ಭಾರತದಲ್ಲಿ ರಕ್ತನಾಳ ಕಾಯಿಲೆಗಳು ಹೆಚ್ಚುತ್ತಿವೆ

| Published : Jan 21 2025, 12:33 AM IST

ಸಾರಾಂಶ

ದೀರ್ಘಕಾಲದ ಮಧುಮೇಹದಿಂದ ಕಾಲಿನಲ್ಲಿ ಉಂಟಾಗುವ ಸೋಂಕುಗಳು ಮತ್ತು ಹುಣ್ಣುಗಳು, ಉಬ್ಬಿರುವ ರಕ್ತನಾಳಗಳು, ಹುಣ್ಣುಗಳು ಮತ್ತು ಕಡಿಮೆ ರಕ್ತದ ಹರಿವಿನಂತಹ ಗಂಭೀರ ಆರೋಗ್ಯ ಸಮಸ್ಯೆಗಳಾದ ವೆರಿಕೋಸ್ ವೆಯಿನ್ಸ್, ಡೀಪ್ ವೆಯಿನ್ ಥಂಬೋಸಿಸ್ (ಡಿವಿಟಿ) ಹಾಗೂ ತೋಳುಗಳು ಮತ್ತು ಕಾಲುಗಳಿಗೆ ಕಡಿಮೆ ರಕ್ತದ ಹರಿವಿನಿಂದ ಉಂಟಾಗುವ ಪೆರಿಫೆರಲ್ ವಾಸ್ಕುಲರ್ ಡಿಸೀಸ್ (ಪಿವಿಡಿ) ಒಳಗೊಂಡಂತೆ ರಕ್ತನಾಳದ ಕಾಯಿಲೆಗಳು ಹೆಚ್ಚುತ್ತಿವೆ ಎಂದು ಮಣಿಪಾಲ ಆಸ್ಪತ್ರೆಯ ಯಶವಂತಪುರದ ವಾಸ್ಕ್ಯುಲರ್ ಮತ್ತು ಎಂಡೋವಾಸ್ಕ್ಯುಲರ್ ಸರ್ಜರಿಯ ಸೀನಿಯರ್ ಕನ್ಸಲ್ಟೆಂಟ್ ಡಾ. ಬಿ. ರಾಜೇಂದ್ರ ಪ್ರಸಾದ್ ಹೇಳಿದ್ದಾರೆ.

- ಯಶವಂತಪುರದ ಮಣಿಪಾಲ ಆಸ್ಪತ್ರೆ ವೈದ್ಯ ಡಾ.ರಾಜೇಂದ್ರ ಪ್ರಸಾದ್‌ ಮಾಹಿತಿ - - - ಕನ್ನಡಪ್ರಭ ವಾರ್ತೆ ದಾವಣಗೆರೆ

ದೀರ್ಘಕಾಲದ ಮಧುಮೇಹದಿಂದ ಕಾಲಿನಲ್ಲಿ ಉಂಟಾಗುವ ಸೋಂಕುಗಳು ಮತ್ತು ಹುಣ್ಣುಗಳು, ಉಬ್ಬಿರುವ ರಕ್ತನಾಳಗಳು, ಹುಣ್ಣುಗಳು ಮತ್ತು ಕಡಿಮೆ ರಕ್ತದ ಹರಿವಿನಂತಹ ಗಂಭೀರ ಆರೋಗ್ಯ ಸಮಸ್ಯೆಗಳಾದ ವೆರಿಕೋಸ್ ವೆಯಿನ್ಸ್, ಡೀಪ್ ವೆಯಿನ್ ಥಂಬೋಸಿಸ್ (ಡಿವಿಟಿ) ಹಾಗೂ ತೋಳುಗಳು ಮತ್ತು ಕಾಲುಗಳಿಗೆ ಕಡಿಮೆ ರಕ್ತದ ಹರಿವಿನಿಂದ ಉಂಟಾಗುವ ಪೆರಿಫೆರಲ್ ವಾಸ್ಕುಲರ್ ಡಿಸೀಸ್ (ಪಿವಿಡಿ) ಒಳಗೊಂಡಂತೆ ರಕ್ತನಾಳದ ಕಾಯಿಲೆಗಳು ಹೆಚ್ಚುತ್ತಿವೆ ಎಂದು ಮಣಿಪಾಲ ಆಸ್ಪತ್ರೆಯ ಯಶವಂತಪುರದ ವಾಸ್ಕ್ಯುಲರ್ ಮತ್ತು ಎಂಡೋವಾಸ್ಕ್ಯುಲರ್ ಸರ್ಜರಿಯ ಸೀನಿಯರ್ ಕನ್ಸಲ್ಟೆಂಟ್ ಡಾ. ಬಿ. ರಾಜೇಂದ್ರ ಪ್ರಸಾದ್ ಹೇಳಿದರು.

