ಸಾರಾಂಶ
ಶ್ರೀ ಮಹರ್ಷಿ ವಾಲ್ಮೀಕಿ ಸಮಾಜದ ಸಾಂಸ್ಕೃತಿಕ,ಆರ್ಥಿಕ, ಸಾಮಾಜಿಕ ವ್ಯವಸ್ಥೆ ಮಹಾಕಾವ್ಯದಲ್ಲಿ ಒಡಮೂಡಿಸಿದ್ದಾರೆ
ಮುಂಡರಗಿ: ಶ್ರೀಮಹರ್ಷಿ ವಾಲ್ಮೀಕಿ ಜೀವನ ದರ್ಶನವು ಜನರಿಗೆ ಅನುಕರಣೀಯವಾಗಿದೆ. ಸರ್ವ ಜನಾಂಗದವರು ಒಂದಾಗಿ ಬದುಕಲು ಮಹಾಕಾವ್ಯದಲ್ಲಿ ಮಾರ್ಗದರ್ಶನ ಮಾಡಿದ್ದಾರೆ.ರಾಮಾಯಣ ಮಹಾಕಾವ್ಯದಲ್ಲಿ ಮಾನವೀಯ ಅಂಶಗಳು ಅಡಕವಾಗಿವೆ ಎಂದು ಜ. ನಾಡೋಜ ಡಾ. ಅನ್ನದಾನೀಶ್ವರ ಮಹಾಸ್ವಾಮೀಜಿ ಹೇಳಿದರು.
ಅವರು ಸೋಮವಾರ ಬೆಳಗ್ಗೆ ಪಟ್ಟಣ ಕೋಟೆ ಆಂಜನೇಯ ದೇವಸ್ಥಾನದ ಹತ್ತಿರ ಶ್ರೀ ವಾಲ್ಮೀಕಿ ನಾಯಕ ಸಮಾಜ ಬಾಂಧವರು ಆಯೋಜಿಸಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವದಲ್ಲಿ ಶ್ರೀಮಹರ್ಷಿ ವಾಲ್ಮೀಕಿ ಭಾವಚಿತ್ರದ ಮೆರವಣಿಗೆಗೆ ಚಾಲನೆ ನೀಡುವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.ಶ್ರೀ ಮಹರ್ಷಿ ವಾಲ್ಮೀಕಿ ದಾರ್ಶನಿಕ ಕವಿಯಾಗಿದ್ದಾರೆ.ಅವರು ಸಮಾಜದ ಸಾಂಸ್ಕೃತಿಕ,ಆರ್ಥಿಕ, ಸಾಮಾಜಿಕ ವ್ಯವಸ್ಥೆ ಮಹಾಕಾವ್ಯದಲ್ಲಿ ಒಡಮೂಡಿಸಿದ್ದಾರೆ ಎಂದರು.
ಮಾಜಿ ಶಾಸಕ ರಾಮಣ್ಣ ಲಮಾಣಿ ಮೆರವಣಿಗೆಗೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ, ಪ್ರಕಾಶ ಹಲವಾಗಲಿ, ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ರಾಮಣ್ಣ ಕೋಳಿ, ಕರಬಸಪ್ಪ ಹಂಚಿನಾಳ, ವೈ.ಎನ್. ಗೌಡರ, ರವೀಂದ್ರ ಉಪ್ಪಿನ ಬೆಟಗೇರಿ, ಹೇಮಂತಗೌಡ ಪಾಟೀಲ,ಮೈಲಾರಪ್ಪ ಕಲಕೇರಿ, ಸುರೇಶ ಮಾಗಡಿ, ಅರುಣಾ ಸೋರಗಾಂವಿ, ಸವಿತಾ ಸಾಸ್ವೀಹಳ್ಳಿ, ಕವಿತಾ ನಾಯಕ, ಪವಿತ್ರಾ ಕಲ್ಲುಕುಟಗರ್, ಬಾಬು ಹೊಸಪೇಟೆ, ಕುಮಾರಸ್ವಾಮಿ ಹಿರೇಮಠ, ಎ.ಪಿ. ದಂಡೀನ್, ಸುರೇಶ ಬಣಕಾರ, ಕನಕಪ್ಪ ಕಾತರಕಿ, ಶಿವು ವಾಲೀಕಾರ, ದೇವು ಹಡಪದ, ಶ್ರೀನಿವಾಸ ಕೊರ್ಲಗಟ್ಟಿ, ಧ್ರುವಕುಮಾರ ಹೂಗಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.