗಣ್ಣವರ, ಡಾ.ಸದಾಶಿವ ಖನದಾಳೆ, ಬಿಜೆಪಿ ಮುಖಂಡ ಸದಾಶಿವ ಘೋರ್ಪಡೆ, ಸದಾನಂದ ಹಳಿಂಗಳಿ, ಬಸವರಾಜ ಡೊಣವಾಡೆ, ಸಂಗಣ್ಣ ದತ್ತವಾಡೆ, ಮಹೇಶ ಕರಮಡಿ, ಸುರೇಶ ಮಾಳಿ, ಭಾರತಿ ಲೋಹಾರ, ಕಲ್ಲಪ್ಪ ಸನದಿ, ರಿತೇಶ ಅವಳೆ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಇದ್ದರು.

------ದೇಶವೇ ಹೆಮ್ಮೆ ಪಡುವ ಕೆಲಸ ಮಾಡಿದ್ದ ವಾಜಪೇಯಿ:ಬೆಳಗಾವಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ರಾಜಕಾರಣದ ಅಜಾತಶತ್ರು ಎಂದೇ ಗುರುತಿಸಿಕೊಂಡಿದ್ದರು. ಅವರು ತಮ್ಮ ಅವಧಿಯಲ್ಲಿ ಶ್ರೇಷ್ಠ ಕೆಲಸದ ಮೂಲಕ ದೇಶವನ್ನು ಗುರುತಿಸುವಂತೆ ಮಾಡಿದ್ದರು ಎಂದು ಬಿಜೆಪಿ ಯುವ ಮುಖಂಡ ಹಾಗೂ ವಿಮಲ್ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಕಿರಣ ಜಾಧವ ಹೇಳಿದರು.

ನಗರದ ದತ್ತಿ ಸಂಸ್ಥೆಯಾದ ವಿಮಲ್ ಫೌಂಡೇಶನ್ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನಾಚರಣೆಯಲ್ಲಿ ಮಾತನಾಡಿದರು. ವಾಜಪೇಯಿ ಅವರು ರಾಜಕಾರಣಿ ಮತ್ತು ವ್ಯಕ್ತಿ ಹೇಗಿರಬೇಕು ಎಂಬುದನ್ನು ತಮ್ಮ ಜೀವನ ಕಾರ್ಯದ ಮೂಲಕ ತೋರಿಸಿಕೊಟ್ಟಿದ್ದಾರೆ. ಅವರೊಬ್ಬ ಶ್ರೇಷ್ಠ ಹಾಗೂ ಮಾದರಿ ಜನ ನಾಯಕರಾಗಿದ್ದರು ಎಂದು ಹೇಳಿದರು.