ಸಂಕೀರ್ಣ ರಕ್ತದ ಅಸ್ವಸ್ಥತೆಗಳು ಮತ್ತು ಅಪರೂಪದ ರಕ್ತನಾಳದ ಕಾಯಿಲೆಗಳ ಕುರಿತು ಜಾಗೃತಿ ಮೂಡಿಸಲು ಮಣಿಪಾಲ್ ಆಸ್ಪತ್ರೆಯಿಂದ ಹಿರಿಯ ವೈದ್ಯರು ನಗರದಲ್ಲಿ ಶನಿವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ರಕ್ತನಾಳದ ರೋಗಗಳು ಭಾರತದಲ್ಲಿ ಬೆಳೆಯುತ್ತಿರುವ ಗಂಭೀರ ಆರೋಗ್ಯ ಸಮಸ್ಯೆಯಾಗಿದೆ. ಈ ಸಮಸ್ಯೆಗಳಲ್ಲಿ ಚಿಕಿತ್ಸಾ ಕ್ರಮವಾಗಿ ರಕ್ತದ ಹರಿವನ್ನು ಪುನಃಸ್ಥಾಪಿಸಲು ಮತ್ತು ಅಂಗಚ್ಛೇದನದ ಅನಿವಾರ್ಯತೆ ತಪ್ಪಿಸಲು, ಆರಂಭಿಕ ಹಂತದ ಪತ್ತೆ ಮತ್ತು ತ್ವರಿತ ಚಿಕಿತ್ಸೆಯು ನಿರ್ಣಾಯಕವಾಗಿದೆ ಎಂದು ಹೇಳಿದರು.

ರಕ್ತನಾಳದ ರೋಗಗಳ ಬಗ್ಗೆ ಜಾಗೃತಿ ಮತ್ತು ಚಿಕಿತ್ಸೆ ಆರೈಕೆಯಲ್ಲಿನ ಇತ್ತೀಚಿನ ಪ್ರಗತಿಗಳ ಕುರಿತು ಪಿಡಿಯಾಟ್ರಿಕ್ ಹೆಮಟಾಲಜಿ ಆಂಕೊಲಾಜಿ ಮತ್ತು ಬಿಎಂಟಿ ಕನ್ಸಲ್ಟೆಂಟ್ ಡಾ. ವಿನಯ ಮುನಿಕೋಟಿ ವೆಂಕಟೇಶ, ಮಕ್ಕಳಲ್ಲಿ ರಕ್ತದ ಕ್ಯಾನ್ಸರ್ ಮತ್ತು ಇನ್ನಿತರೇ ರಕ್ತ-ಸಂಬಂಧಿ ಸಂಕೀರ್ಣ ರೋಗಗಳ ಹಾಗೂ ಅವುಗಳ ಚಿಕಿತ್ಸೆಯಲ್ಲಿ ಮೂಳೆ ಮಜ್ಜೆಯ ಕಸಿ ಕುರಿತು ಮಾತನಾಡಿದರು. ಯಶವಂತಪುರದ ಮಣಿಪಾಲ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ ಚಿಕಿತ್ಸೆ ಪಡೆದ 9 ತಿಂಗಳ ಮಗುವಿನಲ್ಲಿ ರೇಡಿಯಲ್ ಆರ್ಟರಿ ಅನ್ನೂರಿಸಮ್ ಎಂಬ ಅಪರೂಪದ ರಕ್ತನಾಳದ ಸಮಸ್ಯೆಯ ಸ್ಥಿತಿಯ ಬಗ್ಗೆ ವಿವರಿಸಿದರು.

ಯಶವಂತಪುರದ ಮಣಿಪಾಲ್ ಆಸ್ಪತ್ರೆಯು ಅಪರೂಪದ ಮತ್ತು ಸಂಕೀರ್ಣ ಆರೋಗ್ಯ ಸಮಸ್ಯೆಗಳಿಗೆ ಇರುವವರಿಗೆ ಸುಧಾರಿತ, ಬಾಹುವಿಭಾಗೀಯ ಆರೈಕೆ ನೀಡಲಿದೆ. ತನ್ನ ಆಧುನಿಕ ಸೌಲಭ್ಯಗಳು ಮತ್ತು ತಜ್ಞ ವೈದ್ಯರ ತಂಡದೊಂದಿಗೆ, ಆಸ್ಪತ್ರೆಯು ಪ್ರತಿಯೊಬ್ಬರಿಗೂ ಸಾಧ್ಯವಾದಷ್ಟು ಉತ್ತಮ ಚಿಕಿತ್ಸೆ ನೀಡುತ್ತಿದೆ ಎಂದು ಮಾಹಿತಿ ನೀಡಿದರು.

ಡಾ. ಬಿ.ರಾಜೇಂದ್ರ ಪ್ರಸಾದ ಪ್ರತಿ ತಿಂಗಳ ಮೂರನೇ ಭಾನುವಾರದಂದು ದಾವಣಗೆರೆಯ ಆರೈಕೆ ಆಸ್ಪತ್ರೆಯಲ್ಲಿ ಬೆಳಗ್ಗೆ 10ರಿಂದ ಮಧ್ಯಾಹ್ನ 1 ಗಂಟೆಯವರೆಗೆ ರೋಗಿಗಳನ್ನು ನೋಡಲಿದ್ದಾರೆ. ಹೆಚ್ಚಿನ ಮಾಹಿತಿಗೆ ಹರೀಶ್ ಮೊಃ 80505- 60580 ಅವರನ್ನು ಸಂಪರ್ಕಿಸಬಹುದು ಎಂದು ತಿಳಿಸಲಾಯಿತು.

- - - -18ಕೆಡಿವಿಜಿ33.ಜೆಪಿಜಿ:

ದಾವಣಗೆರೆಯಲ್ಲಿ ರಕ್ತನಾಳದ ಕಾಯಿಲೆಗಳ ಕುರಿತು ಡಾ. ಬಿ.ರಾಜೇಂದ್ರ ಪ್ರಸಾದ್, ಡಾ. ವಿನಯ ಮುನಿಕೋಟಿ ವೆಂಕಟೇಶ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.