ಸಾರಾಂಶ
ಕನ್ನಡಪ್ರಭ ವಾರ್ತೆ: ಗಡಿನಾಡಿನಲ್ಲಿ ಶಿಕ್ಷಣ ಕ್ರಾಂತಿ ಮಾಡಿದ ತಾಲೂಕಿನ ತೊರವಿಯ ನಿಸರ್ಗ ಫೌಂಡೇಷನ್ ಹಾಗೂ ನಿಸರ್ಗ ಶಾಲೆಯ ಅಧ್ಯಕ್ಷ ವಸಂತ ಭೋಸಲೆ ಅವರಿಗೆ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಸಾಮಾಜಿಕ ಧಾರ್ಮಿಕ ಸಾಂಸ್ಕ್ರತಿಕ ಸಂಘದಿಂದ ಹಿಂದುಳಿದ ವರ್ಗಗಳ ರತ್ನ ಡಿ.ದೇವರಾಜ ಅರಸು ರಾಜ್ಯ ಪ್ರಶಸ್ತಿ-2024 ನೀಡಿ ಗೌರವಿಸಲಾಗಿದೆ.
ಕನ್ನಡಪ್ರಭ ವಾರ್ತೆ: ಗಡಿನಾಡಿನಲ್ಲಿ ಶಿಕ್ಷಣ ಕ್ರಾಂತಿ ಮಾಡಿದ ತಾಲೂಕಿನ ತೊರವಿಯ ನಿಸರ್ಗ ಫೌಂಡೇಷನ್ ಹಾಗೂ ನಿಸರ್ಗ ಶಾಲೆಯ ಅಧ್ಯಕ್ಷ ವಸಂತ ಭೋಸಲೆ ಅವರಿಗೆ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಸಾಮಾಜಿಕ ಧಾರ್ಮಿಕ ಸಾಂಸ್ಕ್ರತಿಕ ಸಂಘದಿಂದ ಹಿಂದುಳಿದ ವರ್ಗಗಳ ರತ್ನ ಡಿ.ದೇವರಾಜ ಅರಸು ರಾಜ್ಯ ಪ್ರಶಸ್ತಿ-2024 ನೀಡಿ ಗೌರವಿಸಲಾಗಿದೆ. ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ ಡಿ.ದೇವರಾಜ ಅರಸು ಜಯಂತ್ಯುತ್ಸವದಲ್ಲಿ ಸಂಘದ ರಾಜ್ಯಾಧ್ಯಕ್ಷ ಸೈದಪ್ಪ ಗುತ್ತೇದಾರ ಪ್ರಶಸ್ತಿ ನೀಡಿ ಸನ್ಮಾನಿಸಿದರು. ಪ್ರಶಸ್ತಿ ಸ್ವೀಕರಿಸಿದ ವಸಂತ ಭೋಸಲೇ ಅವರು ಸಂಘಕ್ಕೆ ಧನ್ಯವಾದ ಅರ್ಪಿಸಿದರು.