ಬೆಲೆ ಏರಿಕೆ ನಡುವೆ ವರಮಹಾಲಕ್ಷ್ಮೀ ವ್ರತ

| Published : Aug 08 2025, 01:00 AM IST

ಸಾರಾಂಶ

ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆಯಲ್ಲಿ ಎಲ್ಲ ತರಹದ ವಸ್ತುಗಳ ಬೆಲೆ ಹೆಚ್ಚಿದ್ದರು ಜನರು ಹಬ್ಬದ ಸಿದ್ಧತೆಯನ್ನು ಭರದಲ್ಲೆ ಕೈಕೊಂಡಿದ್ದು, ಹೂವು, ಹಣ್ಣು, ತರಕಾರಿ ಬೆಲೆ ನಿತ್ಯಕ್ಕಿಂತ ಎರಡರಷ್ಟು ಹೆಚ್ಚಿದ್ದರೆ ಸೊಪ್ಪಿನ ಬೆಲೆ ಇಳಿಕೆಗೊಂಡಿದ್ದು ಹಬ್ಬದ ವಿಶೇಷವಾಗಿತ್ತು. ಸುಲಿಯುವ ಕಾಳು ಕೆ.ಜಿಗೆ ೧೫೦ ರುಗಳಾಗಿದ್ದರೆ, ಬಿನ್ಸ್, ಕ್ಯಾರೆಟ್ ಬೆಲೆ ನೂರುಗಳಾಗಿತ್ತು. ಆದರೆ, ಕೊತ್ತಂಬರಿ, ಹರಿವೆ ಸೇರಿದಂತೆ ಎಲ್ಲಾ ಸೊಪ್ಪುಗಳ ಬೆಲೆ ನಾಲ್ಕು ಕಟ್ಟಿಗೆ ೧೦ ರು.ಗಳಿಗೆ ಕುಸಿದಿತ್ತು. ಮಲ್ಲಿಗೆ ಹೂವು ಮಾರೊಂದಕ್ಕೆ ೧೨೦ ರು. ಗಳಿಂದ ೧೫೦ ರು. ಗಳಾಗಿದ್ದರೆ ಸೇವಂತಿಗೆ ಹೂವು ಸಹ ೧೦೦ ರು. ಗಳಿಂದ ೧೫೦ ರು. ಗಳಲ್ಲಿ ಮಾರಾಟವಾದವು.

ಕನ್ನಡಪ್ರಭ ವಾರ್ತೆ ಸಕಲೇಶಪುರ

ಬೆಲೆ ಏರಿಕೆಯ ನಡುವೆಯು ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಪಟ್ಟಣದಲ್ಲಿ ವ್ಯಾಪಾರ ಜೋರಾಗಿತ್ತು.

ಹಬ್ಬದ ಹಿನ್ನೆಲೆಯಲ್ಲಿ ಎಲ್ಲ ತರಹದ ವಸ್ತುಗಳ ಬೆಲೆ ಹೆಚ್ಚಿದ್ದರು ಜನರು ಹಬ್ಬದ ಸಿದ್ಧತೆಯನ್ನು ಭರದಲ್ಲೆ ಕೈಕೊಂಡಿದ್ದು, ಹೂವು, ಹಣ್ಣು, ತರಕಾರಿ ಬೆಲೆ ನಿತ್ಯಕ್ಕಿಂತ ಎರಡರಷ್ಟು ಹೆಚ್ಚಿದ್ದರೆ ಸೊಪ್ಪಿನ ಬೆಲೆ ಇಳಿಕೆಗೊಂಡಿದ್ದು ಹಬ್ಬದ ವಿಶೇಷವಾಗಿತ್ತು. ಸುಲಿಯುವ ಕಾಳು ಕೆ.ಜಿಗೆ ೧೫೦ ರುಗಳಾಗಿದ್ದರೆ, ಬಿನ್ಸ್, ಕ್ಯಾರೆಟ್ ಬೆಲೆ ನೂರುಗಳಾಗಿತ್ತು. ಆದರೆ, ಕೊತ್ತಂಬರಿ, ಹರಿವೆ ಸೇರಿದಂತೆ ಎಲ್ಲಾ ಸೊಪ್ಪುಗಳ ಬೆಲೆ ನಾಲ್ಕು ಕಟ್ಟಿಗೆ ೧೦ ರು.ಗಳಿಗೆ ಕುಸಿದಿತ್ತು. ಮಲ್ಲಿಗೆ ಹೂವು ಮಾರೊಂದಕ್ಕೆ ೧೨೦ ರು. ಗಳಿಂದ ೧೫೦ ರು. ಗಳಾಗಿದ್ದರೆ ಸೇವಂತಿಗೆ ಹೂವು ಸಹ ೧೦೦ ರು. ಗಳಿಂದ ೧೫೦ ರು. ಗಳಲ್ಲಿ ಮಾರಾಟವಾದವು. ಸೇಬು ದರ ನೂರು ರು. ಗಳಾಗದ್ದರೆ ಮೊಸಂಬಿ ಸೇರಿದಂತೆ ಎಲ್ಲ ವಸ್ತುಗಳ ಬೆಲೆ ಮೂರಂಕಿ ದಾಟಿದ್ದವು. ಇನ್ನುಳಿದಂತೆ ಬಾಳೆದಿಂಡು ಸಹ ಭರ್ಜರಿಯಾಗಿ ವ್ಯಾಪಾರವಾದವು.