ವಾಲ್ಮೀಕಿ ವೃತ್ತ ನಾಮಕರಣ, ಮೂರ್ತಿ ಸ್ಥಾಪನೆಗಾಗಿ ಸಭೆ ಬಹಿಷ್ಕಾರ

| Published : Oct 06 2024, 01:18 AM IST

ವಾಲ್ಮೀಕಿ ವೃತ್ತ ನಾಮಕರಣ, ಮೂರ್ತಿ ಸ್ಥಾಪನೆಗಾಗಿ ಸಭೆ ಬಹಿಷ್ಕಾರ
Share this Article
  • FB
  • TW
  • Linkdin
  • Email

ಸಾರಾಂಶ

ವಾಲ್ಮೀಕಿ ವೃತ್ತ ಎಂದು ಹೆಸರಿಡುವುದಾಗಲಿ, ಮೂರ್ತಿ ಪ್ರತಿಷ್ಠಾಪಿಸುವುದರ ಬಗ್ಗೆಯಾಗಲಿ ಯಾವುದೇ ನೀರ್ಧಾರ ತೆಗೆದುಕೊಳ್ಳದೆ ಸಮಾಜಕ್ಕೆ ಅನ್ಯಾಯದ ಆರೋಪ

ಕನ್ನಡಪ್ರಭ ವಾರ್ತೆ ಚನ್ನಗಿರಿ

ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತದಿಂದ ನಡೆಸುವ ವಾಲ್ಮೀಕಿ ಜಯಂತಿ ಆಚರಣೆ ಮಾಡುವ ಸಲುವಾಗಿ ತಹಸೀಲ್ದಾರ್ ರುಕ್ಮಿಣಿಬಾಯಿ ಅಧ್ಯಕ್ಷತೆಯಲ್ಲಿ ಶನಿವಾರ ಪೂರ್ವಭಾವಿ ಸಭೆ ಹಮ್ಮಿಕೊಳ್ಳಲಾಗಿತ್ತು.

ಸಭೆ ಆರಂಭವಾಗುತ್ತಿದ್ದಂತೆಯೇ ತಾಲೂಕು ವಾಲ್ಮಿಕಿ ನಾಯಕ ಸಮಾಜದ ಮುಖಂಡ ಮಂಗೇನಹಳ್ಳಿ ಪಿ.ಲೋಹಿತ್ ಕುಮಾರ್ ಮಾತನಾಡಿ, ಕಳೆದ ವರ್ಷ ಚನ್ನಗಿರಿ ಪಟ್ಟಣದ ಸರ್ಕಾರಿ ಪ್ರಥರ್ಮ ದರ್ಜೆ ಕಾಲೇಜಿನ ಮುಂಭಾಗದ ವೃತ್ತಕ್ಕೆ ವಾಲ್ಮೀಕಿ ವೃತ್ತ ಎಂದು ನಾಮಕರಣ ಮಾಡಿ, ವಾಲ್ಮೀಕಿ ಪ್ರತಿಮೆಯನ್ನು ಸಮಾಜದ ವತಿಯಿಂದ ಪ್ರತಿಷ್ಠಾಪಿಸಲಾಗಿತ್ತು. ಆದರೆ ಕೆಲವರ ಕುತಂತ್ರದಿಂದ ಅಧಿಕಾರಿಗಳು ಇದನ್ನು ತೆರವು ಗೊಳಿಸಿದ ಕಾರಣ ತಾಲೂಕು ಸಮಾಜದಿಂದ ವಾಲ್ಮೀಕಿ ಮೂರ್ತಿ ಪ್ರತಿಷ್ಠಾಪಿಸಿದ್ದ ಸ್ಥಳದಲ್ಲಿಯೇ ಸುಮಾರು 20ದಿನಗಳಗಳ ಸತ್ಯಾಗ್ರಹ ನಡೆಸಿದ್ದೆವು.

ಆಗ ಅಪರ ಜಿಲ್ಲಾಧಿಕಾರಿ ಮಧ್ಯ ಪ್ರವೇಶಿಸಿ ಮುಂದಿನ ಎರಡು ತಿಂಗಳೊಗಾಗಿ ಪ್ರಕರಣ ಇತ್ಯಾರ್ಥ ಪಡಿಸುತ್ತೇವೆ ಎಂದು ಭರವಸೆ ನೀಡಿದ್ದರ ಮೇರೆಗೆ ಹೋರಾಟ ನಿಲ್ಲಿಸಿದ್ದೆವು ಎಂದು ಹೇಳಿ, ಇದುವರೆಗೂ ಆ ವೃತ್ತಕ್ಕೆ ವಾಲ್ಮೀಕಿ ವೃತ್ತ ಎಂದು ಹೆಸರಿಡುವುದಾಗಲಿ, ಮೂರ್ತಿ ಪ್ರತಿಷ್ಠಾಪಿಸುವುದರ ಬಗ್ಗೆಯಾಗಲಿ ಯಾವುದೇ ನೀರ್ಧಾರ ತೆಗೆದುಕೊಳ್ಳದೆ ನಮ್ಮ ಸಮಾಜಕ್ಕೆ ಅನ್ಯಾಯ ಮಾಡುತ್ತಿದ್ದು ಯಾವ ಪುರುಷ್ಯಾರ್ಥಕ್ಕೆ ಜಯಂತಿ ಆಚರಣೆ ಮಾಡುತ್ತೀರಿ ಎಂದು ಏರು ಧ್ವನಿಯಲ್ಲಿಯೇ ಪ್ರಶ್ನಿಸುತ್ತಾ ಸಭೆ ಬಹಿಷ್ಕರಿಸಿ ಹೊರ ನಡೆದರು.

ದಾವಣಗೆರೆ ಜಿಲ್ಲಾದ್ಯಂತ ಸರ್ಕಾರದಿಂದ ಆಚರಣೆ ಮಾಡುವ ವಾಲ್ಮೀಕಿ ಜಯಂತಿಯನ್ನು ಬಹಿಷ್ಕರಿಸಲು ಜಿಲ್ಲೆಯಲ್ಲಿರುವ ಎಲ್ಲಾ ನಮ್ಮ ಸಮಾಜ ಬಾಂಧವರಿಗೆ ಈ ದಿನವೇ ಕರೆ ನೀಡಲಾಗುವುದು ಎಂದರು. ತಾಲೂಕು ಸಮಾಜದ ಮುಖಂಡರಾದ ಪಿ.ಬಿ.ನಾಯಕ, ಕನ್ನಡ ನಾಡು ಹಿತರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ಕೆ.ವಿ.ಕೃಷ್ಣಮೂರ್ತಿ, ಕೊಂಡದಹಳ್ಳಿ ಜಯಣ್ಣ, ಪುರಸಭೆ ಸದಸ್ಯ ಗಾದ್ರಿರಾಜು, ಬಸವಾಪುರ ರಂಗನಾಥ್, ನವೀನ್ ಚನ್ನಗಿರಿ, ಯೋಗರಾಜ್, ಯೋಗರಾಜ್, ಸಚೀನ್, ತಾಲೂಕು ಪರಿಶಿಷ್ಠ ಪಂಗಡದ ಕಲ್ಯಾಣಾಧಿಕಾರಿ ರುದ್ರೇಶ್, ಪುರಸಭೆಯ ಮುಖ್ಯಾಧಿಕಾರಿ ಕೃಷ್ಣ ಡಿ.ಕಟ್ಟಿಮನಿ ಸೇರಿದಂತೆ ಮೊದಲಾದವರು ಇದ್ದರು.