ಸಾರಾಂಶ
ಹಳೇನಿಜಗಲ್‌ನ ಶ್ರೀ ಅಷ್ಟಲಕ್ಷ್ಮೀ ದೇವಾಲಯದಲ್ಲಿ ವರಮಹಾಲಕ್ಷ್ಮಿ ಹಬ್ಬದ ವ್ರತಾಚರಣೆ ಶುಕ್ರವಾರ ಸಂಪನ್ನವಾಗಿದೆ.
ದಾಬಸ್‌ಪೇಟೆ: ಹಳೇನಿಜಗಲ್‌ನ ಶ್ರೀ ಅಷ್ಟಲಕ್ಷ್ಮೀ ದೇವಾಲಯದಲ್ಲಿ ವರಮಹಾಲಕ್ಷ್ಮಿ ಹಬ್ಬದ ವ್ರತಾಚರಣೆ ಶುಕ್ರವಾರ ಸಂಪನ್ನವಾಗಿದೆ. ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆ ಅಮ್ಮನವರಿಗೆ ಅಭಿಷೇಕ, ಅರ್ಚನೆ, ಪುಷ್ಪಾಲಂಕಾರ, ವಿಶೇಷವಾಗಿ ತಾವರೆ ಹೂ ಬಣ್ಣದ ವಸ್ತ್ರಾಲಂಕಾರ ಮಾಡಿ ಪೂಜೆ-ಪುನಸ್ಕಾರ ಕೈಗೊಳ್ಳಲಾಯಿತು.
ದೇವಾಲಯ ಮುಖ್ಯಸ್ಥ ಬಿ.ಪಿ. ಪ್ರಕಾಶ್ ಮಾತನಾಡಿ, ವರವನ್ನು ನೀಡುವ ಮಹಾಲಕ್ಷ್ಮಿ ಎಂದರೇ ಮಹಿಳೆಯರಿಗೆ ಬಹಳ ಭಕ್ತಿ, ಧನಕ್ಕಾಗಿ ಲಕ್ಷ್ಮೀ ಹಬ್ಬ ಆಚರಿಸುವುದಕ್ಕಿಂತ, ಪರಿಸರಕ್ಕಾಗಿ ಲಕ್ಷ್ಮೀ ಪೂಜೆ ಮಾಡಬೇಕು. ಪ್ರಾಕೃತಿಕ ಮಡಿಲಿನಲ್ಲಿರುವ ನಮ್ಮ ದೇವಾಲಯ ಪೂರ್ವಜರಿಗೆ ಉಳುಮೆ ಮಾಡುವ ವೇಳೆ ದೊರೆತ ಉದ್ಭವ ಮೂರ್ತಿಯಾಗಿದೆ. ಆಡಂಬರದ ಪೂಜೆಗಿಂತ ಅರ್ಥಪೂರ್ಣ, ಶಾಸ್ತ್ರೋಕ್ತವಾಗಿ ಲಕ್ಷ್ಮೀಯನ್ನು ಪ್ರಾರ್ಥಿಸಿದಾಗ ದೇವಿ ಒಲಿಯುತ್ತಾಳೆ ಎಂದರು.ವಾಸ ಸೈಟಿಫಿಂಕ್ ಕಂಪನಿಯ ಸಿಇಒ ಬಿ.ಪಿ. ರೂಪೇಶ್ ಇನ್ನಿತರರಿದ್ದರು.