ವೀರಶೈವ, ಲಿಂಗಾಯತ ಸಮಾಜದ ಅಭಿವೃದ್ಧಿಗೆ ಯತ್ನ

| Published : Aug 15 2024, 01:50 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ ಲಿಂಗಾಯತರಲ್ಲಿಯೇ ಲಿಂಗಾಯತ ಮತ್ತು ವೀರಶೈವ ಎಂಬ ಭಿನ್ನಾಭಿಪ್ರಾಯಗಳಿದ್ದು, ಅವುಗಳನ್ನು ಸರಿಪಡಿಸಲು ತಮ್ಮ ಅಧಿಕಾರದ ಅವಧಿಯಲ್ಲಿ ಯತ್ನಿಸುವುದಾಗಿ ತಾಲೂಕು ವೀರಶೈವ ಮಹಾಸಭಾದ ನೂತನ ಅಧ್ಯಕ್ಷ ವೆಂಕನಗೌಡ ಪಾಟೀಲ ಹೇಳಿದರು. ಪಟ್ಟಣದ ಹುಡ್ಕೊ ಬಡಾವಣೆಯಲ್ಲಿರುವ ಹಸಿರು ತೋರಣ ಉದ್ಯಾನವನದಲ್ಲಿ ಹಸಿರು ತೋರಣ ಗೆಳೆಯರ ಬಳಗ ಹಮ್ಮಿಕೊಂಡ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಧಿಕಾರ ಸಿಕ್ಕಾಗ ಅದನ್ನು ಬಳಸಿಕೊಂಡು ಅಗತ್ಯ ಇರುವವರಿಗೆ ಸಹಾಯ ಮಾಡಬೇಕು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಲಿಂಗಾಯತರಲ್ಲಿಯೇ ಲಿಂಗಾಯತ ಮತ್ತು ವೀರಶೈವ ಎಂಬ ಭಿನ್ನಾಭಿಪ್ರಾಯಗಳಿದ್ದು, ಅವುಗಳನ್ನು ಸರಿಪಡಿಸಲು ತಮ್ಮ ಅಧಿಕಾರದ ಅವಧಿಯಲ್ಲಿ ಯತ್ನಿಸುವುದಾಗಿ ತಾಲೂಕು ವೀರಶೈವ ಮಹಾಸಭಾದ ನೂತನ ಅಧ್ಯಕ್ಷ ವೆಂಕನಗೌಡ ಪಾಟೀಲ ಹೇಳಿದರು.

ಪಟ್ಟಣದ ಹುಡ್ಕೊ ಬಡಾವಣೆಯಲ್ಲಿರುವ ಹಸಿರು ತೋರಣ ಉದ್ಯಾನವನದಲ್ಲಿ ಹಸಿರು ತೋರಣ ಗೆಳೆಯರ ಬಳಗ ಹಮ್ಮಿಕೊಂಡ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಧಿಕಾರ ಸಿಕ್ಕಾಗ ಅದನ್ನು ಬಳಸಿಕೊಂಡು ಅಗತ್ಯ ಇರುವವರಿಗೆ ಸಹಾಯ ಮಾಡಬೇಕು. ಬೆಂಗಳೂರಿನಲ್ಲಿರುವ ವೀರಶೈವ ಮಹಾಸಭಾದ ಕೇಂದ್ರ ಘಟಕದಲ್ಲಿ ವಿದ್ಯಾರ್ಥಿಗಳಿಗೆಂದು ಉನ್ನತ ಅಭ್ಯಾಸದ ತರಬೇತಿಗಳು, ವಿದ್ಯಾರ್ಥಿ ಕಲ್ಯಾಣ ನಿಧಿ, ಶಿಷ್ಯ ವೇತನ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾರ್ಗದರ್ಶನ ಲಭ್ಯವಿದ್ದು, ಅದನ್ನು ವಿಜಯಪುರದ ಜಿಲ್ಲಾ ಘಟಕಕ್ಕೆ ಹಾಗೂ ಮುದ್ದೇಬಿಹಾಳಕ್ಕೆ ತಂದು ವೀರಶೈವ ಹಾಗೂ ಲಿಂಗಾಯತ ಸಮಾಜದ ಅಭಿವೃದ್ಧಿಗೆ ಯತ್ನಿಸುವುದಾಗಿ ತಿಳಿಸಿದರು.ವಿಜಯಪುರ ಜಿಲ್ಲಾ ಭಾರತೀಯ ಜನತಾ ಪಕ್ಷದ ವೈದ್ಯಕೀಯ ಪ್ರಕೋಷ್ಠದ ಜಿಲ್ಲಾ ಸಂಚಾಲಕ ಡಾ.