ವಾಸವಿ ಕಾಲೋನಿ ದರೋಡೆ ಪ್ರಕರಣ: ಆರೋಪಿಗಳ ಪತ್ತೆಗೆ ಬಲೆಬೀಸಿದ ಖಾಕಿಪಡೆ

| Published : Feb 24 2025, 12:33 AM IST

ವಾಸವಿ ಕಾಲೋನಿ ದರೋಡೆ ಪ್ರಕರಣ: ಆರೋಪಿಗಳ ಪತ್ತೆಗೆ ಬಲೆಬೀಸಿದ ಖಾಕಿಪಡೆ
Share this Article
  • FB
  • TW
  • Linkdin
  • Email

ಸಾರಾಂಶ

Vasavi Colony robbery case: Khaki force lays trap to track down accused

-ದರೋಡೆ ಸ್ಥಳಕ್ಕೆ ಜಿಲ್ಲಾ ರಕ್ಷಣಾಧಿಕಾರಿ ರಂಜಿತ್‌ಕುಮಾರ್‌ ಬಂಡಾರು ಭೇಟಿ

----

ಕನ್ನಡಪ್ರಭವಾರ್ತೆ ಚಳ್ಳಕೆರೆ

ವಾಸವಿ ಕಾಲೋನಿಯಲ್ಲಿ ಶನಿವಾರ ಬೆಳಗ್ಗೆ ಹಾಡುಹಗಲೇ ನಡೆದ ದರೋಡೆ ಪ್ರಕರಣದ ಪತ್ತೆ ಕಾರ್ಯವನ್ನು ಪೊಲೀಸ್ ಇಲಾಖೆ ಚುರುಕುಗೊಳಿಸಿದೆ. ವಾಸವಿ ಕಾಲೋನಿ ನಿವಾಸಿ ವಾಣಿಜ್ಯೋದ್ಯಮಿ ವೆಂಕಟೇಶಲು ಅವರ ಪತ್ನಿ ಗೀತಾಲಕ್ಷ್ಮಿ(೫೨), ತಾಯಿ ಸಾವಿತ್ರಮ್ಮ ಇವರಿಗೆ ಚಾಕುತೋರಿಸಿ ಪ್ರಾಣ ಬೆದರಿಕೆ ಒಡ್ಡಿ ಮನೆಯಲ್ಲಿದ್ದ ಚಿನ್ನದ ಬಳೆ, ಮಾಂಗಲ್ಯದ ಸರ, ಉಂಗುರ, ಕಿವಿಓಲೆ, ಕರಿಮಣಿಸರ ಸೇರಿ ೩೧೦ ಗ್ರಾಂ ತೂಕದ ೮.೭೫ ಲಕ್ಷ ಮೌಲ್ಯದ ಆಭರಣ ಕಳ್ಳರು ದರೋಡೆ ಮಾಡಿಕೊಂಡು ಹೋಗಿರುತ್ತಾರೆ.

ಮಾಹಿತಿ ತಿಳಿದ ಕೂಡಲೇ ಜಿಲ್ಲಾ ರಕ್ಷಣಾಧಿಕಾರಿ ರಂಜಿತ್‌ ಕುಮಾರ್‌ ಬಂಡಾರು ಸ್ಥಳಕ್ಕೆ ಧಾವಿಸಿ ದರೋಡೆಕೋರರ ಕೃತ್ಯದ ಬಗ್ಗೆ ಗೀತಾಲಕ್ಷ್ಮೀ ಮತ್ತು ಸಾವಿತ್ರಮ್ಮನವರಿಂದ ಸಂಪೂರ್ಣ ಮಾಹಿತಿ ಪಡೆದಿದ್ದಾರೆ. ದರೋಡೆ ನಡಸಿದ ಕಳ್ಳರು ೩೦ರಿಂದ೪೦ ವಯಸ್ಸಿನವರಾಗಿದ್ದು, ಕನ್ನಡ, ತೆಲುಗು ಮಾತನಾಡುತ್ತಿದ್ದರು. ಜೀನ್ಸ್‌ ಪ್ಯಾಂಟ್‌ ಧರಿಸಿದ್ದಲ್ಲದೆ, ಓರ್ವ ವ್ಯಕ್ತಿ ಮಾಸ್ಕ್ ಹಾಕಿದ್ದನ್ನು ಮಾಹಿತಿ ನೀಡಿದ್ದಾರೆ.

