ದಾಬಸ್‍ಪೇಟೆ: ಗ್ರಾಮೀಣ ಪ್ರದೇಶದಲ್ಲಿ ಎಲೆ ಮರೆಯ ಕಾಯಿಯಂತಿರುವ ಪ್ರತಿಭೆಗಳನ್ನು ಹೊರ ತೆಗೆದು ಪ್ರಶಸ್ತಿ ನೀಡಿ ಪ್ರೋತ್ಸಾಹಿಸುವ ಜ್ಞಾನಗಂಗಾ ಸಾಹಿತ್ಯ ಮತ್ತು ಸಾಂಸ್ಕೃತಿಕ ರಂಗದ ಸೇವೆ ಸ್ಮರಣೀಯ ಎಂದು ವನಕಲ್ಲು ಮಠದ ಡಾ.ಶ್ರೀ ಬಸವರಮಾನಂದ ಸ್ವಾಮೀಜಿ ಪ್ರಶಂಸಿಸಿದರು.

ದಾಬಸ್‍ಪೇಟೆ: ಗ್ರಾಮೀಣ ಪ್ರದೇಶದಲ್ಲಿ ಎಲೆ ಮರೆಯ ಕಾಯಿಯಂತಿರುವ ಪ್ರತಿಭೆಗಳನ್ನು ಹೊರ ತೆಗೆದು ಪ್ರಶಸ್ತಿ ನೀಡಿ ಪ್ರೋತ್ಸಾಹಿಸುವ ಜ್ಞಾನಗಂಗಾ ಸಾಹಿತ್ಯ ಮತ್ತು ಸಾಂಸ್ಕೃತಿಕ ರಂಗದ ಸೇವೆ ಸ್ಮರಣೀಯ ಎಂದು ವನಕಲ್ಲು ಮಠದ ಡಾ.ಶ್ರೀ ಬಸವರಮಾನಂದ ಸ್ವಾಮೀಜಿ ಪ್ರಶಂಸಿಸಿದರು.

ವನಕಲ್ಲು ಮಠದಲ್ಲಿ ಜ್ಞಾನಗಂಗಾ ಸಾಹಿತ್ಯ ಮತ್ತು ಸಾಂಸ್ಕೃತಿಕ ರಂಗ ಹಮ್ಮಿಕೊಂಡಿದ್ದ ಸಾಹಿತ್ಯ ಸೌರಭ ಕಾರ್ಯಕ್ರಮದಲ್ಲಿ ವಿವಿಧ ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಈರಪ್ಪ ನಾಗರಾಜಪ್ಪ ಪ್ರತಿಷ್ಠಾನ ಮಣ್ಣೆಮೋಹನ್ ಪುಸ್ತಕ ಮಾಲೆ, ಪರಿಮಳ ಪ್ರಕಾಶನ ಪ್ರಕಟಿಸಿದ ಬಿಟ್ಟೀರ ಚೋಂದಮ್ಮ ಅವರ ಕುಂತಿ ಭಾರತ, ಕಮಲಾಕ್ಷಿ ಕೌಜಲಗಿ ವಿರಚಿತ ಕಮಲಾರ್ಪಣೆ, ಕುಮಾರಿ ಎಂ.ವರ್ಷ ವಿರಚಿತ ವರ್ಷಧಾರೆ, ಜ್ಞಾನಗಂಗಾ ಸಂಸ್ಥೆ ಅಧ್ಯಕ್ಷ ಮೋಹನ್ ವಿರಚಿತ ಮುನ್ನುಡಿ ಪರ್ವ, ಕೆ.ಎಸ್.ಮಮತಾ ವಿರಚಿತ ಕುಸುಮ ಕುಸುರಿ, ಭೋಗಣ್ಣ ವಿರಚಿತ ಸುಸ್ಥಿರ ಲಹರಿ, ಚೈತ್ರಾ ಗೋವರ್ಧನ್ ವಿರಚಿತ ಚೈತ್ರಾಭರಣ, ಸರಿತಾ ಕಾಡುಮಲ್ಲಿಗೆ ವಿರಚಿತ ಧರಣಿಯ ಧ್ವನಿ ಕೃತಿಗಳನ್ನು ಬಿಡಗಡೆಗೊಳಿಸಲಾಯಿತು.

ಸಾಧಕರಿಗೆ ಸನ್ಮಾನ: ವಿವಿಧ ಕ್ಷೇತ್ರದ ಸಾಧಕರಾದ ಜಗದೀಶ್(ಕೃಷಿ), ಶಶಿಧರ ಹಾಲಾಡಿ(ಪತ್ರಿಕೆ), ಶೇಖರಪ್ಪ(ಉದ್ದಿಮೆ), ಮಂಜುಳಾ ಸಿದ್ದರಾಜು(ರಂಗಶಿಕ್ಷಣ), ಸುರೇಶ್(ಪರಿಸರ), ಯಶೋಧ(ವೈದ್ಯಕೀಯ), ಚಿಕ್ಕಮಾಳಯ್ಯ(ರಂಗಕಲೆ), ರಾಮು ಹುರುಳಿಹಳ್ಳಿ(ಚಾರಣ) ಅವರಿಗೆ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ನಿವೃತ್ತ ಉಪನಿರ್ದೇಶಕ ಎಂ.ವಿ.ನೆಗಳೂರ, ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್.ಕೃಷ್ಣಪ್ಪ, ಬಿದಲೂರು ಸೋಮಣ್ಣ, ಅನಿಲ್‍ಕುಮಾರ್ ಜೋಷಿ, ಶಿವಪ್ರಸಾದ್ ಆರಾಧ್ಯ, ಕಸಾಪ ಮಾಜಿ ಅಧ್ಯಕ್ಷರಾದ ಕೆ.ಎನ್.ಪ್ರಕಾಶ್, ಪ್ರದೀಪ್, ಎನ್.ಜಿ.ಗೋಪಾಲ್, ಡಾ.ಗಂಗರಾಜು ಉಪಸ್ಥಿತರಿದ್ದರು.

ಪೋಟೋ 2 :

ವನಕಲ್ಲು ಮಠದಲ್ಲಿ ಜ್ಞಾನಗಂಗಾ ಸಾಹಿತ್ಯ ಮತ್ತು ಸಾಂಸ್ಕೃತಿಕರಂಗ ಹಮ್ಮಿಕೊಂಡಿದ್ದ ಸಾಹಿತ್ಯ ಸೌರಭ ಕಾರ್ಯಕ್ರಮದಲ್ಲಿ ಸಾಧಕರನ್ನು ವನಕಲ್ಲು ಮಠದ ಡಾ.ಶ್ರೀ ಬಸವರಮಾನಂದ ಸ್ವಾಮೀಜಿ ಅಭಿನಂದಿಸಿದರು.