ಸಾರಾಂಶ
ಮೂಲ್ಕಿ ಕೆಎಸ್ ರಾವ್ ನಗರದ ಬಿಜಾಪುರ ಕಾಲೋನಿಯ ವೀರಕೇಸರಿ ತರುಣ ವೃಂದ ಮತ್ತು ಮಾತೃ ಬಳಗದ ವತಿಯಿಂದ ಕೆಎಸ್ ರಾವ್ ನಗರದ ಲಿಂಗಪ್ಪಯ್ಯ ಕಾಡು ನಾಗಬನದ ಬಳಿಯ ವೇದಿಕೆಯಲ್ಲಿ 15ನೇ ವರ್ಷದ ಯುಗಾದಿ ಉತ್ಸವ ಹಾಗೂ 5ನೇ ವರ್ಷದ ಸಾರ್ವಜನಿಕ ಸತ್ಯನಾರಾಯಣ ಪೂಜೆ ನೆರವೇರಿತು.
ಕನ್ನಡಪ್ರಭ ವಾರ್ತೆ ಮೂಲ್ಕಿ
ಜೀವನದಲ್ಲಿ ಸಂಪಾದನೆಯ ಪ್ರತಿಯೊಂದು ಹೆಜ್ಜೆ ನೆನಪಿನಲ್ಲಿಟ್ಟುಕೊಂಡು ಸಾಧಕರಾಗಿ, ನೀತಿ ಬಿಡದೆ ಜಾತಿ ಧರ್ಮ ಆಚರಿಸಿ, ಸಂಸ್ಕಾರ ಹಾಗೂ ಸಂಸ್ಕೃತಿ ಮೈಗೂಡಿಸಿಕೊಂಡು ಸರಳತೆಯ ಜೀವನದ ಮೂಲಕ ಸಮಾಜಮುಖಿ ಜೀವನ ನಡೆಸಿ ಆದರ್ಶಪ್ರಾಯರಾಗಬೇಕೆಂದು ಧಾರ್ಮಿಕ ಚಿಂತಕ ವೇದಮೂರ್ತಿ ವಾದಿರಾಜ ಉಪಾಧ್ಯಾಯ ಕೊಲಕಾಡಿ ಹೇಳಿದ್ದಾರೆ.ಮೂಲ್ಕಿ ಕೆಎಸ್ ರಾವ್ ನಗರದ ಬಿಜಾಪುರ ಕಾಲೋನಿಯ ವೀರಕೇಸರಿ ತರುಣ ವೃಂದ ಮತ್ತು ಮಾತೃ ಬಳಗದ ವತಿಯಿಂದ ಕೆಎಸ್ ರಾವ್ ನಗರದ ಲಿಂಗಪ್ಪಯ್ಯ ಕಾಡು ನಾಗಬನದ ಬಳಿಯ ವೇದಿಕೆಯಲ್ಲಿ ನಡೆದ 15ನೇ ವರ್ಷದ ಯುಗಾದಿ ಉತ್ಸವ ಹಾಗೂ 5ನೇ ವರ್ಷದ ಸಾರ್ವಜನಿಕ ಸತ್ಯನಾರಾಯಣ ಪೂಜೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಅವರು ಮಾತನಾಡಿದರು.
ಬಜರಂಗದಳ ಜಿಲ್ಲಾ ಸಂಯೋಜಕ ನವೀನ್ ಮೂಡುಶೆಡ್ಡೆ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಧಾಮ ಫೌಂಡೇಶನ್ ಅಧ್ಯಕ್ಷ ಸುನಿಲ್ ಆಳ್ವ ವಹಿಸಿದ್ದರು. ಮೂಲ್ಕಿ ನ. ಪಂ.ಅಧ್ಯಕ್ಷ ಸತೀಶ್ ಅಂಚನ್, ಮಂಗಳೂರು ಮಂಜಣ್ಣ ಸೇವಾ ಬ್ರಿಗೇಡ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಮನೋಜ್ ಕೋಡಿಕೆರೆ, ವಿಜಯ ರೈತ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಂಗನಾಥ ಶೆಟ್ಟಿ, ಉದ್ಯಮಿ ಪ್ರಶಾಂತ್ ಕಾಂಚನ್, ವೀರಣ್ಣ ಅರಳಗುಂಡಿ, ವೀರ ಕೇಸರಿ ತರುಣ ವೃಂದದ ಅಧ್ಯಕ್ಷ ಶರಣ್ ವಾಲಿಕರ್, ಮಾತೃ ಬಳಗದ ಅಧ್ಯಕ್ಷೆ ವಿಶಾಲಾಕ್ಷಿ ಕೆ ಹಿರೇಮಠ ಮತ್ತಿತರರು ಉಪಸ್ಥಿತರಿದ್ದರು.ಹಿಂದೂ ಜಾಗರಣ ವೇದಿಕೆ ಪ್ರಾಂತ ಕಾರ್ಯಕಾರಣಿ ಸದಸ್ಯ ಶ್ರೀಕಾಂತ್ ಶೆಟ್ಟಿ, ಕಾರ್ಕಳ ಅವರಿಂದ ದಿಕ್ಸೂಚಿ ಭಾಷಣ ನಡೆಯಿತು. ಶರಣ್ ವಾಲಿಕರ್ ಸ್ವಾಗತಿಸಿದರು. ಸಂತೋಷ್ ನಂಬಿಯಾರ್ ಹಾಗೂ
ಮಾತೃ ಬಳಗದ ಪ್ರಧಾನ ಕಾರ್ಯದರ್ಶಿ ಸಂಗೀತ ನಿರೂಪಿಸಿದರು.