ವಾಲ್ಮೀಕಿ ನಿಗಮ ಹಗರಣಕ್ಕೆ ಸಂಬಂಧಿಸಿ ಅಕ್ರಮ ಹಣ ವರ್ಗಾವಣೆ ಆರೋಪದಡಿ ಕರ್ನಾಟಕದ ಮಾಜಿ ಸಚಿವ ಬಿ.ನಾಗೇಂದ್ರ ಅವರಿಗೆ ಸೇರಿದ 8 ಕೋಟಿ ರು. ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಲಾಗಿದೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ.) ಹೇಳಿದೆ.
- 100 ಕೋಟಿ ವಂಚನೆ ಕೇಸಲ್ಲಿ ₹ 8 ಕೋಟಿ ಜಪ್ತಿ- ಅಕ್ರಮದಿಂದ ಮಾಡಿದ ಬಾಕಿ ಹಣ ಪತ್ತೆ ಇಲ್ಲ!
---ವಾಲ್ಮೀಕಿ ನಿಗಮದ ಅಧ್ಯಕ್ಷರಾಗಿದ್ದ ವೇಳೆ ಅಂದಾಜು 100 ಕೋಟಿ ರು. ಹಣ ದುರ್ಬಳಕೆಯ ಪ್ರಕರಣ
ದುರುಪಯೋಗ ಪಡಿಸಿಕೊಂಡ ಹಣ ಐಷಾರಾಮಿ ಜೀವನ, ಬಳ್ಳಾರಿ ಚುನಾವಣೆಗೆ ಬಳಕೆ ಆರೋಪಈ ಸಂಬಂಧ ಕೇಸು ದಾಖಲಿಸಿ ಕಾಂಗ್ರೆಸ್ ಶಾಸಕ ನಾಗೇಂದ್ರ ಬಂಧಿಸಿದ್ದ ಜಾರಿ ನಿರ್ದೇಶನಾಲಯ
ಈ ಹಿನ್ನೆಲೆಯಲ್ಲಿ 2024ರಲ್ಲಿ ಸಚಿವ ಸ್ಥಾನಕ್ಕೆ ನಾಗೇಂದ್ರ ರಾಜೀನಾಮೆ. ಜಾಮೀನಿನ ಮೇಲೆ ಬಿಡುಗಡೆತನಿಖೆಯ ಭಾಗವಾಗಿ ಇದೀಗ ನಾಗೇಂದ್ರಗೆ ಸೇರಿದ ₹ 8 ಕೋಟಿ ಮೌಲ್ಯದ ಆಸ್ತಿ ಇ.ಡಿ.ಯಿಂದ ಜಪ್ತಿ
==ಪಿಟಿಐ ನವದೆಹಲಿವಾಲ್ಮೀಕಿ ನಿಗಮ ಹಗರಣಕ್ಕೆ ಸಂಬಂಧಿಸಿ ಅಕ್ರಮ ಹಣ ವರ್ಗಾವಣೆ ಆರೋಪದಡಿ ಕರ್ನಾಟಕದ ಮಾಜಿ ಸಚಿವ ಬಿ.ನಾಗೇಂದ್ರ ಅವರಿಗೆ ಸೇರಿದ 8 ಕೋಟಿ ರು. ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಲಾಗಿದೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ.) ಹೇಳಿದೆ.
ಜಪ್ತಿ ಮಾಡಲಾದ ಆಸ್ತಿಯಲ್ಲಿ ನಾಲ್ಕು ವಸತಿ ಮತ್ತು ವಾಣಿಜ್ಯ ಭೂಮಿ ಹಾಗೂ ಒಂದು ಕಟ್ಟಡವೂ ಸೇರಿದೆ. ಪಿಎಂಎಲ್‌ಎ ಕಾಯ್ದೆಯಡಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಇ.ಡಿ. ಹೇಳಿಕೊಂಡಿದೆ.‘ಅಕ್ರಮದಿಂದ ಸಂಪಾದಿಸಿದ ಬಾಕಿ ಹಣವನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಅದನ್ನು ನಾಗೇಂದ್ರ ಅವರು ಮುಚ್ಚಿಟ್ಟಿರಬಹುದು ಅಥವಾ ಖರ್ಚು ಮಾಡಿರಬಹುದು. ಹೀಗಾಗಿ ಅಕ್ರಮಕ್ಕೆ ಸಮನಾದ ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಲಾಗಿದೆ’ ಎಂದು ಇ.ಡಿ.ಹೇಳಿಕೊಂಡಿದೆ.
ಮಹರ್ಷಿ ವಾಲ್ಮೀಕಿ ಎಸ್.ಟಿ ಅಭಿವೃದ್ಧಿ ನಿಗಮದಡಿ ಪರಿಶಿಷ್ಟ ಪಂಗಡದ ಅಭಿವೃದ್ಧಿಗೆ ಮೀಸಲಿಟ್ಟ ಸುಮಾರು 100 ಕೋಟಿ ರು.ಗಳನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇರೆಗೆ ಆಗ ಸಚಿವರಾಗಿದ್ದ ನಾಗೇಂದ್ರ ಅವರನ್ನು ಬಂಧಿಸಲಾಗಿತ್ತು. ಸದ್ಯ ಅವರು ಜಾಮೀನಿನ ಮೇಲೆ ಹೊರಗಿದ್ದಾರೆ.