ಗೀತಾಲಕ್ಷ್ಮೀ ಯಾವುದೋ ಕಾರ್ಯಕ್ರಮಕ್ಕೆ ತೆರಳಲು ಮನೆಯಲ್ಲಿದ್ದ ಬಂಗಾರದ ಆಭರಣವನ್ನು ಅಡಿಗೆ ಮನೆಯ ಕಟ್ಟೆ ಮೇಲೆ ಇಟ್ಟ ವೇಳೆ ಈ ಕೃತ್ಯ ನಡೆದಿದೆ. ನಿವಾಸಿಗಳ ಪ್ರಕಾರ ಮೂರರಿಂದ ನಾಲ್ಕು ಜನ ಕಳ್ಳರು ಕಾರಿನಲ್ಲಿ ಆಗಮಿಸಿ, ಮನೆಯ ಸನಿಹದಲ್ಲೇ ಕಾರನ್ನು ನಿಲ್ಲಿಸಿದ್ದರು ಎನ್ನಲಾಗಿದೆ.

ದೂರು ನೀಡಿರುವ ಗೀತಾಲಕ್ಷ್ಮಿ ೭೦ಗ್ರಾಂ ಒಂದು ಮಾಂಗಲ್ಯಸರ, ೬೦ಗ್ರಾಂ ನಾಲ್ಕು ಬಳೆ, ೫ ಗ್ರಾಂನ ಕಿವಿಓಲೆ, ಕಿಚನ್‌ ಪರ್ಸ್ ನಲ್ಲಿಟ್ಟದ ೩೦ಗ್ರಾಂನ ಬಂಗಾರದ ಕರಿಮಣಿಸರ, ೪೦ಗ್ರಾಂ ನಾಲ್ಕು ಬಳೆ, ೫ಗ್ರಾಂ ಉಂಗುರ, ಅತ್ತೆ ಸಾವಿತ್ರಮ್ಮನ ಮೈಮೇಲಿದ್ದ ೬೦ಗ್ರಾಂನ ನಾಲ್ಕು ಬಳೆ, ೪೦ಗ್ರಾಂನ ಸರ ಸೇರಿದಂತೆ ಒಟ್ಟು ೩೧೦ಗ್ರಾಂ ತೂಕದ ಒಡವೆಗಳನ್ನು ದರೋಡೆಕೋರರು ಅಪಹರಿಸಿದ್ದಾರೆ. ಅತ್ತೆ ಸಾವಿತ್ರಮ್ಮನನ್ನು ಬಾತ್‌ರೂಂನಲ್ಲಿ, ಗೀತಾ ಲಕ್ಷ್ಮೀ ಅವರನ್ನು ಶೌಚಾಲಯದಲ್ಲಿ ಕೂಡಿ ಹಾಕಿ ಬಾಗಿಲು ಹಾಕಿ ಮಧ್ಯಾಹ್ನ ೧೨.೩೦ರ ಸಮಯದಲ್ಲಿ ಮನೆಯಿಂದ ಹೊರಹೋಗಿದ್ದಾರೆ.

ಘಟನೆ ನಡೆದ ಸ್ಥಳದಲ್ಲಿ ಹೆಚ್ಚುವರಿ ರಕ್ಷಣಾಧಿಕಾರಿ ಕುಮಾರಸ್ವಾಮಿ, ಡಿವೈಎಸ್ಪಿ ರಾಜಣ್ಣ ನೇತೃತ್ವ ತಂಡ ರಚಿಸಿದ್ದು, ದರೋಡೆಕೋರರನ್ನು ಪತ್ತೆಹಚ್ಚಲು ಪೊಲೀಸ್ ಇಲಾಖೆ ಕಾರ್ಯಚರಣೆ ಆರಂಭಿಸಿದೆ. ಜಿಲ್ಲೆಯಾದ್ಯಂತ ಪೊಲೀಸರು ದರೋಡೆಕೋರರ ಪತ್ತೆಗೆ ಬಲೆಬೀಸಿದ್ದು, ಶೀಘ್ರದಲ್ಲೇ ಆರೋಪಿಗಳನ್ನು ಪತ್ತೆಹಚ್ಚುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

-----

ಪೋಟೋ: ಚಳ್ಳಕೆರೆ ನಗರದ ವಾಸವಿಕಾಲೋನಿಯಲ್ಲಿ ನಡೆದ ದರೋಡೆ ನಡೆದ ಸ್ಥಳಕ್ಕೆ ಜಿಲ್ಲಾ ರಕ್ಷಣಾಧಿಕಾರಿ ರಂಜಿತ್‌ಕುಮಾರ್‌ ಬಂಡಾರು ಭೇಟಿ ನೀಡಿ ಮಾಹಿತಿ ಪಡೆದರು.

೨೩ಸಿಎಲ್‌ಕೆ೩