ಸಾರಾಂಶ
ದಾವಣಗೆರೆ: ಕೇಂದ್ರ ಸರ್ಕಾರ ವಾಲ್ಮೀಕಿ ಸಮಾಜವನ್ನು ಎಸ್.ಸಿ., ಎಸ್.ಟಿ.ಗೆ ಸೇರಲು ಕೇವಲ ಮೊಸಳೆ ಕಣ್ಣೀರು ಹಾಕುತ್ತದೆ. ವಾಲ್ಮೀಕಿ ಸಮಾಜಕ್ಕೆ ರಾಷ್ಟ್ರಮಟ್ಟದಲ್ಲಿ ಮಾನ್ಯತೆ ಸಿಗುತ್ತಿಲ್ಲ. ಕೇಂದ್ರ ಸರ್ಕಾರಕ್ಕೆ ವಾಲ್ಮೀಕಿ ಬಗ್ಗೆ ಬದ್ಧತೆ ಇದ್ದರೆ ಸಂಸತ್ ಭವನ ಮುಂದೆ ಮಹರ್ಷಿ ವಾಲ್ಮೀಕಿ ಶ್ರೀಗಳ ಪುತ್ಥಳಿ ನಿರ್ಮಿಸಲಿ ಎಂದು ಮಾಜಿ ಸಂಸದ ಉಗ್ರಪ್ಪ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿಗಳಿಗೆ ರಾಮನ ಆದರ್ಶ ಇದ್ದರೆ ಕೂಡಲೇ ವಾಲ್ಮೀಕಿ ಜನಸಂಖ್ಯೆಗೆ ಅನುಗುಣವಾಗಿ ಹಣದ ಅಲೋಕೇಷನ್ ಮಾಡಲಿ. ಜೊತೆಗೆ ದೇಶದ ಯಾವುದಾದರೂ ಒಂದು ರೈಲಿಗೆ ವಾಲ್ಮೀಕಿ ಹೆಸರು ಇಡಲಿ ಎಂದು ಆಗ್ರಹಿಸಿದರು.ಮೀಸಲಾತಿ ಯಾರಪ್ಪನ ಸ್ವತ್ತಲ್ಲ. 341, 342 ಸೆಕ್ಷನ್ ಅಡಿಯಲ್ಲಿ ಬರುವವರು ಎಸ್‌ಸಿ, ಎಸ್‌ಟಿ ಆಗಲು ಅವಕಾಶ ಇದೆ. ಆದರೆ, ಬುಡಕಟ್ಟಿನ ಯಾವ ಲಕ್ಷಣ ಇಲ್ಲದ, ಎಸ್.ಸಿ. ಗುಣ ಇಲ್ಲದ ಕುರುಬರನ್ನು ಹೇಗೆ ಎಸ್.ಟಿ.ಗೆ ಸೇರಿಸಲು ಸಾಧ್ಯ ಎಂದು ಮಾಜಿ ಸಂಸದ ಉಗ್ರಪ್ಪ ಪ್ರಸ್ನಿಸಿದರು.
ಎಸ್‌ಟಿ ಸೇರ್ಪಡೆ ಮುನ್ನ ಕುಲಶಾಸ್ತ್ರ ಅಧ್ಯಯನ ಆಗಬೇಕು. ಎಸ್‌ಟಿಗೆ ಬರುವುದಾದರೆ ಸದ್ಯದ ಮೀಸಲಾತಿ ಸಮೇತ ಬರಬೇಕು. ಇಲ್ಲವೇ ಈಗೀರುವ ಮೀಸಲಾತಿ ಹೆಚ್ಚಿಸಬೇಕು. ಇಲ್ಲಿಗೆ ಬರಬೇಕಾದರೆ ಅವರು ಹೊಂದಿರುವ ಒಬಿಸಿ ಮೀಸಲಾತಿ ಎಸ್‌ಟಿಗೆ ನೀಡಬೇಕು. ಆ ರೀತಿ ಇದ್ರೆ ಮಾತ್ರ ಸಮ್ಮತಿ. ಇದೇನು ಇಲ್ಲದೇ ನಮ್ಮ ತಟ್ಟೆಗೆ ಕೈ ಹಾಕಿದರೆ ನಾನು ಸುಮ್ಮನೆ ಇರಲ್ಲ ಎಂದು ಕಿಡಿಕಾರಿದರು.- - -
(ಟಾಪ್ ಕೋಟ್)ಇನ್ನು ಬಿಜೆಪಿಯವರು ಮೀಸಲಾತಿಯನ್ನು ರಾಜಕೀಯವಾಗಿ ಬಳಸಬಾರದು. ಕೆಲ ಬಿಜೆಪಿಗರು ಬುದ್ಧಿ ಭ್ರಮಣೆಯಿಂದ ಮಾತನಾಡುತ್ತಿದ್ದಾರೆ. ಬಂಗಾರ ಲಕ್ಷ್ಮಣ್, ಸದಾನಂದ ಗೌಡರು ಅವರನ್ನು ಟಾರ್ಗೆಟ್ ಮಾಡಿದ್ದೇ ಬಿಜೆಪಿ. ವಾಲ್ಮೀಕಿ ಸಮಾಜವನ್ನು ಗೌರವಿಸುವಂತಹ ಕೆಲಸ ಮಾಡುತ್ತಿರುವುದು ಕಾಂಗ್ರೆಸ್ ಸರ್ಕಾರ. ಯಾವುದೇ ಸಮಾಜ ಟಾರ್ಗೆಟ್ ಮಾಡುವುದು ನಮ್ಮ ಪ್ರವೃತ್ತಿ ಅಲ್ಲ, ಅದು ಬಿಜೆಪಿ ಸಂಸ್ಕೃತಿ.
- ವಿ.ಎಸ್. ಉಗ್ರಪ್ಪ, ಮಾಜಿ ಸಂಸದ.- - -
(ಸಾಂದರ್ಭಿಕ ಚಿತ್ರ)