ವೀರೇಶ ಪಾಟೀಲ ಮಾತನಾಡಿ, ಸಾರ್ವಜನಿಕ ಸಂಘ, ಸಂಸ್ಥೆಗಳು ಮಾಡುವ ಸನ್ಮಾನಗಳು, ಸಮಾಜ ನಮ್ಮ ಮೇಲಿಟ್ಟಿರುವ ನಂಬಿಕೆ ಹಾಗೂ ಜವಾಬ್ದಾರಿ ನೆನಪಿಸುತ್ತವೆ. ಸನ್ಮಾನಗಳು ಹುಟ್ಟಿದ ಊರಿನಲ್ಲಿ, ಗೆಳೆಯರ ಮಧ್ಯೆ ನಡೆದರೆ ಹೆಚ್ಚು ಖುಷಿ, ಸಮಾಧಾನ ಸಿಗುತ್ತದೆ ಎಂದರು.ತೋರಣ ಗೆಳೆಯರ ಬಳಗದ ಅಧ್ಯಕ್ಷ ಡಾ.ವೀರೇಶ ಇಟಗಿ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಗೆಳೆಯರು ಮಾಡಿದ ಸಾಧನೆಗಳು ನಮ್ಮದೇ ಸಾಧನೆಗಳೆಂದು ಗುರುತಿಸಿ, ಗೌರವಿಸಿದರೆ ಹೆಮ್ಮೆ ಆಗುತ್ತದೆ ಎಂದರು.ಕಾರ್ಯಕ್ರಮದಲ್ಲಿ ಹುಬ್ಬಳ್ಳಿಯ ಚೇಂಬರ್ ಆಫ್ ಕಾಮರ್ಸ್ ಸಂಸ್ಥೆಯಿಂದ ಉದ್ಯೋಗ ರತ್ನ ಪ್ರಶಸ್ತಿ ಪಡೆದ ಉದ್ಯಮಿ ಶರಣು ಅಯ್ಯಪ್ಪ ಸಜ್ಜನ, ಜೆ.ಸಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರವಿ ತಡಸದ, ವರಮಾರುತೇಶ್ವರ ದೇವಸ್ಥಾನ ಸಮಿತಿಯ ಅಧ್ಯಕ್ಷ ವಿಶ್ವನಾಥ ನಾಗಠಾಣ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಜಿಲ್ಲಾ ಅತ್ಯುತ್ತಮ ಪತ್ರಕರ್ತ ಪ್ರಶಸ್ತಿಗೆ ಭಾಜನರಾದ ಶೇಖ್ ಲಾಡ್ಲೇಮಶ್ಯಾಕ್ ನದಾಫ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಮಹಾಂತಪ್ಪ ನಾವದಗಿ, ಹಸಿರು ತೋರಣ ಗೆಳೆಯರ ಬಳಗದ ಮಾಜಿ ಅಧ್ಯಕ್ಷರಾದ ಕೆ.ಆರ್.ಕಾಮಟೆ, ಅಶೋಕ ರೇವಡಿ, ಬಿ.ಎಸ್.ಮೇಟಿ, ರವಿ ಗೂಳಿ, ರಾಜಶೇಖರ ಕಲ್ಯಾಣಮಠ, ಕಾರ್ಯದರ್ಶಿ ಬಿ.ಎಚ್.ಬಳಬಟ್ಟಿ, ಉಪಾಧ್ಯಕ್ಷ ಬಸವರಾಜ ಬಿಜ್ಜೂರ, ಮಲ್ಲಿಕಾರ್ಜುನ ಬಾಗೇವಾಡಿ, ತಾಲೂಕು ಪಂಚಾಯತಿ ಮಾಜಿ ಸದಸ್ಯ ಶ್ರೀಶೈಲ ಮರೋಳ, ಅಮರೇಶ ಗೂಳಿ, ಸುರೇಶ ಕಲಾಲ, ಬಿ.ಎಂ.ಪಲ್ಲೇದ, ವಿಲಾಸರಾವ್ ದೇಶಪಾಂಡೆ, ಡಾ.ವಿಜಯಕುಮಾರ ಗೂಳಿ, ಸೋಮಶೇಖರ ಚೀರಲದಿನ್ನಿ, ಎಚ್.ವೈ.ಪಾಟೀಲ ವಕೀಲರು, ಜಿ.ಎಂ.ಹುಲಗಣ್ಣಿ, ಪರಶುರಾಮ ಕೂಡಗಿ, ಪುಟ್ಟು ಕಡಕೋಳ, ವಿನಯಕುಮಾರ ಹಿರೇಮಠ, ಸಂಗಣ್ಣ ಕಡಿ, ಎಂ.ಎಸ್.ತೆಗ್ಗಿನಮಠ, ನಾಗರಬೆಟ್ಟ ಸೇರಿದಂತೆ ವರಮಾರುತೇಶ್ವರ ದೇಗುಲ ಸಮಿತಿ ಹಾಗೂ ಹಸಿರು ತೋರಣ ಬಳಗದ ಸದಸ್ಯರು ಇದ್ದರು. ರವಿ ಗೂಳಿ ಸ್ವಾಗತಿಸಿದರು. ಸಂಚಾಲಕ ಮಹಾಬಲೇಶ್ವರ ಗಡೇದ ನಿರೂಪಿಸಿದರು. ನಾಗಭೂಷಣ ನಾವದಗಿ ವಕೀಲರು ವಂದಿಸಿದರು.