ಸಾರಾಂಶ
ಕಲಾ ಸ್ಪಂದನದ ನಿರ್ದೇಶಕಿ ವಿದುಷಿ ಪವನ ಬಿ. ಆಚಾರ್ ಬಳಗದಿಂದ ರಿಟೈರ್ಮೆಂಟ್ ಹೋಂನಲ್ಲಿರುವವರಿಗೆ ಅನೇಕ ಚಟುವಟಿಕೆಗಳನ್ನು ನಡೆಸಲಾಯಿತು. ನಂತರ ವಿಪಂಚಿ ತಂಡದಿಂದ ಪಂಚ ವೀಣಾ ವಾದನ ನಡೆಯಿತು.
ಕನ್ನಡಪ್ರಭ ವಾರ್ತೆ ಮಣಿಪಾಲ
ಉಡುಪಿ ಕಲಾಸ್ಪಂದನ ಕಲಾ ಶಾಲೆಯು 30ನೇ ವರ್ಷಕ್ಕೆ ಕಾಲಿಡುವ ಪ್ರಯುಕ್ತ ವರ್ಷದುದ್ದಕ್ಕೂ ಸರಣಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.ಈ ನಿಮಿತ್ತ ಡಾ. ಪಳ್ಳತಡ್ಕ ಕೇಶವ ಭಟ್ ಮೆಮೋರಿಯಲ್ ಟ್ರಸ್ಟ್ ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ವೀಣಾ ಸಂಧ್ಯಾ ಎನ್ನುವ ಪಂಚ ವೀಣಾ ಕಾರ್ಯಕ್ರಮವನ್ನು ಶನಿವಾರ ಇಲ್ಲಿನ ಮಂಚಿಯ ಗ್ರೀನ್ ವ್ಯಾಲಿ ಪ್ಯಾರಿಡೈಸ್ ರಿಟೈರ್ಮೆಂಟ್ ಹೋಂನಲ್ಲಿ ನಡೆಸಿಕೊಟ್ಟರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಎಸ್. ಎನ್. ಕಮಲಾ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಡಾ. ಇಂದಿರಾ ಶಾನುಭೋಗ ಉಪಸ್ಥಿತರಿದ್ದರು.ಕಲಾ ಸ್ಪಂದನದ ನಿರ್ದೇಶಕಿ ವಿದುಷಿ ಪವನ ಬಿ. ಆಚಾರ್ ಬಳಗದಿಂದ ರಿಟೈರ್ಮೆಂಟ್ ಹೋಂನಲ್ಲಿರುವವರಿಗೆ ಅನೇಕ ಚಟುವಟಿಕೆಗಳನ್ನು ನಡೆಸಲಾಯಿತು. ನಂತರ ವಿಪಂಚಿ ತಂಡದಿಂದ ಪಂಚ ವೀಣಾ ವಾದನ ನಡೆಯಿತು. ಕಾರ್ಯಕ್ರಮ ರಿಟೈರ್ಮೆಂಟ್ ಹೋಂನ ನಿವಾಸಿಗಳಾದ ಹಿರಿಯರಿಂದ ತುಂಬಾ ಮೆಚ್ಚುಗೆ ಗಳಿಸಿತು.
ಡಾಕ್ಟರ್ ಪಳ್ಳತಡ್ಕ ಕೇಶವ ಭಟ್ ಮೆಮೋರಿಯಲ್ ಟ್ರಸ್ಟ್ ಸದಸ್ಯರಾದ ಡಾ. ಬಾಲಚಂದ್ರ ಆಚಾರ್ ಹಾಗೂ ಗ್ರೀನ್ ವ್ಯಾಲಿ ಪ್ಯಾರಿಡೈಸ್ ರಿಟೈರ್ಮೆಂಟ್ ಹೋಂನ ಟ್ರಸ್ಟಿಗಳಾದ ಡಾ. ತಾರಾ ಶಾನುಭೋಗ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.