ಸಿಂಗನಾಯಕನಹಳ್ಳಿ ಸಹಕಾರ ಸಂಘಕ್ಕೆ ವಾಣಿಶ್ರೀ ಮತ್ತೆ ಅಧ್ಯಕ್ಷೆ

| Published : Feb 20 2025, 01:32 AM IST

ಸಾರಾಂಶ

ಸಿಂಗನಾಯಕನಹಳ್ಳಿ ರೈತರ ಸೇವಾ ಸಹಕಾರ ಸಂಘದ ಅಧ್ಯಕ್ಷರಾಗಿ ಡಾ.ವಾಣಿಶ್ರೀ ವಿಶ್ವನಾಥ್ ಅವರು ಸತತ 5ನೇ ಬಾರಿಗೆ ಆಯ್ಕೆಯಾಗಿದ್ದು, ಅವರ ನೇತೃತ್ವದ ಹಾಲಿ 12 ನಿರ್ದೇಶಕರ ತಂಡ 2025-30ರ ಅವಧಿಗೆ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಸಹಕಾರ ಕ್ಷೇತ್ರದಲ್ಲಿ ಐತಿಹಾಸಿಕ ಸಾಧನೆ ಮಾಡಿದೆ.

ಕನ್ನಡಪ್ರಭ ವಾರ್ತೆ ಯಲಹಂಕ

ಸಿಂಗನಾಯಕನಹಳ್ಳಿ ರೈತರ ಸೇವಾ ಸಹಕಾರ ಸಂಘದ ಅಧ್ಯಕ್ಷರಾಗಿ ಡಾ.ವಾಣಿಶ್ರೀ ವಿಶ್ವನಾಥ್ ಅವರು ಸತತ 5ನೇ ಬಾರಿಗೆ ಆಯ್ಕೆಯಾಗಿದ್ದು, ಅವರ ನೇತೃತ್ವದ ಹಾಲಿ 12 ನಿರ್ದೇಶಕರ ತಂಡ 2025-30ರ ಅವಧಿಗೆ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಸಹಕಾರ ಕ್ಷೇತ್ರದಲ್ಲಿ ಐತಿಹಾಸಿಕ ಸಾಧನೆ ಮಾಡಿದೆ.

ಬುಧವಾರ ನಡೆದ ಚುನಾವಣೆಯಲ್ಲಿ ಡಾ.ವಾಣಿಶ್ರೀ ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಅವರ ಮಾರ್ಗದರ್ಶನದಲ್ಲಿ ಸಹಕಾರ ಸಂಘದ ನಿರ್ದೇಶಕರ ಆಯ್ಕೆ ನಡೆದಿದ್ದು, ಸತತ 5ನೇ ಬಾರಿಗೆ ಸಂಘ ಬಿಜೆಪಿ ತೆಕ್ಕೆಗೆ ಬರುವ ಮೂಲಕ ರಾಜ್ಯದಲ್ಲೇ ಹೊಸದೊಂದು ಮೈಲುಗಲ್ಲು ಮೂಡಿಸಿದ್ದಾರೆ.

ಡಾ.ವಾಣಿಶ್ರೀ ಮಾತನಾಡಿ, ಸಹಕಾರ ಸಂಘದ ಎಲ್ಲಾ 12 ನಿರ್ದೇಶಕರ ಆಯ್ಕೆ ಹಾಗೂ ನನ್ನನ್ನು ಆಯ್ಕೆ ಮಾಡಲು ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಸಹಕರಿಸಿರುವ ಮುಖಂಡರು, ಮತದಾರರು, ಸಹಕಾರ ಸಂಘದ ಸದಸ್ಯರಿಗೆ ಧನ್ಯವಾದ. ನಮ್ಮ ಸಂಘದಲ್ಲಿ 7 ಸಾವಿರಕ್ಕೂ ಹೆಚ್ಚು ಷೇರುದಾರರಿದ್ದು, ವಾರ್ಷಿಕವಾಗಿ ₹1200 ಕೋಟಿ ವಹಿವಾಟು ನಡೆಯುತ್ತದೆ. ಕಳೆದ ವರ್ಷ ₹6 ಕೋಟಿ ಲಾಭ ಗಳಿಸಿದ್ದು, ಮುಂದಿನ ಆರ್ಥಿಕ ವರ್ಷದಲ್ಲಿ ₹8 ಕೋಟಿ ಲಾಭ ಗಳಿಸುವ ನಿರೀಕ್ಷೆಯಿದೆ ಎಂದರು.

ಈ ವೇಳೆ ಬಿಜೆಪಿ ಯುವ ಮುಖಂಡರಾದ ಅಲೋಕ್ ವಿಶ್ವನಾಥ್, ಎಸ್.ಎನ್.ರಾಜಣ್ಣ, ದಿಬ್ಬೂರು ಜಯಣ್ಣ, ಡಿ.ಜಿ‌.ಅಪ್ಪಯ್ಯಣ್ಣ, ಚೊಕ್ಕನಹಳ್ಳಿ ವೆಂಕಟೇಶ್, ಸತೀಶ್ ಕಡತನಮಲೆ, ವಿ.ಪವನ್ ಕುಮಾರ್, ಈಶ್ವರ್, ಸೋಮಶೇಖರ್, ಶಿವಮಾದು, ಎಚ್.ಸಿ.ರಾಜೇಶ್, ಪಿ.ಕೆ.ರಾಜಣ್ಣ, ಶ್ರೀನಿವಾಸಯ್ಯ, ಲಿಂಗನಹಳ್ಳಿ ವೆಂಕಟೇಶ್, ಜಗದೀಶ್, ವಿ.ವಿ‌.ರಾಮಮೂರ್ತಿ, ನರಸಿಂಹಮೂರ್ತಿ, ನಾರಾಯಣ ಸ್ವಾಮಿ, ರಾಜಣ್ಣ, ಟಿ.ಮುನಿರೆಡ್ಡಿ, ವಸಂತ್ ಅರಕೆರೆ, ಪ್ರಶಾಂತ್ ರೆಡ್ಡಿ, ಕಿರಣ್, ಲಕ್ಷ್ಮೀಪತಿಗೌಡ, ಮುನಿದಾಸಪ್ಪ, ಸಿಂಗನಾಯಕನಹಳ್ಳಿ ಗ್ರಾ.ಪಂ‌.ಅಧ್ಯಕ್ಷೆ ಅಮರಾವತಮ್ಮ ಇದ್ದರು.